Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮದುವತ್ತಿಯಲ್ಲಿ ಹೆಣ ಎತ್ತವರ ಹುಡುಗರು ಹೆಣಗಾವ ಕಥೆಯ ಚಿತ್ರ ಜಲಂಧರ...ರೇಟಿಂಗ್ : 3/5
Posted date: 29 Fri, Nov 2024 09:53:09 PM
ಚಿತ್ರ: ಜಲಂಧರ
ನಿರ್ದೇಶನ : ವಿಷ್ಣು ಪ್ರಸನ್ನ
ತಾರಾಗಣ: ಪ್ರಮೋದ್ ಶೆಟ್ಟಿ,ಸ್ಟೆಪ್ ಅಪ್ ಲೋಕಿ, ಅರೋಹಿತಾ ಗೌಡ, ರಿಷಕಾ ರಾಜ್,  ಬಲರಾಜವಾಡಿ, ರಘು ರಾಮನಕೊಪ್ಪ ಮತ್ತಿತರರು
ರೇಟಿಂಗ್: * * * 3/5 
 
ಹೆಣ ಎತ್ತುವುದನ್ನೇ ಕಾಯಕ ಮಾಡಿಕೊಂಡ ಜನರ ಬದುಕು,ಬವಣೆ, ನಿತ್ಯದ ಹೋರಾಟದ ಜೊತೆ ಜೊತೆಗೆ ಕಾವೇರಿ ನದಿಗೆ ಹೆಣವಾಗುವ ಕಥೆಯ ತಿರುಳು ಹೊಂದಿರುವ ಚಿತ್ರ  "ಜಲಂಧರ "ಈ ವಾರ ತೆರೆಗೆ ಬಂದಿದೆ. 

ನಿರ್ದೇಶಕ ವಿಷ್ಣು ಪ್ರಸನ್ನ ಚಿತ್ರಕ್ಕೆ ಜಲಂಧರ ಎನ್ನುವ ಹೆಸರು ಇಡುವುದುಕ್ಕಿಂತ "ಕಾವೇರಿ ತೀರದ ಹಂತಕರು" ಎನ್ನುವ ಹೆಸರೇ ಹೆಚ್ಚು ಅನ್ವರ್ಥವಾಗುತ್ತಿತ್ತು

ಮದುವತ್ತಿಯ ಕಾವೇರಿ ನದಿಯಲ್ಲಿ ನದಿಗೆ ಬಿದ್ದು ಸತ್ತವರನ್ನು ಮೇಲಕ್ಕೆ ಎತ್ತುವುದೇ ಆ ಊರಿನ ಹುಡುಗರ ನಿತ್ಯದ ಕಾಯಕ.  ಡಿಸ್ಕೋ ( ಸ್ಟೆಪ್ ಅಪ್ ಲೋಕಿ) ಮತ್ತು ಶಿಳ್ಳೆ ಮಂಜನ ಗ್ಯಾಂಗ್ ನಡುವೆ ಹೆಣ ಎತ್ತುವ ವಿಷಯಲ್ಲಿ ಆಗಾಗಾ ಕಿರಿಕಿರಿ. ಜೊತೆಗೆ ಪೊಲೀಸ್ ಶಂಕರಪ್ಪ ( ರಘು ರಾಮನಕೊಪ್ಪ) ಹುಡುಗರಿಗೆ ಸಾಥ್.

ನದಿಯಲ್ಲಿ ಬಿದ್ದು ಸತ್ತವರ ಹೆಣಗಳನ್ನು ಎತ್ತುವುದನ್ನೇ ಕೆಲಸ ಮಾಡಿಕೊಂಡ ಹುಡುಗರು ಕಾವೇರಿ ತೀರದ ರಕ್ಷಕರು ಎನ್ನುವ ಗೌರವಕ್ಕೂ ಪಾತ್ರರಾಗುತ್ತಾರೆ. ಈ ನಡುವೆ ಇನ್ಸ್ ಪೆಕ್ಟರ್ ಅಭಿಜಿತ್ ( ಪ್ರಮೋದ್ ಶೆಟ್ಟಿ) ನಕಲಿ ಎನ್ ಕೌಂಟರ್ ಆರೋಪದಿಂದ ಅಮಾನತ್ತು ಗೊಳ್ಳುತ್ತಾನೆ. ಆತನ ಪತ್ನಿ ಜರ್ನಲಿಸಂ ಮಾಡಿದಾಕೆ.‌ಜೊತೆಗೆ ಸಮಾಜಮುಖಿ ಹೋರಾಟಗಾರ್ತಿ ತೇಜಸ್ವಿನಿ  ( ರಿಷಿಕಾ ರಾಜ್)  ಕಾವೇರಿ ತೀರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಾಳೆ. ಅಭಿಜಿತ್ ಕೆಲಸದಿಂದ ಅಮಾನತ್ತು ಗೊಂಡವ
ಸ್ಥಳೀಯ ಪೊಲೀಸ್ ಸಹಕಾರಿಂದ ಆರೋಪಿ ಪತ್ತೆ ಕೆಲಸ ಮಾಡ್ತಾನೆ.

