Chief Editor
Manohar. R (Manu)
Photo Journalist
chitrataramanu@gmail.com
+91 9845549026
ಭಯ ಹುಟ್ಟಿಸುವ ಮಾಲ್, ಭಯ ಹೋಗಲಾಡಿಸುವ ಮಾಂತ್ರಿಕ
Posted date: 19 Sat, Oct 2024 10:47:16 AM
ದೆವ್ವ ಭೂತಗಳ  ಬಗ್ಗೆ  ಜನರಲ್ಲಿರುವ  ಭಯ, ಆತಂಕ, ಮೂಢನಂಬಿಕೆವನ್ನು ತೊಡೆದುಹಾಕಬೇಕು, ಅದರ ಹಿಂದಿರುವ ಸತ್ಯವನ್ನು ಜನರಿಗೆ ತಿಳಿಸಬೇಕೆಂದು ಹುಟ್ಟಿಕೊಂಡಿರುವುದೇ  ಸಿಟಿಆರ್ ಆರ್ಗನೈಜೇಶನ್. ಇದರ ಕರ್ತೃ ವ್ಯಾಸವಾನ್ ಕೃಷ್ಣ (ವ್ಯಾನವರ್ಣ ಜಮ್ಮುಲ). ತಮ್ಮ ಮನೆಯಲ್ಲಿ‌ ದೆವ್ವ, ಭೂತ ಇದೆಯೆಂದು ಹೇಳಿಕೊಂಡು ಬರುವವರ ಅನುಮಾನ ಪರಿಹರಿಸಿ, ಅದರ ಬಗ್ಗೆ ರಿಯಾಲಿಟಿ ತಿಳಿಸಿಕೊಡುವುದೇ  ವ್ಯಾಸವಾನ್ ಕೃಷ್ಣನ ಕೆಲಸ. ಈತ ಒಂದು ಭೂತ ಬಂಗಲೆಯಲ್ಲಿರುವ ದೆವ್ವದ  ರಹಸ್ಯವನ್ನು ಬೇಧಿಸುವ  ಕಥೆಯನ್ನು ಮಾಂತ್ರಿಕ ಚಿತ್ರದಲ್ಲಿ  ಕುತೂಹಲಕರವಾಗಿ, ರೋಚಕ ತಿರುವುಗಳೊಂದಿಗೆ   ನಿರೂಪಿಸಿದ್ದಾರೆ ನಿರ್ದೇಶಕ  ವ್ಯಾನವರ್ಣ ಜಮ್ಮುಲ.
 
ದೆವ್ವ, ಭೂತ ಅನ್ನೋದು ಇದೆಯೋ, ಅಥವಾ ಅದೆಲ್ಲ ನಮ್ಮ‌ಕಲ್ಪನೆಯೋ  ಎಂಬುದರ ಹಿಂದಿರುವ ಸತ್ಯವನ್ನು ಶೋಧಿಸುತ್ತ ಹೊರಟ ಘೋಸ್ಟ್ ಹಂಟರ್ ವ್ಯಾಸವಾನ್ ಕೃಷ್ಣ,ಅತ್ಯಂತ ಕ್ಲಿಷ್ಟಕರವಾದ ಭಯ ಹುಟ್ಟಿಸುವ ಮಾರ್ನುಡಿ ಮಾಲ್ ಪ್ರಕರಣವನ್ನು ಹೇಗೆ ಬಯಲಿಗೆಳೆಯುತ್ತಾನೆ ಎಂಬುದೇ  ಮಾಂತ್ರಿಕ ಚಿತ್ರದ ಕಥಾಹಂದರ.  
 
ನಿಮಿಷಾಪುರ ಎಂಬ ಊರಲ್ಲಿ ಪಾಳು ಬಿದ್ದಿರುವ ಮಾರ್ನುಡಿ ಮಾಲ್  ಬಿಲ್ಡಿಂಗ್ ಕುರಿತಂತೆ ಅಲ್ಲಿನ ಜನ ನಿಮಿಷಕ್ಕೊಂದು ಕಥೆ ಕಟ್ಟುತ್ತಿರುತ್ತಾರೆ. ಆ ಮಾಲ್ ಒಳಗೆ ಹೋದವರಿಗೆ  ಚಿತ್ರ ವಿಚಿತ್ರ ಶಬ್ದಗಳು ಕೇಳುವುದು, ಯಾರೋ ಕರ್ಕಶವಾಗಿ ಕೂಗುವುದು ಕಿವಿಗೆ ಬೀಳುತ್ತದೆ. ಆ ಭಯಾನಕ ಶಬ್ದ ಕೇಳಿದೊಡನೆ ಭಯಭೀತರಾಗಿ, ಜೀವ ಉಳಿಸಿಕೊಂಡರೆ ಸಾಕೆಂದು  ಅಲ್ಲಿಂದ ಪಲಾಯನಗೈಯುತ್ತಾರೆ.  
