Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹೊಸವರ್ಷಕ್ಕೆ ಬರಲಿದೆ ಗುರುನಂದನ್ ಅಭಿನಯದ``ರಾಜು ಜೇಮ್ಸ್ ಬಾಂಡ್``ಚಿತ್ರದ ಹಾಡು ಜೊತೆಗೆ ಘೋಷಣೆಯಾಗಲಿದೆ ಚಿತ್ರದ ಬಿಡುಗಡೆ ದಿನಾಂಕ
Posted date: 21 Sat, Dec 2024 11:21:16 AM
ಕರ್ಮ ಬ್ರೋಸ್ ಪ್ರೊಡಕ್ಷನ್ ತನ್ನ ಅತ್ಯಂತ ನಿರೀಕ್ಷಿತ “ರಾಜು ಜೇಮ್ಸ್ ಬಾಂಡ್ " ಚಿತ್ರದ ಹಾಡೊಂದನ್ನು ನೂತನವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ವಿಶೇಷವೆಂದರೆ ಈ ಹಾಡಿನ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಲಿದೆ.  
 
ಮೊದಲೇ ತಿಳಿಸಿದಂತೆ ಡಿಸೆಂಬರ್ 27 ರಂದು ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ "UI" ಹಾಗೂ "ಮ್ಯಾಕ್ಸ್" ಚಿತ್ರಗಳು ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆಯಾದ ಕಾರಣ ನಮ್ಮ ಚಿತ್ರದ ಬಿಡುಗಡೆಯನ್ನು ಸ್ವಲ್ಪ ಮುಂದೆ ಹಾಕಿರುವುದಾಗಿ ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ (ಲಂಡನ್) ಹಾಗೂ ಕಿರಣ್ ಭರ್ತೂರು(ಕೆನಡಾ) ತಿಳಿಸಿದ್ದಾರೆ.
 
ಶೀಘ್ರದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ ಎಂದು ತಿಳಿಸಿರುವ ನಿರ್ದೇಶಕ ದೀಪಕ್ ಮಧುವನಹಳ್ಳಿ, ಈ ಚಿತ್ರ ತನ್ನ ಮನಮೋಹಕ ಕಥೆ, ಹಾಸ್ಯ, ಲಂಡನ್‌ನ ಅದ್ಭುತ ದೃಶ್ಯಗಳು ಮತ್ತು ಮಧುರವಾದ ಸಂಗೀತದೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆಯನ್ನು ನೀಡುತ್ತಿದೆ. "ರಾಜು ಜೇಮ್ಸ್ ಬಾಂಡ್ " ಹಾಸ್ಯ ಮತ್ತು ಹೈಸ್ಟ್ ಡ್ರಾಮಾದ ಸಂಯೋಜನೆಯನ್ನು ತೋರಿಸುತ್ತದೆ. ಚಿತ್ರದ ಟೀಸರ್ ಮತ್ತು ಹಾಡುಗಳ ಬಿಡುಗಡೆ ನಂತರ ಈ ಚಿತ್ರವು ಈಗಾಗಲೇ ಗಮನಾರ್ಹ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಅತ್ಯಂತ ಗಮನಾರ್ಹ ಚಿತ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ ಎನ್ನುತ್ತಾರೆ. 
 
“ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹೊಸವರ್ಷಕ್ಕೆ ಬರಲಿದೆ ಗುರುನಂದನ್ ಅಭಿನಯದ``ರಾಜು ಜೇಮ್ಸ್ ಬಾಂಡ್``ಚಿತ್ರದ ಹಾಡು ಜೊತೆಗೆ ಘೋಷಣೆಯಾಗಲಿದೆ ಚಿತ್ರದ ಬಿಡುಗಡೆ ದಿನಾಂಕ - Chitratara.com
Copyright 2009 chitratara.com Reproduction is forbidden unless authorized. All rights reserved.