ಇತ್ತ ಹೆಣ ಎತ್ತುವುದು ಹೆಣಗಳ ಮೈಮೇಲೆ ಇರುವ ವಡವೆ ದೋಚುವ ಕೆಲಸ ಮಾಡಿಕೊಂಡ ಡಿಸ್ಕೋ ಮತ್ತವರ ತಂಡಕ್ಕೆ  ಪವಿ ( ಅರೋಹಿತಾ ಗೌಡ) ಸಾಥ್ ನೀಡುತ್ತಾಳೆ. ಈ ನಡುವೆ ಕಾವೇರಿ ತೀರದಲ್ಲಿ ಅನುಮಾನಾಸ್ಪದ ಸಾವು, ಹಾಗು ಪತ್ನಿಯ ಸಾವಿನ ಬೆನ್ನತ್ತಿದ್ದ ಅಮಾನತ್ತುಗೊಂಡ ಇನ್ಸ್ ಪೆಕ್ಟರ್ ಅಬಿಜಿತ್ ಗೆ ಒಂದೊಂದೇ ಸತ್ಯದ ಅನಾವರಣ ಆಗುತ್ತದೆ. ಕಾವೇರಿ ನದಿಯಲ್ಲಿ‌ ಮೊಸಳೆ ಇದೆಯಾ, ಕೊಲೆಗಳ ಹಿಂದಿರುವ ಕಟುಕರು ಯಾರು.. ಎನ್ನುವ ಕೌತುಕದ ಕಥನ  ಕುತೂಹಲಕಾರಿ.

ಚಿತ್ರದ ಮೊದಲರ್ದ ಹೆಣ ಎತ್ತುವುದು, ಎದುರಾಳಿ ಗುಂಪಿನ‌ ನಡುವಿನ ಕಿರಿಕಿರಿ, ಶಾಸಕನ ಕರಾಮತ್ತು ಸುತ್ತವೇ ಚಿತ್ರ ಸಾಗಿದ್ದು ಚಿತ್ರದ ಕಥೆ ಕುತೂಹಲ ಕೆರಳಿಸುವುದು ದ್ವಿತೀಯಾರ್ಧದಲ್ಲಿ ಮಾತ್ರ. ಚಿತ್ರ ನಿಂತಿರುವುದೇ ಎರಡನೇ ಭಾಗದಲ್ಲಿ. ಜೊತೆಗೆ ಅಲ್ಲಲ್ಲಿ ಗೊಂದಲಗಳಿಗೆ ಉತ್ತರ ನೀಡುತ್ತಲೇ ಮತ್ತಷ್ಟು ಪ್ರಶ್ನೆಗಳನ್ನು ಉಳಿಸಿಕೊಂಡು ಸಾಗಿಸಿದೆ

ನಟರಾದ ಸ್ಟಪ್ ಅಪ್ ಲೋಕಿ, ಅರೋಹಿತಾ ಗೌಡ, ಪ್ರಮೋದ್ ಶೆಟ್ಟಿ, ರಿಷಿಕಾ ರಾಜ್, ಬಾಲರಾಜ ವಾಡಿ, ರಾಘ ರಾಮನಕೋಪ್ಪ ಸೇರಿದಂತೆ ಮತ್ತಿತರು ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮದುವತ್ತಿಯಲ್ಲಿ ಹೆಣ ಎತ್ತವರ ಹುಡುಗರು ಹೆಣಗಾವ ಕಥೆಯ ಚಿತ್ರ ಜಲಂಧರ...ರೇಟಿಂಗ್ : 3/5 - Chitratara.com
Copyright 2009 chitratara.com Reproduction is forbidden unless authorized. All rights reserved.