ಭೂ ಸುಧಾರಣೆ ಕಾಯ್ದೆ ಸೇರಿದಂತೆ ಹಲವು ಸಾಮಾಜಿಕ ವಿಷಯವನ್ನು ಮುಂದಿಟ್ಟುಕೊಂಡು ಕಟ್ಟಿಕೊಟ್ಟಿರುವ "ಧೀರ ಭಗತ್ ರಾಯ್ " ಚಿತ್ರ ಡಿಸೆಂಬರ್ 6 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ನಿರ್ದೆಶಕ ಕರ್ಣನ್ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ರಾಕೇಶ್ ದಳವಾಯಿ ನಾಯಕನಾಗಿ ಕಾಣಿಸಿಕೊಂಡಿದ್ದು ಸುಚರಿತಾ ನಾಯಕಿ. ಹೋರಾಟದ ಹಿನ್ನೆಲೆ ಇರುವ ಚಿತ್ರ ಬಿಡುಗಡೆ ದಿನಾಂಕವನ್ನು ತಂಡ ಪ್ರಕಟಿಸಿತು. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಕರ್ಣನ್ ಮಾತನಾಡಿ ಒಳ್ಳೆಯ ಸಿನಿಮಾ ಮಾಡಿದರೆ ಕನ್ನಡದ ಜನರು ಯಾವತ್ತೂ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ. ನಟ ದುನಿಯಾ ವಿಜಯ್ ಅವರು ಕಂಟೆಂಟ್ ನೋಡಿ ಇಷ್ಟ ಪಟ್ಟು ಸಹಕಾರ ನೀಡಿದ್ದಾರೆ. ಚಿತ್ರ ತಮಿಳಿನ ಜೈ ಭೀಮ್ , ವಿಸಾರಣೈ ನೆಲ ಮೂಲದ ಕಥೆ, ಆ ರೀತಿಯ ಸಿನಿಮಾ ನಮ್ಮದು. ಭೂ ಸುಧಾರಣಾ ಕಾಯ್ದೆ ಬಗ್ಗೇ ಹೇಳಿದ್ದೇವೆ. ಊರಲ್ಲಿ ಭೂ ಪಡೆಯಲು ಏನೆಲ್ಲಾ ಮಾಡ್ತಾರೆ ಎನ್ನಬಹುದು ಚಿತ್ರದ ಕಥೆ ಎಂದರು.
ಕೋರ್ಟ್ ಡ್ರಾಮದ ಕಥೆ. ಎಲ್ಲರುಗೂ ಇಷ್ಡ ಇಷ್ಡವಾಗಲಿದೆ. ಕಾಯ್ದೆ ಕಾನೂನು ಎಲ್ಲರಿಗೂ ಗೊತ್ತಾದಾಗ, ಆಗ ತಪ್ಪು ಮಾಡದೇ ಇರಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾಟೇರ ಚಿತ್ರ ನೆಲ ಮೂಲದ ಕಥೆಯನ್ನು ಚಿತ್ರದ ಮೂಲಕ ತೋರಿಸಲಾಗಿತ್ತು. ಅದರಲ್ಲಿ ಕೆಲ ಗೊಂದಲಗಳೂ ಇದಕ್ಕೆ ಅದಕ್ಕೆ ಧೀರ ಭಗತ್ ರಾಯ್ ಚಿತ್ರ ಉತ್ತರ ನೀಡಲಿದೆ ಎನ್ನುವ ನಂಬಿಕೆ. ನನ್ನೂರಿನಲ್ಲಿ ನಡೆದ ಘಟನೆಯನ್ನು ಆಧರಿಸಿ ಕಮರ್ಷಿಯಲ್ ವಿಷಯವನ್ನು ಮುಂದಿಟ್ಡುಕೊಂಡು ಸಿನಿಮಾ ಮಾಡಲಾಗಿದೆ ಎಂದರು.
