Chief Editor
Manohar. R (Manu)
Photo Journalist
chitrataramanu@gmail.com
+91 9845549026
ದುಷ್ಟರ ಪಾಲಿಗೆ ಸಿಂಹಿಣಿಯಾದ ಶ್ರೀದುರ್ಗಾ....ರೇಟಿಂಗ್ : 3/5 ***
Posted date: 02 Sat, Nov 2024 06:41:54 PM
ನಿರ್ದೇಶಕ : ಗುರುಮೂರ್ತಿ,
ನಿರ್ಮಾಪಕ : ಜಿ,ಎಸ್.ಸತೀಶ್,
ಸಂಭಾಷಣೆ-ಸಾಹಿತ್ಯ: ಕಿನ್ನಾಳರಾಜ್,  
ಸಂಗೀತ : ಕೃಷ್ಣ  ಬಸ್ರೂರು,
ಛಾಯಾಗ್ರಹಣ : ವೀಣಾ  ನಂದಕುಮಾರ್,
ಸಂಕಲನ; ವೆಂಕಿ ಯುವಿಡಿ
ತಾರಾಗಣ : ಪ್ರಿಯಾಂಕ ಉಪೇಂದ್ರ, ಸುಮನ್, ಪವಿತ್ರಾ ಲೋಕೇಶ್,  ರೋಬೋ ಗಣೇಶ್, ಸೂರ್ಯಪ್ರಕಾಶ್, ಲೀಲಾ ಮೋಹನ್, ಗಿರಿಜಾ, ಗೀತಾ, ನಟರಾಜ್ ಪೇರಿ, ಚರಣ್ ಮತ್ತಿತರರು...
 
ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಇನ್‌ಸ್ಪೆಕ್ಟರ್ ಶ್ರೀದುರ್ಗಾ (ಪ್ರಿಯಾಂಕಾ ಉಪೇಂದ್ರ) ಹೆಸರು ಕೇಳಿದರೆ ರೌಡಿಗಳೆಲ್ಲ ಥರ ಥರ ನಡುಗುತ್ತಾರೆ. ಆಕೆಯ ಪ್ರಾಮಾಣಿಕ ನಡವಳಿಗೆ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿರುತ್ತದೆ.ಅದೇ ಕಾರಣಕ್ಕೆ ಅಲ್ಲಿಂದ    ಬೆಂಗಳೂರಿಗೆ ವರ್ಗವಾಗಿ ಬರುವ ಶ್ರೀದುರ್ಗಾ ಮೆಟ್ರೋ ಸಿಟಿಯಲ್ಲಿ  ಅವ್ಯಾಹತವಾಗಿ  ನಡೆಯುತ್ತಿರುವ ರೇಪ್ ಅಂಡ್ ಮರ್ಡರ್ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ.  ಮಹಿಳೆಯರು, ಮಕ್ಕಳೆನ್ನದೆ ಕ್ರೂರವಾಗಿ ಹಿಂಸಿಸಿ, ಹತ್ಯೆಗೈಯುವ ಕಾಮಪಿಪಾಸುಗಳನ್ನು ಹತೋಟಿಯಲ್ಲಿಟ್ಟು ಅಂಥವರ ಪಾಲಿಗೆ  ರಣಚಂಡಿಯಾಗುತ್ತಾಳೆ.
