ಲೇಖಕಿ ಭಾಗ್ಯ ಕೃಷ್ಣಮೂರ್ತಿ ಕಾದಂಬರಿ ಆಧಾರಿತ ಕಥೆ ಹೊಂದಿರುವ `ಶಾನುಭೋಗರ ಮಗಳು` ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣ ಪತ್ರ ನೀಡಿದ್ದಾರೆ. ಭುವನ್ ಫಿಲಿಂಸ್ ಲಾಂಛನದಲ್ಲಿ ಸಿ.ಎಂ.ನಾರಾಯಣ್ ನಿರ್ಮಾಣ, ಕೂಡ್ಲುರಾಮಕೃಷ್ಣ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಟಿಪ್ಪು ಸುಲ್ತಾನರ ಕಾಲದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ನಡೆದ ಕಾಲ್ಪನಿಕ ಕಥೆ ಇರಲಿದೆ.
ತಾರಾಗಣದಲ್ಲಿ ರಾಗಿಣಿಪ್ರಜ್ವಲ್, ನಿರಂಜನ್‌ಶೆಟ್ಟಿ, ಕಿಶೋರ್, ರಮೇಶ್‌ಭಟ್, ಸುಧಾಬೆಳವಾಡಿ, ವಾಣಿಶ್ರೀ, ಪದ್ಮವಾಸಂತಿ, ಶ್ರೀನಿವಾಸಮೂರ್ತಿ, ಅನನ್ಯ, ಜೋಸೈಮನ್, ರಂಜಿತ್‌ಕಾರ್ತಿಕ್, ಧರ್ಮನವೀನ್ ಮುಂತಾದವರು ನಟಿಸಿದ್ದಾರೆ. ಕವಿರಾಜ್-ಅರಸುಅಂತಾರೆ ಸಾಹಿತ್ಯದ ಗೀತೆಗಳಿಗೆ ಅಮರ್ ಕಂಹರ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಜೈಆನಂದ್, ಸಂಭಾಷಣೆ ಬಿ.ಎ.ಮಧು, ಸಂಖಲನ ಬಿ.ಎಸ್.ಕೆಂಪರಾಜು, ನಿರ್ವಹಣೆ ಮಂಜುನಾಥ್-ಕಿರಣ್ ಮಯೂರ್ ಅವರದಾಗಿದೆ.