`ಆರಾಮ್ ಅರವಿಂದಸ್ವಾಮಿ` ಪಕ್ಕಾ ಕಾಮಿಡಿ ಚಿತ್ರ ಎನ್ನಬಹುದು. ಊರಲ್ಲಿ ಏನೂ ಕೆಲಸವಿಲ್ಲದೆ ಅಲೆದಾಡುವ ನಾಯಕನಿಗೆ ಒಂದಷ್ಟು ಗೆಳೆಯರ ಬಳಗ, ಕಂಡವರ ದುಡ್ಡಲ್ಲಿ ಜಾಲಿ ಮಾಡಿಕೊಂಡು ಓಡಾಡುತ್ತಿದ್ದ ನಾಯಕನಿಗೆ ಸುಂದರ ಯುವತಿಯೊಬ್ಬಳ ಕತೆ 6 ವರ್ಷದಿಂದ ಗೆಳತನವಿರುತ್ತೆ, ಸುಳ್ಳು ಹೇಳಿಕೊಂಡು ಹ್ಯಾಪಿಯಾಗಿದ್ದ ನಾಯಕ, ಅರವಿಂದ್ ಸ್ವಾಮಿಯದಲ್ಲಿ ಮುಂದೆ ಏನೆಲ್ಲಾ ತಿರುವುಗಳು ಎದುರಾದವು, ಆತನ ಜೀವನದಲ್ಲಿ ಏನೇನು ನಡೆದುಹೋಗುತ್ತೆ ಅನ್ನೋದನ್ನು ನಿರ್ದೇಶಕ ಅಭಿಷೇಕ್ ಶೆಟ್ಟಿ ಹೇಳ್ತಾ ಹೋಗ್ತಾರೆ.
ಮೇಲ್ನೋಟಕ್ಕೆ ಇದೊಂದು ಪ್ರೇಮಕಥೆಯೆಂದು ಎನಿಸಿದರೂ ಮೊದಲ ಭಾಗದ ಸಿನಿಮಾದಲ್ಲಿ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ, ಪಂಚ್ ಡೈಲಾಗ್ ಜತೆಗೊಂದು ನವಿರಾದ ಪ್ರೇಮಕಥೆಯಿದೆ, ಎನರ್ಜಿ ಕೊಡೋ ಥ್ರಿಲ್ಲಿಂಗ್ ಡಾನ್ಸ್, ಫೈಟ್ಸ್,
ಜನ ಸಾಮಾನ್ಯರ ಬದುಕು, ಬವಣೆಯ ಜೀವನದ ಜೊತೆಗೆ, ಅವರ ಸರಳ ಲೈಫನ್ನಿಲ್ಲಿ ಅನಾವಣಗೊಳಿಸಿದ್ದಾರೆ.
ಚಿತ್ರದ ಕಥೆಗೆ ತಕ್ಕಂತೆ ಸೀನ್ ಗಳು, ವೇಷಭೂಷಣಗಳ ಜೊತೆಗೆ ಇಡೀ ಕಥೆಯನ್ನು ನಿರೂಪಿಸಿಕೊಂಡು ಹೋಗಿರುವ ಶೈಲಿ ವೀಕ್ಷಕರಲ್ಲಿ ಕುತೂಹಲ ಕೆರಳಿಸುತ್ತ ಸಾಗುತ್ತದೆ.