 
ಹುಬ್ಬಳ್ಳಿಯ ಠಾಣೆಯೊಂದರಲ್ಲಿ  ಕಾನ್ಸ ಟೇಬಲ್ ಆಗಿದ್ದ  ಶ್ರೀದುರ್ಗಾ, ಒಮ್ಮೆ ಉಗ್ರಗಾಮಿಗಳ ಮೇಲೆ ಪೊಲೀಸರು ಅಟ್ಯಾಕ್ ಮಾಡಿದ ಸಂದರ್ಭದಲ್ಲಿ ಅವರು ಪೊಲೀಸರನ್ನೆಲ್ಲ ಹೊಡೆದು ಹಾಕುತ್ತಾರೆ. ಆಗ  ಅವರ ಜತೆಗೇ ಇದ್ದ ಶ್ರೀದುರ್ಗಾ  ಧೈರ್ಯದಿಂದ  ಅವರನ್ನು ಎದುರಿಸಿ ನಿಂತು, ಆ ಸಮಯದಲ್ಲಿ ಜೀವ ಉಳಿಸುವುದೇ ಮುಖ್ಯವಾಗಿರುವುದರಿಂದ,  ಪಿಸ್ತೂಲ್ ಕೈಗೆತ್ತಿಕೊಂಡು  4 ಜನ ಉಗ್ರಗಾಮಿಗಳನ್ನು ಕೊಂದು ಎಲ್ಲರ ಪ್ರಾಣ ಉಳಿಸುತ್ತಾಳೆ. ಈಕೆಯ ಧೈರ್ಯ ಮೆಚ್ಚಿದ ಮೇಲಕಾರಿಗಳು  ಅದೇ ಕ್ಷಣದಿಂದ ಆಕೆಯನ್ನು ಇನ್ ಸ್ಪೆಕ್ಟರ್ ಹುದ್ದೆಗೆ ಪ್ರೊಮೋಟ್ ಮಾಡುತ್ತಾರೆ. ಅಲ್ಲಿಂದ ದುರ್ಗಾಳ ಬೇಟೆ ಶುರುವಾಗುತ್ತದೆ, ಅದ್ಹೇಗೆಂದರೆ ದುರ್ಗಾಳ ಹೆಸರೇಳಿದರೇ ನಿದ್ದೆಯಲ್ಲೂ ಸಹ ದುರುಳರು ಬೆಚ್ಚಿ ಬೀಳುವಂತಾಗುತ್ತದೆ, ಅದೇ ಸಮಯದಲ್ಲಿ  ಸ್ಥಳೀಯ ಎಂಲ್‌ಎ, ಕುಲಕರ್ಣಿ ಅವರ ಮಗ, ಪಿಸಿ ಮಗಳನ್ನೇ ಸಾರ್ವಜ‌ನಿಕವಾಗಿ ವಿವಸ್ತ್ರಗೊಳಿಸಿ ಅವಮಾನಿಸುತ್ತಾನೆ. ಇದು ತಿಳಿದ ದುರ್ಗಾ ಅತನನ್ನು ಕೂಡಲೆ ಅರೆಸ್ಟ್ ಮಾಡುತ್ತಾಳೆ. ಆತನನ್ನು ಬಿಡಿಸಿಕೊಂಡು ಬರಲು ಕುಲಕರ್ಣಿ ಸಾಕಷ್ಟು ಪ್ರಯತ್ನಿಸಿದರೂ ಆಗಲ್ಲ, ಕೊನೆಗೆ ಆಕೆಯನ್ನು ಬೇರೆ ಊರಿಗೆ ಟ್ರಾನ್ಸ್ ಫರ್ ಮಾಡಿಸಿದರಷ್ಟೇ ಮಗನನ್ನು ಹೊರತರಲು ಸಾಧ್ಯ ಎಂದರಿತ ಶಾಸಕ ಕುಲಕರ್ಣಿ, ಹೋಂ ಮಿನಿಸ್ಟರ್ ಮೇಲೆ ಒತ್ತಡ ಹಾಕಿ ದುರ್ಗಾಳನ್ನು ಬೆಂಗಳೂರಿನ ಕ್ರೈಂ  ಬ್ಯಾಂಚ್ ಗೆ  ಟ್ರಾನ್ಸ್ ಫರ್ ಮಾಡಿಸುತ್ತಾರೆ. ಆಗಲೇ ದುರ್ಗಾದೇವಿ  ಹುಬ್ಬಳ್ಳಿಯಿಂದ ಬೆಂಗಳೂರಿಗೆ  ಎಂಟ್ರಿ ಕೊಡುವುದು. ಕ್ರೈಮ್ ನಲ್ಲಿ  ಹುಬ್ಬಳ್ಳಿ  ನದಿಯಾದರೆ, ಬೆಂಗಳೂರು ಸಮುದ್ರವೇ ಇದ್ದಂತೆ. ಆದರೂ ದುರ್ಗಾ  ಮೆಟ್ರೋ ಸಿಟಿಯಲ್ಲಿ  ನಡೆಯುವ‌ ಕ್ರೈಂಗಳಿಗೆ  ಹಂತ ಹಂತವಾಗಿ ಬ್ರೇಕ್ ಹಾಕುತ್ತಾಳೆ. 