 
ಪಾಳು ಬಿದ್ದ  ಆ ಮಾಲನ್ನು  ಚಂದ್ರಶೇಖರ ಒಡೆಯರ್ ಎಂಬ  ಶ್ರೀಮಂತ ವ್ಯಕ್ತಿ  ಖರೀದಿಸಿರುತ್ತಾನೆ. ಆದರೆ ಅಲ್ಲಿಗೆ ಹೋದವರಲ್ಕಿ ಕೆಲವರು  ಹೆದರಿಕೆಯಿಂದ ಸತ್ತೇ ಹೋಗಿದ್ದಾರೆ ಎಂಬುದು  ಅಲ್ಲಿನ  ಜನರ ನಂಬಿಕೆ, ಮಾರ್ನುಡಿ ಮಾಲ್ ಹಮಾರಾ ಹೈ ಎನ್ನುತ್ತ  ಮಾಲ್ ಒಳಗೆ  ಹೋದ ವಿವಾನ್, ಬ್ರಮ್ಮನ್ ಎಂಬ  ಇಬ್ಬರು ಯುವಕರು,  ಇಬ್ಬರು ಯುವತಿಯರು ಭಯಂಕರವಾದ ಶಬ್ದ ಕೇಳಿ ಹೆದರಿಕೊಂಡು ಆಚೆ   ಬರುತ್ತಾರೆ. ಸಿಟಿಆರ್ ಬಗ್ಗೆ ಕೇಳಿದ್ದ ಚಂದ್ರಶೇಖರ್ ಒಡೆಯರ್  ಆ ಮಾಲ್  ಹಿಂದಿರುವ  ರಹಸ್ಯವನ್ನು  ಹತ್ತು ದಿನಗಳ ಒಳಗೆ  ಬಯಲಿಗೆಳೆಯುವ ಜವಬ್ದಾರಿಯನ್ನು  ವ್ಯಾಸವಾನ್ ಕೃಷ್ಣನಿಗೆ ನೀಡುತ್ತಾರೆ.
 
ಮಾಲ್ ಸಿಕ್ರೇಟ್ ರಿವೀಲ್ ಮಾಡಲು ವ್ಯಾಸವಾನ್  ಕೃಷ್ಣ  ಹೊರಡುತ್ತಾನೆ. ಆ ಮಾಲ್‌ನೊಳಗೆ ಹೋದ  ಆತ ಆ ಜಾಗದ ಹಿಂದಿರುವ ಒಂದೊಂದೇ ಮಾಹಿತಿಗಳನ್ನು ಕಲೆಹಾಕುತ್ತಾನೆ. ಒಂದು ಪೆನ್ ಆತನಿಗೆ ಮಾಲ್ ಬಗ್ಗೆ  ಮಹತ್ವದ ಸುಳಿವೊಂದನ್ನು   ನೀಡುತ್ತದೆ,   ಆ ಮಾಲ್ ಮೂಲ‌ಮಾಲೀಕ  ಸೈನಾಶ್.  ಯುಎಸ್‌ಗೆ ಹೋಗಬೇಕೆಂದು ತನ್ನ ತಂದೆಯ 25 ಕೋಟಿ ಬೆಲೆಬಾಳುವ  ಜಮೀನನ್ನು ಮಾರಲು ಮುಂದಾಗುತ್ತಾನೆ,  ತನ್ನ  ಪ್ರಾಪರ್ಟಿಯನ್ನು  ಸೇಲ್ ಮಾಡಲು  ಫೇಸ್‌ಬುಕ್‌ನಲ್ಲಿ ಆಡ್ ಹಾಕ್ತಾನೆ. ಆ ಜಮೀನಿಗೆ 20 ಕೋಟಿ  ಬೆಲೆ ಇಡುತ್ತಾನೆ. ನಂತರ ನಾನಕರಾಮ್ ಎಂಬ ಬಿಲ್ಡರ್ ಮುಂದೆ ಬಂದು ಅಲ್ಲಿ ನಾನು ಅಲ್ಲಿ ಮಾಲ್ ಕಟ್ಟುತ್ತೇನೆ. ಬರುವ ಲಾಭವನ್ನು ಇಬ್ಬರೂ ಶೇರ್ ಮಾಡಿಕೊಳ್ಳೋಣ ಎಂದು  ಆಸೆ ಹುಟ್ಟಿಸಿ, ಅಗ್ರಿಮೆಂಟ್ ಗೆ ಸಹಿ ಮಾಡಿಸಿಕೊಳ್ಳುತ್ತಾನೆ, ಮಾಲ್ ಕಟ್ಟಿದ ಮೇಲೆ ನಾನಕರಾಮ್  ಸೈನಾಶಿಗೆ ಉಲ್ಟಾ ಹೊಡೆಯುತ್ತಾನೆ. ಮನನೊಂದ ಸೈನಾಶಿ ಅದೇ ಮಾಲ್‌ನಲ್ಲಿ  ಸೂಸೈಡ್ ಮಾಡಿಕೊಂಡು  ದೆವ್ವದ ರೂಪದಲ್ಲಿ ಬಂದವರಿಗೆಲ್ಲ‌ ಕಾಟ ಕೊಡುತ್ತಿದ್ದಾನೆ ಎಂಬುದು  ಎಲ್ಲರ ನಂಬಿಕೆ.  