ಚಿತ್ರ : ಪ್ರಭುತ್ವ
ನಿರ್ಮಾಪಕ : ರವಿರಾಜ್. ಎಸ್. ಕುಮಾರ್
ಸಂಗೀತ : ಎಮಿಲ್
ಛಾಯಾಗ್ರಹಣ : ಕೆ .ಎಸ್. ಚಂದ್ರಶೇಖರ್
ತಾರಾಗಣ : ಚೇತನ್ ಚಂದ್ರ , ಪಾವನ , ರಾಜೇಶ್ ನಟರಂಗ , ಗಿರಿ , ನಾಸರ್, ವಿಜಯ್ ಚೆಂಡೂರ್, ರೂಪಾದೇವಿ, ರಾಜೇಶ್ ನಟರಂಗ, ಅಂಬಿಕಾ ಶರತ್ ಲೋಹಿತಾಶ್ವ, ಆದಿ ಲೋಕೇಶ್, ಹಾಗೂ ಇತರರು..
ಸಮಾಜದಲ್ಲಿ ದುಡಿದು ಬದುಕುವವರ ನಡುವೆ ಬಡಿದು ತಿನ್ನುವವರೇ ಹೆಚ್ಚಾಗಿದ್ದು , ಮೋಸ, ವಂಚನೆ, ರಾಜಕೀಯ ಪಿತೂರಿ, ಪೊಲೀಸ್ ವ್ಯವಸ್ಥೆಯ ನಡುವೆ ಪರಿಸರ ಪ್ರೇಮಿ, ರೈತರ ಬದುಕು, ನ್ಯಾಯ, ನೀತಿ, ಧರ್ಮ, ಸತ್ಯಕ್ಕಾಗಿ ಶ್ರಮಿಸುವ ನಾಯಕರ ಹೋರಾಟ ಹೀಗೆ ಹತ್ತು, ಹಲವು ವಿಚಾರಗಳನ್ನು ಈವಾರ ತೆರೆಕಂಡಿರುವ ಪ್ರಭುತ್ವ. ಸಿನಿಮಾ ಹೊತ್ತು ತಂದಿದೆ.
ಸಮಾಜಘಾತುಕ ಶಕ್ತಿಗಳ ಅಟ್ಟಹಾಸಕ್ಕೆ ಜನಸಾಮಾನ್ಯರ ಪರದಾಟವನ್ನು ಕನ್ನಡಿಯಂತೆ ತೆರೆದಿಡುವ ಪ್ರಯತ್ನ ಇಲ್ಲಿ ನಡೆದಿದೆ.
ತಂದೆ (ರಾಜೇಶ್ ನಟರಂಗ) ತಾಯಿ (ವೀಣಾ ಸುಂದರ್)ಯ ಮುದ್ದಿನ ಮಗನಾದ ಮನು(ಚೇತನ್ ಚಂದ್ರ)ತಂದೆಯ ಆದರ್ಶವನ್ನು ಮೈಗೂಡಿಸಿಕೊಂಡು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಗ್ಗೆ ಓದುತ್ತಲೇ ಬೆಳೆಯುತ್ತಾನೆ. ಅಪ್ಪನ ಅಗಲಿಕೆಯ ನಂತರ ಮನುಗೆ ಗ್ಯಾರೇಜೇ ಆಧಾರ ಸ್ತಂಭವಾಗಿರುತ್ತದೆ. ಸಹಾಯದ ನೆಪದಲ್ಲಿ ಸಿಗುವ ಯುವತಿ ಅನು(ಪಾವನ ಗೌಡ), ಮನು ಜೊತೆ ಸ್ನೇಹ ಬೆಳೆಸಿಕೊಂಡು ಆತಿಗೆ ಮಾರುಹೋಗುತ್ತಾಳೆ. ಈ ನಡುವೆ ಕಾಮುಕರು ಹಾಗೂ ಭ್ರಷ್ಟ ಪೊಲೀಸ್ ಅಧಿಕಾರಿಯನ್ನು ಸದೆ ಬಡಿಯುವ ಮನು, ಜೀವನದಲ್ಲಿ ಒಂದು ದುರ್ಘಟನೆ ನಡೆದುಹೋಗುತ್ತದೆ. ಇದರಿಂದ ನೊಂದ ಮನು, ಹುಟ್ಟೂರಿಗೆ ಬಬಂದು ನೆಲೆಸುತ್ತಾನೆ. ಆ ಹಳ್ಳಿಯಲ್ಲಿ ನಡೆಯುವ ಗಣಿಗಾರಿಕೆ, ಪರಿಸರ ನಾಶ, ರಾಜಕಾರಣಿಗಳ ಕುತಂತ್ರ ಹಾಗೂ ದಬ್ಬಾಳಿಕೆಯ ವಿರುದ್ಧ ನಿಲ್ಲುವ ಮನು ಬೆಂಬಲಕ್ಕೆ ಊರಿನ ಹಿರಿಯ ಜೀವ ಐನೋರ್( ನಾಸರ್) ಹಾಗೂ ಗ್ರಾಮಸ್ಥರ ಬೆಂಬಲವಿದ್ದರೂ, ಶಾಸಕ (ಶರತ್ ಲೋಹಿತಾಶ್ವ) ಹಾಗೂ ಅವನ ಪುತ್ರನ (ಆದಿ ಲೋಕೇಶ್) ಆರ್ಭಟಕ್ಕೆ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಪೊಲೀಸ್ ಅಧಿಕಾರಿಗಳು, ಇದೆಲ್ಲ ನ್ಯಾಯ, ಹೋರಾಟದ ಕಿಚ್ಚು, ಸಾವು, ನೋವುಗಳಿಗೆ ಸಾಕ್ಷಿಯಾಗುತ್ತಾ ಹೋಗುತ್ತದೆ.