Chief Editor
Manohar. R (Manu)
Photo Journalist
chitrataramanu@gmail.com
+91 9845549026
`ತಾಯವ್ವ`ನಿಗೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್...
Posted date: 04 Wed, Dec 2024 12:22:11 PM
ಕನ್ನಡ ಚಿತ್ರರಂಗದಲ್ಲೀಗ ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆಯೇ ಒಳ್ಳೊಳ್ಳೆ ಕಂಟೆಂಟ್ ಸಿನಿಮಾಗಳು ಪ್ರೇಕ್ಷಕರ ಗಮನಸೆಳೆಯುತ್ತವೆ. ಈ ಸಾಲಿಗೀಗ ಹೊಸ ಸೇರ್ಪಡೆ ತಾಯವ್ವ. ಸೂಲಗಿತ್ತಿ ಸುತ್ತ ಸಾಗುವ ಕಥೆಯಾಗಿರುವ ತಾಯವ್ವನಿಗೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್ ಕೊಟ್ಟಿದ್ದಾರೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ತಾಯವ್ವ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಆರ್.ಅಶೋಕ್ ಹಾಗೂ ಉಮಾಶ್ರೀ ಟೈಟಲ್ ಲಾಂಚ್ ಮಾಡಿ ಹೊಸತಂಡಕ್ಕೆ ಬೆಂಬಲ ಕೊಟ್ಟರು. 

ಇದೇ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ತಾಯವ್ವ ಮನಸ್ಸಿಗೆ ಮುಟ್ಟು ಪದ. ತಾಯಿ ಅನ್ನೋ ಪದವೇ ಹಾಗೇ. ವಿಶೇಷವಾಗಿ ಹೆಣ್ಣು ಮಕ್ಕಳ ಬಗ್ಗೆ ತಯಾರಾಗಿರುವ ಸಿನಿಮಾ ಇದು. ಮಕ್ಕಳನ್ನು ಹೊರಲು ತಾಯಿಬೇಕು. ಹೆಂಡ್ತಿಯಾಗಿ ನಮ್ಮ ಎಲ್ಲಾ ಕಷ್ಟ ಸುಖಗಳಲ್ಲಿ ನಿಲ್ಲಲು ಹೆಣ್ಣು ಬೇಕು. ಆದರೆ ಮಗಳಾಗಿ ಬೇಡ ಅನ್ನುವುದು ಬಂದಿದೆ. ನಾನು ಮಂಡ್ಯದ ಸಾಕಷ್ಟು ಕಡೆ ಹೋಗಿದ್ದೆ. ಅಲ್ಲೊಂದು ಅಲೆಮನೆಯಲ್ಲಿ ಲ್ಯಾಪ್ ಟಪ್ ಇಟ್ಕೊಂಡು ಅಲ್ಲೇ ಪರೀಕ್ಷೆ ಮಾಡಿ ಹೆಣ್ಣು ಅಂತಾ ಹೇಳಿದ್ರೆ ಅಲ್ಲೇ ಅಬಾಷನ್ ಮಾಡುವುದು. ಕದ್ದು ಮುಚ್ಚಿ ಹೆಣ್ಣು ಮಗುವನ್ನು ಕೊಲೆ ಮಾಡುವಂತಹದ್ದು. ಈ ತರದ ಘಟನೆ ಒಂದಲ್ಲ ಲಕ್ಷಾಂತರ ಆಗಿದೆ. ಈಗ ಬರ್ತಾ ಬರ್ತಾ ಜನಕ್ಕೆ ಒಂದು ಜಾಗೃತಿ ಬಂದಿದೆ. ಜನ ಗಂಡು ಹೆಣ್ಣು ಎರಡನ್ನು ಸ್ವೀಕಾರ ಮಾಡುವ ಮನಸ್ಸು ಬಂದಿದೆ. ಹೆಣ್ಣು ವಿಚಾರ ಬಂದಾಗ ತಾಯಿ ಭಾವನೆ ಇವೆಲ್ಲಾ ಪ್ರಮುಖವಾಗುತ್ತದೆ. ಈ ದೃಷ್ಟಿಯಿಂದ ತಾಯವ್ವ ಸಿನಿಮಾ ಮೂಡಿಬಂದಿದೆ. ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಜನರನ್ನು ಮುಟ್ಟುವಂತ ಸಿನಿಮಾ ಆಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
 