ಆದರೆ ಅದರ ಹಿಂದಿರುವ ರಹಸ್ಯವೇ ಬೇರೆ ಇರುತ್ತದೆ, ಅದೇನೆಂದು ತಿಳಿಯಬೇಕಾದರೆ ನೀವು ಒಮ್ಮೆ ಥೇಟರಿಗೆ ಹೋಗಿ  ಮಾಂತ್ರಿಕ ಚಿತ್ರವನ್ನು ಕಣ್ತುಂಬಿಕೊಂಡು ಬರಬೇಕು. ವ್ಯಾನವರ್ಣ ಜಮ್ಮುಲ ಅವರು  ಘೋಸ್ಟ್ ಹಂಟರ್ ಪಾತ್ರವನ್ನು ಅಚ್ಚುಕಟ್ಟಾಗಿ  ನಿರ್ವಹಿಸಿದ್ದಾರೆ,  ನಿರ್ಮಾಣ, ನಿರ್ದೇಶನ ಸೇರಿದಂತೆ 8 ವಿಭಾಗದಲ್ಲಿ  ಕೆಲಸ ಮಾಡಿರುವ ವ್ಯಾನವರ್ಣ ಜಮ್ಮುಲ  ಚಿತ್ರಕ್ಕಾಗಿ ಸಾಕಷ್ಟು ಎಫರ್ಟ್ ಹಾಕಿರುವುದು ಎದ್ದು ಕಾಣುತ್ತದೆ,  ನಾಯಕಿಯರಾದ ರಾಧಿಕಾ ಮಾಲಿ ಪಾಟೀಲ ಹಾಗೂ ಮೈಥಿಲಿ ನಾಯಕ್ ಅವರ ಪಾತ್ರಗಳಿಗೆ  ಹೆಚ್ಚಿನ  ಅವಕಾಶವಿಲ್ಲ.  ಸ್ಟಾಲಿನ್ ಅವರ  ಬಿಜಿಎಂ  ಚಿತ್ರಕಥೆಗೆ ಪೂರಕವಾಗಿದೆ,  ಅನಿಲ್ ಆಂಟೋನಿ ಹಾಗೂ ರಮೇಶ್ ಮರ್ರಿಪಲ್ಲಿ  ಅವರು  ಚಿತ್ರದಲ್ಲಿ  ಉತ್ತಮ ಕಥೆಯ ಸಾಲು ಇದೆ  ಉತ್ತಮ ಸಂಗೀತದ ಹಾರರ್ ಎಫೆಕ್ಟ್ ಆಗಿರಬೇಕು ಮತ್ತು ಎಲ್ಲಾ ಉತ್ತಮ ಚಿತ್ರ ಉತ್ತಮವಾಗಿದ್ದರೆ ಕ್ಯಾಮೆರಾ ಕೆಲಸವು ಹೆಚ್ಚು ಸುಧಾರಿತವಾಗಿರಬೇಕು., ಹಾರರ್, ಥ್ರಿಲ್ಲರ್ ಅನುಭವ ಇಷ್ಟಪಡುವವರಿಗೆ  ಈ ಚಿತ್ರ ಉತ್ತಮ ಆಯ್ಕೆಯಾಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಭಯ ಹುಟ್ಟಿಸುವ ಮಾಲ್, ಭಯ ಹೋಗಲಾಡಿಸುವ ಮಾಂತ್ರಿಕ - Chitratara.com
Copyright 2009 chitratara.com Reproduction is forbidden unless authorized. All rights reserved.