Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗನ್ಸ್ ಅಂಡ್ ರೋಜಸ್ ಭೂಗತ ಜಗತ್ತಿನಲ್ಲೊಂದು ಪ್ರೇಮಕಥೆ... ರೇಟಿಂಗ್ : 3/5 ***
Posted date: 04 Sat, Jan 2025 11:32:36 PM
ಚಿತ್ರ : ಗನ್ಸ್  ಅಂಡ್ ರೋಸಸ್
ನಿರ್ದೇಶಕ : ಶ್ರೀನಿವಾಸ್ ಕುಮಾರ್
ನಿರ್ಮಾಪಕ : ಹೆಚ್. ಆರ್. ನಟರಾಜ್ 
ಸಂಗೀತ : ಶಶಿಕುಮಾರ್
ಛಾಯಾಗ್ರಾಹಣ : ಜನಾರ್ಧನ್ ಬಾಬು
ತಾರಾಗಣ :  ಅರ್ಜುನ್, ಯಶ್ವಿಕ ನಿಷ್ಕಲ, ಕಿಶೋರ್, ಅವಿನಾಶ್, ಶೋಭ್ ರಾಜ್, ನೀನಾಸಂ ಅಶ್ವಥ್, ಹಾಗೂ ಇತರರು...

ಭೂಗತ ಜಗತ್ತಿನಲ್ಲಿ ನಡೆಯುವ ಕ್ರೈಂ, ಪ್ರೇಮಕಥೆಗಳನ್ನು ಹೇಳುವ ಹಲವಾರು ಚಲನಚಿತ್ರಗಳು ಬಂದು ಹೋಗಿವೆ.  ಗನ್, ಮಚ್ಚು ಲಾಂಗುಗಳ ಸದ್ದಿನ ನಡುವೆ ಅರಳುವ ಪ್ರೀತಿಯ  ಕಥೆಯನ್ನೂ ನಾವು ನೋಡಿದ್ದೇವೆ. ಆ ನಿಟ್ಟಿನಲ್ಲಿ ಈ ವಾರ ತೆರೆಗೆ ಬಂದಿರುವ ಚಿತ್ರ ಗನ್ಸ್ ಅಂಡ್ ರೋಸಸ್.  ಈ  ವರ್ಷದ ಮೊದಲ ಚಿತ್ರವಾಗಿ ತೆರೆಯಮೇಲೆ ಬಂದಿದೆ. ರಕ್ತದ ಕಲೆ ಒಮ್ಮೆ ಕೈಗೆ ಅಂಟಿದರೆ ಮುಗಿಯಿತು. ಅದು ಹೇಗೆ ಆರಂಭವಾಗುತ್ತೋ ಅದೇ ರೀತಿ ಮುಕ್ತಾಯುವಾಗುತ್ತೆ. ದಶಕಗಳ ಹಿಂದೆ ಕೊಲೆ, ಸುಲಿಗೆ ದರೋಡೆ ಮಾಡುತ್ತ ಮೆರೆಯುತ್ತಿದ್ದ  ರಾಜೇಂದ್ರನಿಗೆ  ಡ್ರಗ್ ಪೆಡ್ಲರ್ ನಾಯಕ್ ಜತೆಯಾಗುತ್ತಾನೆ. ನಂತರ  ಡ್ರಗ್ ದಂಧೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿ  ಇಬ್ಬರೂ ವೈರಿಗಳಾಗುತ್ತಾರೆ. ಮುಂದೆ ಜೈಲಿನಲ್ಲಿ ರಾಜೇಂದ್ರನ ಹುಡುಗರಿಂದ ಸತ್ಯನನ್ನ ಕಾಪಾಡುವ ಸೂರ್ಯ (ಅರ್ಜುನ್) ನಾಯಕ್ ಗ್ಯಾಂಗ್ ಸೇರಿಕೊಳ್ಳುತ್ತಾನೆ.
 