 
ಆದರೆ ಮೂವರು ದುರುಳರು ಅನಾಥಾಶ್ರಮದ ಮಕ್ಕಳಿಗೆ ಅನ್ನದಾತೆಯಾಗಿದ್ದ, ಅವರಿಗೆ ಅನ್ನಾಹಾರ ನೀಡುವ ಜತೆಗೆ, ಮೆಡಿಕಲ್ ಓದುತ್ತಲೇ ಆ ಮಕ್ಕಳಿಗೆ ದೃಷ್ಟಿ ನೀಡಲು ಪ್ರಯತ್ನಿಸುತ್ತಿದ್ದ ಯುವತಿಯನ್ನ ಕಿಡ್ನಾಪ್ ಮಾಡಿ ಅತ್ಯಂತ ಕ್ರೂರವಾಗಿ ಕೊಲೆ ಮಾಡುತ್ತಾರೆ. ಆ ನೀಚರನ್ನು ಹುಡುಕಿದ ದುರ್ಗಾಳಿಗೆ,  ಡಾಕ್ಟರ್(ಪವಿತ್ರಾ ಲೋಕೇಶ್) ಮಗನೂ ಸಹಕಾರಿಯಾಗಿ ನಿಲ್ಲುತ್ತಾನೆ. ಕೊನೆಗೂ ಆ ಅತ್ಯಾಚಾರಿಗಳನ್ನು  ಶ್ರೀದುರ್ಗಾ ಪತ್ತೆ ಹಚ್ಚುತ್ತಾಳಾ, ಅಥವಾ ಪ್ರಭಾವಿಗಳ ಕೃಪೆಯಿಂದ ಅವರೆಲ್ಲ ತಪ್ಪಿಸಿಕೊಳ್ತಾರಾ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಪ್ರಿಯಾಂಕಾ ಉಪೇಂದ್ರ ಅವರು ಮೊದಲಬಾರಿಗೆ ಪೂರ್ಣ ಪ್ರಮಾಣದ ಆಕ್ಷನ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ,  ಕೆಲ ದೃಶ್ಯಗಳಲ್ಲಿ ಅವರ ಮುಖದಲ್ಲಿ ಪೊಲೀಸ್ ಗತ್ತು ಇನ್ನಷ್ಟು ಇರಬೇಕಿತ್ತು, ಅದು ಬಿಟ್ಟರೆ ತಮಗೆ ಸಿಕ್ಕ  ಅವಕಾಶದಲ್ಲಿ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಮಂಗಳಮುಖಿ ಪಾತ್ರದಲ್ಲಿ ರೋಬೋ ಗಣೇಶ್ ಉತ್ತಮ ಅಭಿನಯ ನೀಡಿದ್ದಾರೆ. ಚಿತ್ರದ ಕ್ಯಾಮೆರಾ ವರ್ಕ್ ಉತ್ತಮವಾಗಿದೆ. ನಿರ್ದೇಶಕ ಗುರುಮೂರ್ತಿ ಪ್ರೇಕ್ಷಕರಿಗೆ ಬೋರಾಗದಂತೆ  ಇಡೀ ಚಿತ್ರವನ್ನು ನಿರೂಪಿಸಿಕೊಂಡು ಹೋಗಿದ್ದಾರೆ, ಆಕ್ಷನ್ ಪ್ರಿಯರ ಕಣ್ಣಿಗಂತೂ  ಉಗ್ರಾವತಾರ ಹಬ್ಬ ಎನ್ನಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದುಷ್ಟರ ಪಾಲಿಗೆ ಸಿಂಹಿಣಿಯಾದ ಶ್ರೀದುರ್ಗಾ....ರೇಟಿಂಗ್ : 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.