Chief Editor
Manohar. R (Manu)
Photo Journalist
chitrataramanu@gmail.com
+91 9845549026
ದಾಖಲೆ ಬೆಲೆಗೆ `s/o ಮುತ್ತಣ್ಣ` ಆಡಿಯೋ ರೈಟ್ಸ್ ಹಾಡುಗಳಿಗೆ ಮನಸೋತ A2 ಸಂಸ್ಥೆ
Posted date: 15 Tue, Oct 2024 08:27:53 PM
ದೇವರಾಜ್ ಎರಡನೇ ಪುತ್ರ ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ‌ ಪೈಕಿ ಇತ್ತೀಚೆಗೆ ಅನೌನ್ಸ್ ಆದ, ಪ್ರಣಂ ನಟನೆಯ `s/o ಮುತ್ತಣ್ಣ` ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಪ್ರಣಂ ಈ ಸಿನಿಮಾ ಮೂಲಕ ಹಿಟ್ ಕೊಡ್ತಾರೆ ಅನ್ನೋ ಭರವಸೆ ಕೂಡ ಹೆಚ್ಚಾಗಿದೆ. ಇದೇ ಸಮಯದಲ್ಲಿ `s/o ಮುತ್ತಣ್ಣ` ಆಡಿಯೋ ದಾಖಲೆ ಬೆಲೆಗೆ A2 ಸಂಸ್ಥೆಗೆ ಮಾರಾಟವಾಗಿದ್ದು, ಸಿನಿಮಾದ ಮೇಲಿರೋ ನಿರೀಕ್ಷೆ ದುಪ್ಪಟ್ಟಾಗಿದೆ.

`s/o ಮುತ್ತಣ್ಣ` ಸಿನಿಮಾ ಸೆಟ್ಟೇರಿದಾಗಿನಿಂದಲೂ ಎಲ್ಲರ ಗಮನ ಸೆಳೀತಿದೆ. ಮಗ ಪ್ರಣಂ ದೇವರಾಜ್ ಹೊಸ ಚಿತ್ರಕ್ಕೆ ದೇವರಾಜ್ ಶುಭ ಹಾರೈಸಿದ್ರು , `s/o ಮುತ್ತಣ್ಣ` ಮೂಲಕ ಶ್ರೀಕಾಂತ್ ಹುಣಸೂರ್  ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಪ್ರಣಂಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ಶೀರ್ಷಿಕೆ ಹೇಳುತ್ತಿರುವಂತೆ ಅಪ್ಪ-ಮಗನ ಭಾಂದವ್ಯ ಈ ಸಿನಿಮಾದಲ್ಲಿ‌ ಕಟ್ಟಿಕೊಡಲಾಗಿದೆ. ಇನ್ನೂ ಸಿನಿಮಾದಲ್ಲಿ ಹಲವು ಹಿರಿಯ ನಟರು ಪಾತ್ರ ಮಾಡ್ತಿರೋದು ವಿಶೇಷ.

ಪುರಾತನ‌ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಸಚ್ಚಿನ್ ಬಸ್ರೂರು ಸಂಗೀತವಿರುವ `s/o ಮುತ್ತಣ್ಣ` ಸಿನಿಮಾದ ಹಾಡುಗಳು ದಾಖಲೆ ಬೆಲೆಗೆ ಅಂದ್ರೆ ಅಂದಾಜು 47ಲಕ್ಷಕ್ಕೆ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಹೇಳಲಾಗ್ತಿದೆ. 
ಯೋಗರಾಜ್ ಭಟ್ರು, ಜಯಂತ್ ಕಯ್ಕಿಣಿ, ಕವಿರಾಜ್, ಚೇತನ್ ಕುಮಾರ್ ಅವರ ಸಾಹಿತ್ಯ ಈ ಸಿನಿಮಾದ ಹಾಡುಗಳಿಗಿದೆ. ಸದ್ಯ ಸಂಗೀತಕ್ಕೆ ಇಷ್ಟು ಪವರ್ ಇದ್ಮೇಲೆ A2 ಸಂಸ್ಥೆ ಹಾಡುಗಳಿಗೆ ಫಿದಾ ಆಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದಾಖಲೆ ಬೆಲೆಗೆ `s/o ಮುತ್ತಣ್ಣ` ಆಡಿಯೋ ರೈಟ್ಸ್ ಹಾಡುಗಳಿಗೆ ಮನಸೋತ A2 ಸಂಸ್ಥೆ - Chitratara.com
Copyright 2009 chitratara.com Reproduction is forbidden unless authorized. All rights reserved.