ಕಂಟೆಂಟ್ ಜೊತೆಗೆ ಸಿನಿಮಾದಲ್ಲಿ ಲವ್, ರೋಮಾನ್ಸ್, ಪ್ರೀತಿ ಐದು ಸಾಹಸ ದೃಶ್ಯಗಳಿವೆ. ಒದೊಂದು ಆಕ್ಷನ್ ಸನ್ನಿವೇಶ್ ಹಿನ್ನೆಲೆ ಇದೆ. ವರ್ಷಕ್ಕೆ ಎರಡು ಸಿನಿಮಾ ಮಾಡುವ ಉದ್ದೇಶ ಚಿತ್ರ ಮಾಡುವ ಉದ್ದೇಶ ವಿದೆ. ಚಿತ್ರದಲ್ಲಿ ಬರುವ ಪಾತ್ರಗಳು ಎಲ್ಲರನ್ನೂ ಕಾಡುತ್ತದೆ ಎಂದು ಹೇಳಿಕೊಂಡರು.
ನಟ ರಾಕೇಶ್ ದಳವಾಯಿ ಮಾತನಾಡಿ, ಸಿನಿಮಾ ಮಾಡುತ್ತೇವೆ ಎಂದಾಗಲೇ ಆಶ್ಚರ್ಯ ಚಕಿತನಾಗಿದ್ದೆ. ಮಲೆಗಳಲ್ಲಿ ಮದುಮದುಳು ನಾಟಕದಲ್ಲಿ ನಾಯಿಗುತ್ತಿ ಎನ್ನುವ ಪಾತ್ರ ನೋಡಿ ನಿರ್ಮಾಪಕರು ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟರು. 2014 ರಲ್ಲಿ ಬೆಂಗಳೂರಿಗೆ ರಾಷ್ಟ್ರೀಯ ನಾಟಕ ಶಾಲೆ ಎನ್ ಎಸ್ ಡಿ ಬಂದ ಮೊದಲ ತಂಡದ ವಿದ್ಯಾರ್ಥಿಯಾಗಿದ್ದೆ. 10 ವರ್ಷದಲ್ಲಿ 30 ನಾಟಕ, ಬೀದಿ ನಾಟಕದಲ್ಲಿ ಕಾಣಿಸಿಕೊಂಡಿದೆ. ಸಿನಿಮಾದಲ್ಲಿ ಸಿಕ್ಕರೆ ನಟಿಸುವ ಆಸೆ ಇತ್ತು.ಮೊದಲ ಸಿನಿಮಾದಲ್ಲಿ ನಾಯಕನಾಗುವ ಆಸೆ ಈಡೇರಿದೆ. ಜನ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ ಚಿತ್ರದಲ್ಲಿ ವಕೀಲನಪಾತ್ರ ಮಾಡಿದ್ದೇನೆ. ಪಾತ್ರಕ್ಕೆ ಅಳವಡಿಸಿಕೊಂಡು ಮಾಡಿದ್ದೇವೆ ಎಙದು ಮಾಹಿತಿ ಹಂಚಿಕೊಂಡರು.
ನಟಿ ಸುಚರಿತಾ ಮಾತನಾಡಿ, ಸಿನಿಮಾ ಜರ್ನಿ ಆರಂಭ. ಮೊದಲು ನಿರೂಪಣೆ ಮಾಡುತ್ತಿದ್ದೆ ಆಗ ನಿರ್ದೇಶಕರು ಪರಿಚಯವಾಗಿತ್ತು. ಎಂಬಿಎ ಮಾಡಿದ್ದೇನೆ. ಸಾವಿತ್ರಿ ಎನ್ನುವ ಪಾತ್ರ . ಹೊಸತನದಿಂದ ಮೂಡಿಬಂದಿಧ. ನಿರ್ದೇಶಕರು ಕುಟುಂಬದ ಜೊತೆ ಮಾತನಾಡಿದರು. ಕಥೆ ಹೇಳಿ ಎಲ್ಲರೂ ಇಷ್ಟಪಟ್ಟರು. ಕಥೆ ಹೇಳಿದ ರೀತಿ ಇಷ್ಡವಾಯಿತು. ನೈಜ ಘಟನೆ ಮುಂದಿಟ್ಟುಕೊಂಡು ಸಿನಿಮಾ ಮಾಡಲಾಹಗಿದೆ.
