Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹೊಂಬಾಳೆ ಫಿಲಂಸ್‌ ನಿರ್ಮಿಸಿರುವ, ಶ್ರೀಮುರಳಿ ನಟನೆಯ ಬಘೀರ ಚಿತ್ರದ ರುಧಿರ ಧಾರ ಹಾಡು ಬಿಡುಗಡೆ
Posted date: 18 Fri, Oct 2024 01:20:44 PM
ರೋರಿಂಗ್‌ ಸ್ಟಾರ್‌ ಶ್ರೀಮುರಳಿ ನಾಯಕನಾಗಿ ನಟಿಸಿರುವ ಬಘೀರ ಸಿನಿಮಾದ ಮೊದಲ ಹಾಡು "ರುಧಿರ ಧಾರ" ಬಿಡುಗಡೆ ಆಗಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ರಿಲೀಸ್‌ ಆಗಿದೆ. ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ವೀಕ್ಷಕರಿಂದಲೂ ಮೆಚ್ಚುಗೆ ಸಿಕ್ಕಿದೆ.
 
ರುಧಿರ ಧಾರ ಶೀರ್ಷಿಕೆ ಗೀತೆಗೆ ಅನಿರುದ್ಧ ಶಾಸ್ತ್ರೀ ಸಾಹಿತ್ಯ ಬರೆಯುವುದರ ಜತೆಗೆ ಹಾಡಿಗೆ ಅವರೇ ಧ್ವನಿ ನೀಡಿದ್ದಾರೆ. ಅಜನೀಶ್‌ ಲೋಕನಾಥ್‌ ಈ ಸಂಗೀತ ನಿರ್ದೇಶನ ಮಾಡಿದ್ದು, ಹೊಸ ಬಗೆಯ ಸಂಗೀತ ಕೇಳುಗರಿಗೆ ವಿಶೇಷ ಎನಿಸುತ್ತಿದೆ. 
 
ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಬಘೀರ ಸಿನಿಮಾಕ್ಕೆ, ನವೀನ್ ಕುಮಾರ್ ಛಾಯಾಗ್ರಹಣವಿದೆ. ಪ್ರಶಾಂತ್ ನೀಲ್ ಶಕ್ತಿಶಾಲಿ ಕಥೆ ಬರೆದಿದ್ದಾರೆ. ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇದೇ ಅಕ್ಟೋಬರ್ 31ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೊಂಬಾಳೆ ಫಿಲಂಸ್‌ ನಿರ್ಮಿಸಿರುವ, ಶ್ರೀಮುರಳಿ ನಟನೆಯ ಬಘೀರ ಚಿತ್ರದ ರುಧಿರ ಧಾರ ಹಾಡು ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.