ಹಿರಿಯ ನಟಿ ಉಮಾಶ್ರೀ ಮಾತನಾಡಿ, ಸುದೀಪ್ ಮೊದಲ ಸಿನಿಮಾ ತಾಯವ್ವ ಅನ್ನೋ ಟೈಟಲ್ ಮೇಲೆಯೇ ಆಗಿದ್ದು. ನಾನು ಆ ಚಿತ್ರದಲ್ಲಿ ಅಜ್ಜಿ ಅಥವಾ ತಾಯಿ ಪಾತ್ರ ಮಾಡಿದ್ದೆ. ಅದೇ ಟೈಟಲ್ ಈಗ ಕನ್ನಡ ಚಿತ್ರರಂಗದಲ್ಲಿ ರೀಪೀಟ್ ಆಗ್ತಿದೆ. ಭಾ.ಮ ಹರೀಶ್ ಬಹಳ ಒಳ್ಳೆ ಪ್ರಯತ್ನ ಮಾಡಿದ್ದಾರೆ. ಮಕ್ಕಳು, ಮಹಿಳೆಯರಿಗಾಗಿ ಮಾಡುತ್ತಿರುವ ಪ್ರಯತ್ನ. ವಿಧಾನಸಭೆಗಳಲ್ಲಿ ಮಾತನಾಡುತ್ತೇವೆ ಹೆಣ್ಣು ಭ್ರೂಣ ಹತ್ಯೆ, ಸಮಾಜದಲ್ಲಿರುವ ಮನಸ್ಥಿತಿ ಬಗ್ಗೆ ಮಾತನಾಡುತ್ತೇನೆ. ಸಮಾಜಕ್ಕೆ ಅರಿವು ಮೂಡಿಸುವಂತಹ ಇಂತಹ ಸಿನಿಮಾಗಳು ಬಹಳ ಮುಖ್ಯವಾಗುತ್ತವೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ರೀತಿ ಸಿನಿಮಾಗಳನ್ನು ಕಮರ್ಷಿಟಲ್ ವಿಧಾನದಲ್ಲಿ ಮಾಡುವುದು ಕಷ್ಟ ಎಂದು ಅನಿಸುತ್ತದೆ. ಆದರೆ ಅದರ ಉದ್ದೇಶ ಒಳ್ಳೆಯದು ಇದೆಯಲ್ಲಾ. ಹೀಗಾಗಿ ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ತಾಯವ್ವ ಸಿನಿಮಾವನ್ನು ನಂದಿ ಪ್ರಶಸ್ತಿ ಸಂಸ್ಥಾಪಕಿಯಾಗಿರುವ ಎಸ್.ಪದ್ಮಾವತಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದು, ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ಕಂಟೆಂಟ್ ಸಿನಿಮಾವನ್ನು ನಿರ್ಮಿಸಿದ್ದು, ಅದನ್ನು ಕನ್ನಡ ಪ್ರೇಕ್ಷಕರಿಗೆ ಸಮರ್ಪಿಸುವ ಖುಷಿ ಅವರಿಗಿದೆ. ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಪಿ.ಶೇಷಗಿರಿ ಕಥೆ ಚಿತ್ರಕಥೆ ಸಂಭಾಷಣೆ ಬರೆದಿರುವ ತಾಯವ್ವನಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ತಾಯವ್ವ ಚಿತ್ರದ ಮೂಲಕ ಗೀತಪ್ರಿಯ ಚಿತ್ರರಂಗ ಪರಿಯಚವಾಗುತ್ತಿದ್ದು, ಬಂಡೇ ಮಹಾಕಾಳಿ ದೇಗುಲದ ಲತಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಬಹುತೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ನಿರ್ಮಾಪಕ ಭಾ.ಮ.ಹರೀಶ್ ಈ ಚಿತ್ರವನ್ನು ಅರ್ಪಿಸುತ್ತಿದ್ದು, ಶೂಟಿಂಗ್ ಮುಗಿಸಿರುವ ತಾಯವ್ವ ಸಿನಿಮಾ ಸೆನ್ಸಾರ್ ಗೆ ಸಜ್ಜಾಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ತಾಯವ್ವ`ನಿಗೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್... - Chitratara.com
Copyright 2009 chitratara.com Reproduction is forbidden unless authorized. All rights reserved.