ಯಾವುದೇ ತರಬೇತಿ ಇರಲಿಲ. ಇಡೀ ತಂಡ ಸಹಕಾರ ನೀಡಿ. ರಾಕೇಶ್ ಅಂದಾಕ್ಷಣ ಭಯವಾಯಿತು. ರಾಕೇಶ್ ಅವರ ಜೊತೆ ಮಾತನಾಡಿದೆ. ಚಿತ್ರದಲ್ಲಿ ಸಾಕಷ್ಟು ಹೇಳಿಕೊಟ್ಟರು. ಹೇಳಿಕೊಟ್ಟು , ಹೊಸ ಡೈಲಾಗ್ ಪ್ರತಿ ಸಲ ಎಲ್ಲರೂ ಸಹಕಾರ ನೀಡಿದರು. ಹೊಸಬಳು ಎನ್ನುವ ಫೀಲ್ ಸಿಗಲಿಲ್ಲ ಎಂಕೆ ಮಠ ಸೇರಿದಂತೆ ಹಿರಿಯ ಜೊತೆ ನಟಿಸಿದ್ದೇನೆ ಡಬ್ಬಿಂಗ್ ನಲ್ಲಿ ಹೆದರಿದ್ದೆ. ನೀವೇ ಡಬ್ ಮಾಡಿ ಎಂದು ವಿಶ್ವ ಬಾಡಿ ಲಾಂಗ್ವೇಜ್ ಸೇರಿದಂತೆ ಎಲ್ಲಾ ಮಾಹಿತಿ ನೀಡಿದ್ದಾರೆ. ಎರಡು ವರ್ಷ ದಲ್ಲಿ ಸಾಕಷ್ಟು ಕಲಿತಿದ್ದೇನೆ. ಮಾರ್ಡನ್ , ಸಾವಿತ್ರಿ ಕಾಲ್ ರಿಂಗ್, ಸಿನಿಮಾ ನೋಡಿಲ್ಲ ಡಬ್ಬಿಂಗ್ ಸಿನಿಮಾ ನೋಡಿ ಚೆನ್ನಾಗಿ ಬಂದಿದೆ. ಮೊದಲಬಾರಿ ಸನ್ನಿಸುಲ್ಲ. ಬೆಂಬಲ ಇದೆ ಎಂದರು
ನಿರ್ಮಾಪಕ ಪ್ರವೀಣ್ ಗೌಡ, ಟ್ರೈಲರ್ ಬಿಡುಗಡೆಯಾದ ನಂತರ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶ ಸೇರಿದಂತೆ ಮತ್ರಿತರ ಕಡೆ ಉತ್ತಮ ಪ್ರತಿಕ್ರಿಯೆ ಬಂದಿದೆಮ ಸಿನಿಮಾ ಗೆಲ್ಲಿಸಿಕೊಳ್ಳಬೇಕು ಎಂದರು
ಪುಷ್ಪ-2 ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಕಂಟೆಂಟ್ ಬಂದರೆ ಚಿತ್ರ ಗೆಲ್ಲುತ್ತವೆ. ಹೊಸ ತಂಡ ಕಷ್ಟ ಪಟ್ಟು ಸಿನಿಮಾ ಮಾಡಿದ್ದೇವೆ. ಶೋಷಿತರು ಸೇರಿದಂತೆ ಎಲ್ಲಾ ಸಮುದಾಯದ ಕಥೆ ಇದೆ. ಸಿನಿಮಾ ನೋಡಿದರೆ ಇತಿಹಾಸದ ಪುಸ್ತಕ ಓದಿದ ಹಾಗೆ ಆಗಲಿದೆ. ಎಷ್ಟು ಕಲೆಕ್ಷನ್ ಆಗುತ್ತೋ ಗೊತ್ತಿಲ್ಲ ಕನ್ನಡ ಸಿನಿಮಾ ಗೆಲ್ಲಿಸಿ ಎಂದು ಮನವಿ ಮಾಡಿದರು. ಕುಟುಂಬದ ಸಮೇತ ನೋಡುವ ಸಿನಿಮಾ. ಪ್ಯಾಮಿಲಿ ಮನರಂಜನೆ ಜೊತೆಗೆ ಸಾಮಾಜಿಕ ವಿಷಯವನ್ಜು ಚಿತ್ರದ ಮೂಲಕ ಹಲವು ವಿ಼ಷಯ ಹೇಳಿದ್ದೇವೆ ಎಂದರು