ಕೊನೆಗೂ ನಾಯಕನಿಗೆ ನ್ಯಾಯ ಸಿಗುತ್ತಾ? ಸತ್ಯ ಗೆಲ್ಲುತ್ತಾ.ಸೋಲುತ್ತಾ ಎಂಬುದಕ್ಕೆ ಉತ್ತರ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿದೆ. ಸಮಾಜದಲ್ಲಿ ಜನರಿಗೆ ಯಾವ್ಯಾವ ರೀತಿಯಲ್ಲಿ ವಂಚನೆ ನಡೆಯುತ್ತಿದೆ ಎಂಬುದನ್ನು ತಿಳಿಯಲು ನೀವು ಪ್ರಭುತ್ವ ಚಿತ್ರವನ್ನು ನೋಡಲೇಬೇಕು.
ಪ್ರತಿಯೊಬ್ಬ ಪ್ರಜೆಯೂ ತಿಳಿದುಕೊಳ್ಳಬೇಕಾದಂಥ ವಿಷಯವನ್ನು ತುಂಬಾ ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನ ಈ ಚಿತ್ರದಲ್ಲಿ ನಡೆದಿದೆ.
ಅದ್ದೂರಿಯ ಜತೆಗೆ ದೊಡ್ಡ ತಾರಾ ಬಳಗವನ್ನೇ ಸೇರಿಸಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಮಧುರ ಸಂಗೀತ, ಛಾಯಾಗ್ರಹಕರ ಕೈಚಳಕ ಹೀಗೆ ತಾಂತ್ರಿಕರ ಬುದ್ದಿವಂತಿಕೆ ಚಿತ್ರದಲ್ಲಿ ಎದ್ದು ಕಾಣುತ್ತದೆ. ನಾಯಕ ಮನು ಪಾತ್ರದ ಮೂಲಕ ಚೇತನ್ ಚಂದ್ರ ಇಡೀ ಚಿತ್ರವನ್ನ ಆವರಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಪಾವನ ತನಗೆ ಸಿಕ್ಕ ಅವಕಾಶದಲ್ಕೇ ಉತ್ತಮಾಭಿನಯ ನೀಡಿದ್ದಾರೆ. ಬಹುಭಾಷಾ ನಟ ನಾಸರ್ ಪಾತ್ರ ಗಮನ ಸೆಳೆಯುತ್ತದೆ. ನ್ಯಾಯಾಧೀಶರ ಪಾತ್ರದಲ್ಲಿ ಹಿರಿಯನಟಿ ಅಂಬಿಕಾ, ಹಳ್ಳಿಯ ತಿಮ್ಮಕ್ಕನ ಪಾತ್ರದಲ್ಲಿ ರೂಪಾದೇವಿ, ಎಂಎಲ್ಎ ವಿಜಯಲಕ್ಷ್ಮಿ ಪಾತ್ರದಲ್ಲಿ ಅಭಿರಾಮಿ ನಟಿ ಪೂಜಾ ಲೋಕೇಶ್ ಸಿಬಿಐ ಪಾತ್ರದಲ್ಲಿ ದ ಬೆಸ್ಟ್ ಆಕ್ಟಿಂಗ್ ನೀಡಿದ್ದಾರೆ. ಹಾಗೆಯೇ ರಾಜೇಶ್ ನಟರಂಗ, ಶರತ್ ಲೋಹಿತಾಶ್ವ , ಶಶಿಕುಮಾರ್ , ಆದಿ ಲೋಕೇಶ್ , ವೀಣಾ ಸುಂದರ್ , ಹೊನವಳ್ಳಿ ಕೃಷ್ಣ ಹೀಗೆ ಹಿರಿಯ ಹಾಗೂ ಕಿರಿಯ ಕಲಾವಿದರ ದಂಡೆ ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ.