Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು ಚಿತ್ರದ ಮೊದಲ ಹಾಡು ಕೃಷ್ಣಾ ನದಿತೀರದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರಿಂದ ಬಿಡುಗಡೆಗೊಂಡಿದೆ.
Posted date: 23 Sat, Nov 2024 07:10:14 PM
ಕಲಿಯುಗ ಕಲ್ಪತರು ಶ್ರೀಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೋತ್ವವದಲ್ಲಿ ಕೃಷ್ಣಾ ನದಿತೀರದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಿಡುಗಡೆಗೊಂಡ ಮೊದಲ ಹಾಡು

 "ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು" ಚಲನಚಿತ್ರದ ಲಿರಿಕಲ್‌ ವಿಡಿಯೋ ನವೆಂಬರ್ 21ರಂದು "ಶ್ರೀ ಸದ್ಗುರು ಸಂಗಮೇಶ್ವರ ಮಹಾರಾಜರ 93ನೇ" ಪುಣ್ಯಸ್ಮರಣೆಯಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ಶ್ರೀ ಸದ್ಗುರು ಪ್ರಭುಜಿ ಮಹಾರಾಜರಿಂದ "ಸ್ವರೂಪ ಸಂದರ್ಶನ" ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದೆ.

ಶ್ರೀ ಗಿರಿಮಲ್ಲೇಶ್ವರ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರ ಮಾರ್ಗದರ್ಶನದಲ್ಲಿ "ಮಾಧವಾನಂದ ಯೋ ಶೇಗುಣಸಿ" ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು "ಇಂಚಗೇರಿ ಅಧ್ಯಾತ್ಮ ಸಾಂಪ್ರದಾಯ ಗುರುಲಿಂಗ ಜಂಗಮ ಮಹಾರಾಜ" ಭಕ್ತಿಯ ಸಾಲುಗಳನ್ನು ನಿರ್ದೇಶಕ ರಾಜರವಿಶಂಕರ್ (ವಿ ರವಿ) ಬರೆದಿದ್ದು, ಈ ಹಾಡನ್ನು ರವೀಂದ್ರ ಸೊರಗಾವಿ ಹಾಡಿದ್ದಾರೆ. ಎ ಟಿ ರವೀಶ್ ಸಂಗೀತ ನೀಡಿದ್ದಾರೆ. 
 
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಲಿರಿಕಲ್‌ ವಿಡಿಯೋ ವೀಕ್ಷಿಸಿದ ಸುದರ್ಶನ ಮಹಾರಾಜ ಕಡಕಿ, ಆನಂದಸಿದ್ದ ಮಹಾರಾಜ ಅಸುರ್ಲೆ, ಮಹಾದೇವ ಮಹಾರಾಜ ನಂದಗಾಂವ, ಸಿದ್ದಾರೂಢ ಶರಣರು ಹಿಪ್ಪರಗಿ,ಸಿದ್ದಲಿಂಗ ಮಹಾರಾಜರು ಹಿಪ್ಪರಗಿ, ಶಾಸಕ ಸಿದ್ದು ಸವದಿ, ಸಿದ್ದು ಕೊಣ್ಣೂರ, ಗಿರೀಶ್ ಜಿಡ್ಡಿಮನಿ,ಭಾವುರಾಜ ಜಿಡ್ಡಿಮನಿ, ನಟ ವಿಶ್ವಪ್ರಕಾಶ್ ಟಿ ಮಲಗೊಂಡ ಸೇರಿದಂತೆ ಸಾಧು ಸತ್ಪುರುಷರು ಗಣ್ಯರು ಉಪಸ್ಥಿತರಿದ್ದರು. 

 ವಿಶೇಷವಾಗಿ ಸಂಗಮೇಶ್ವರರ ಅಭಿನಯ ಮಾಡುತ್ತಿರುವ ರವಿನಾರಾಯಣ್ ರವರು ಲಕ್ಷಾಂತರ ಜನರ ಸಮ್ಮುಖದಲ್ಲಿ ಸಂಗಮೇಶ್ವರ ಮಹಾರಾಜರ ವೇಷದಲ್ಲಿ ಈ ಆಡಿಯೋ ಬಿಡುಗಡೆಯ ಸಂದರ್ಭದಲ್ಲಿ ವೇದಿಕೆಯ ಮೇಲೆ ಬಂದಿದ್ದು ವಿಶೇಷವಾಗಿತ್ತು. ವಿಶೇಷವೆಂದರೆ ಅಲ್ಲಿ ಉಪಸ್ಥಿತರಿದ್ದ ಭಕ್ತರೆಲ್ಲರೂ ಪಾತ್ರಧಾರಿ ರವಿ ನಾರಾಯಣ್ ರವರನ್ನು ನೋಡಿ ನಿಜವಾದ ಸಂಗಮೇಶ್ವರ ಮಹಾರಾಜರೆಂದು ತಿಳಿದು ಅವರ ಪಾದಕ್ಕೆ ನಮಸ್ಕರಿಸಿ ನಿಜವಾದ ಸಂಗಮೇಶ್ವರ ಮಹಾರಾಜರ ದರ್ಶನವಾಯಿತೆಂದು ಅವರ ಜೊತೆ ಪ್ರತಿಯೊಬ್ಬರೂ ಮೊಬೈಲ್ಗಳ ಮೂಲಕ ಫೋಟೋ ಕ್ಲಿಕ್ಕಿಸಿದರು. ರಾಜರವಿಶಂಕರ್ (ವಿ ರವಿ) ಬರೆದಿರುವ, ಗಾಯಕ ರವೀಂದ್ರ ಸೊರಗಾವಿ ಅವರ ಕಂಠಸಿರಿಯಲ್ಲಿ "ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯ ಗುರುಲಿಂಗ ಜಂಗಮ ಮಹಾರಾಜ" ಭಕ್ತಿ ಪ್ರಧಾನ ಹಾಡಿನ್ನು ಎಲ್ಲರೂ ಪ್ರಶಂಸಿಸಿದರು.

ಹೊಸ ಪ್ರತಿಭೆ ರವಿ ನಾರಾಯಣ್ ಶ್ರೀಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ, ವಿಶ್ವಪ್ರಕಾಶ್ ಟಿ ಮಲಗೊಂಡ, ಭವ್ಯಶ್ರೀ ರೈ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಜಾ ರವಿಶಂಕರ್ (ವಿ ರವಿ) ನಿರ್ದೇಶನ, ಸಿ ನಾರಾಯಣ್ ಛಾಯಾಗ್ರಹಣ, ಎ.ಟಿ. ರವೀಶ್ ಸಂಗೀತ, ಡಿ. ರವಿ ಸಂಕಲನ, ಕುಮಾರ್ ನೊಣವಿನಕೆರೆ ಪ್ರಸಾದನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು ಚಿತ್ರದ ಮೊದಲ ಹಾಡು ಕೃಷ್ಣಾ ನದಿತೀರದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರಿಂದ ಬಿಡುಗಡೆಗೊಂಡಿದೆ. - Chitratara.com
Copyright 2009 chitratara.com Reproduction is forbidden unless authorized. All rights reserved.