ಹೊಸ ಪ್ರತಿಭೆಗಳು ಬಿಟ್ಟರೆ, ಕಥೆ ಹೇಳುವುದರಲ್ಲಿ, ನಿರ್ಮಾಣದಲ್ಲಿ ರಾಜಿ ಮಾಡಿಕೊಂಡಿಲ್ಲ. ಗುಣಮಟ್ಟ. ಅಂದುಕೊಂಡದಕ್ಕಿಂತ ಹೆಚ್ಚಿನ ಬಂಡವಾಳ ಆಗಿದೆ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದರೆ ಚಿತ್ರ ಹಿಟ್ ಆಗಲಿದೆ ಎಂದರು
ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮಾತನಾಡಿ ಸುಮಾರು ಚಿತ್ರಗಳಲ್ಲಿ ನಮ್ಮ ಕಥೆಯನ್ನು ಚಿತ್ರದಲ್ಲಿ ಹೇಳಬೇಕು ಎನ್ನುವ ತುಡಿತವಿದೆ.ಎರಡು ವರ್ಷದಿಂದ ಇಡೀ ತಂಡ ಒಂದೊಂದು ಹಂತದಲ್ಲಿ ಕಾನ್ಫಿಡೆನ್ಸ್ ಜಾಸ್ತಿ ಆಗ್ತಾ ಇದೆ.ನಿರ್ದೇಶಕ ಹೊಸಬರಾದರೂ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಹೋರಾಟದ ಕಥೆ . ಸಿನಿಮಾ ಕಂಟೆಂಟ್ ಕಥೆ ಆದರೂ ಕಮರ್ಷಿಯಲ್ ಅಂಶಗಳನ್ಜು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ರೀರೇಕಾರ್ಡಿಂಗ್ ಸವಾಲಿನಿಂದ ಕೂಡಿತ್ತು ಎಂದು ಮಾಹಿತಿ ಹಂಚಿಕೊಂಡರು.
ವಕೀಲ ಮತ್ತು ಕಥೆಗಾರ ಹರಿರಾಮ್, ರಾಜ್ಯದಲ್ಲಿ ತೆಲುಗು ,ತಮಿಳು ಭಾಷೆಯಲ್ಲಿ ನೆಲಮೂಲದ ಸಿನಿಮಾ ಬರುತ್ತವೆ. ಆ ರೀತಿಯ ಸಾಲಿನಲ್ಲಿ ಬರುವ ಸಿನಿಮಾ ಧೀರ ಭಗತ್ ರಾಯ್ ಸಿನಿಮಾ. ಹೊಸ ವಿಷಯ ತಿಳಿಸುವ ಪ್ರಯತ್ನ ಮಾಡಲಾಗಿದೆ ಇತಿಹಾಸವನ್ನು ಮುಚ್ಚಿಟ್ಟಿರುವ ಹಲವು ಸಂಗತಿಯನ್ನು ಚಿತ್ರದ ಮೂಲಕ ಹೇಳ ಹೊರಟ್ಟಿದ್ದೇವೆ ಎಂದರು