ಆರಾಮ್ ಅರವಿಂದ ಸ್ವಾಮಿ ಒಂದು ಯೂಥ್ ಕ್ರೇಜ್ ಹೊಂದಿರೋ, ತುಸು ಹೆಚ್ಚೇ ಆಟಿಟ್ಯೂಡ್ ನ ಯುವಕನ ಕಥೆ. ಆತನ ಗೆಳತಿ ಒಬ್ಬ ಶಿಕ್ಷಕಿ. ನಾಯಕ ತನ್ನ ಚೇಷ್ಟೆ ಮತ್ತು ಸುಳ್ಳು ಕಥೆಯಿಂದ ಪ್ರೀತಿಯನ್ನು ಉಳಿಸಿಕೊಳ್ಳುತ್ತಲೇ ಬರುತ್ತಾನೆ. ಆಕೆಯೊಂದಿಗೆ ಒಂದು ದಿನ ಜಗಳವಾದಾಗ, ಮೊಬೈಲ್ ನ್ನು ಗೆಳೆಯರಿಗೆ ಕೊಟ್ಟು ಊರಿಗೆ ಹೊರಟು ಹೋಗುತ್ತಾನೆ. ಆತನ ತಂದೆ ಶ್ರೀಮಂತರ ಮನೆಯಲ್ಲಿ ಕಾರ್ ಡ್ರೈವರ್ ಆಗಿರುತ್ತಾನೆ. ಹಾಸಿಗೆ ಹಿಡಿದ ಅಜ್ಜಿ ಮತ್ತು ತಾಯಿಯೊಡನೆ ನಿತ್ಯವೂ ಕಿರಿಕ್ ಮಾಡಿಕೊಳ್ಳುತ್ತಿದ್ದ ಅರವಿಂದ್, ಒಬ್ಬ ಮಿಡಲ್ ಕ್ಲಾಸ್ ಕುಟುಂಬದವನಾದರೂ, ಶ್ರೀಮಂತನ ಹಾಗೆ ಬಿಲ್ಡಪ್ ಕೊಡೋದ್ರಲ್ಲಿ ಕಮ್ಮಿಯೇನಿರಲ್ಲ.
ಈ ನಡುವೆ ತನ್ನ ಪ್ರಿಯತಮೆಗೂ ಸುಳ್ಳು ಹೇಳುತ್ತಲೇ ಬರುತ್ತಾನೆ. ಶ್ರೀಮಂತ ಯಜಮಾನನೊಡನೆ ತಂದೆ ಮಾಡಿಕೊಂಡ ಒಪ್ಪಂದದಂತೆ, ಶ್ರೀಮಂತನ ಮನೆಯ ಅಂಗವಿಕಲ ಯುವತಿಯೊಂದಿಗೆ ಮದುವೆಯಾಗಬೇಕಾಗುತ್ತದೆ. ಮುಂದೆ ಅರವಿಂದನ ಜೀವನದ ಕಥೆ ಏನಾಯ್ತು, ಆತ ಪ್ರೀತಿಸಿದ ಹುಡುಗಿಯ ಕಥೆ ಏನಾಯಿತು ಎಂಬುದನ್ನು ನಿರ್ದೇಶಕರು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹೇಳಿದ್ದಾರೆ.
ಚಿತ್ರದಲ್ಲಿ ನಾಯಕ ಅನೀಷ್ ಅವರು ಹಾಸ್ಯ ಪಾತ್ರವನ್ನೂ ಸಹ ಅದ್ಭುತವಾಗಿ ನಿಭಾಯಿಸಿದ್ದಾರೆ. ನಾಯಕಿ ಮಿಲನಾ ನಾಗರಾಜ್, ಋತಿಕಾ ಶ್ರೀನಿವಾಸ್ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಎಲ್ಲಾ ಕಲಾವಿದರು ಅವವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಐಕಿಯಾ ಸ್ಟೂಡಿಯೋ ಮತ್ತು 786 ಫಿಲಂಸ್ ಅಡಿ ಶ್ರೀಕಾಂತ್ ಪ್ರಸನ್ನ ಮತ್ತು ಪ್ರಶಾಂತ್ ರೆಡ್ಡಿ ಎಸ್. ಅವರು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಚಿತ್ರದ ಹೈಲೈಟ್. ವೀಕೆಂಡ್ ನಲ್ಲಿ ರಿಲ್ಯಾಕ್ಸ್, ಎಂಟರ್ ಟೈನ್ ಮೆಅಮಟ್ ಗೆ ಆರಾಮ್ ಅರವಿಂದ ಸ್ವಾಮಿ ಉತ್ತಮ ಆಯ್ಕೆ.