ಇದರ ನಡುವೆ ಡ್ರಗ್ಸ್  ಹಾವಳಿ ಹೆಚ್ಚಾದಾಗ  ಪೊಲೀಸ್ ಇಲಾಖೆಗೆ ಎನ್ ಕೌಂಟರ್ ಸ್ಪೆಷಲಿಸ್ಟ್ ಶಂಕರ್ ಎಂಟ್ರಿ ಆಗುತ್ತೆ. ರೌಡಿಗಳಿಗೆ ವಾರ್ನಿಂಗ್ ಕೊಟ್ಟರೂ ದಂದೆ ನಿಲ್ಲಿಸಲ್ಲ. ಸೂರ್ಯನ ಲುಕ್ , ಸ್ಟೈಲ್ ಮೆಚ್ಚಿ ರಾಜೇಂದ್ರನ ಮಗಳು ರಮ್ಯಾ( ಯಶ್ವಿಕ ನಿಷ್ಕಲ)  ಆತನನ್ನು ಪ್ರೀತಿಸುತ್ತಾಳೆ. ಅದನ್ನು  ನಿರಾಕರಿಸುವ ಸೂರ್ಯ ಆಕೆಗೆ ತನ್ನ ಹಿಂದಿನ ಕಥೆಯನ್ನು  ಹೇಳುತ್ತಾನೆ. ಈ ನಡುವೆ ಡ್ರಗ್ಸ್ ಪೆಡ್ಲರ್ ಗಳ ಗ್ಯಾಂಗ್ವಾರ್ , ಪೊಲೀಸ್ ಅಧಿಕಾರಿಯ ಸಾಥ್ ವಿಚಾರದ ಬಗ್ಗೆ  ಕ್ರೈಂ ಬ್ರಾಂಚ್ ಗೆ  ಮಾಹಿತಿ ಸಿಗುತ್ತದೆ.  ಈ ದಂಧೆಯನ್ನು ಬುಡ ಸಮೇತ ಕಿತ್ತುಹಾಕಲು ಯೋಜನೆ ಸಿದ್ದವಾಗುತ್ತದೆ. ಅದು ಹೇಗೆ? ಏನು ?  ಎಂಬುದನ್ನು ತೆರೆಯ ಮೇಲೇ ನೋಡಬೇಕು. 
 
ಕಥೆಗಾರ ಅಜಯ್ ಕುಮಾರ್ ತಮ್ಮ ಪುತ್ರ ಅರ್ಜುನ್ ಗಾಗಿ  ಭೂಗತ ಲೋಕದಲ್ಲಿ ಅರಳುವ ಪ್ರೇಮ ಕಥೆಯೊಂದನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಕಥೆ ವಿಶೇಷ ಅನಿಸದಿದ್ದರೂ, ಚಿತ್ರಕಥೆ ಗಮನ ಸೆಳೆಯುತ್ತದೆ. ನಾಯಕನಾಗಿ ಅರ್ಜುನ್ ತನ್ನ ಮೊದಲ ಪ್ರಯತ್ನದಲ್ಲೇ ಗಮನ ಸೆಳೆಯುವ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೂ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ
ಸ್ವಲ್ಪ ಪಳಗಬೇಕಿದೆ. ಆಕ್ಷನ್ ಸೀನ್ ಗಳನ್ನು ಮಾತ್ರ ಲೀಲಾಜಾಲವಾಗಿ ನಿಭಾಯಿಸಿದ್ದಾರೆ.
 
ಉಳಿದಂತೆ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಿಶೋರ್  ಮಿಂಚಿದ್ದಾರೆ, ಎನ್ ಕೌಂಟರ್ ಸ್ಪೆಷಲ್ ಆಫೀಸರ್ ಆಗಿ ನೀನಾಸಂ ಅಶ್ವತ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿಯಾಗಿ ಯಶ್ವಿಕ ನಿಷ್ಕಲ ಸಿಕ್ಕ ಅವಕಾಶದಲ್ಲಿ  ಗಮನ ಸೆಳೆಯುತ್ತಾರೆ. 
ಉಳಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿವೆ. ಚಿತ್ರದಲ್ಲಿ ಸಾಹಸ ಸನ್ನಿವೇಶಗಳು ಗಮನ ಸೆಳೆಯುತ್ತವೆ. ಸಂಗೀತ, ಛಾಯಾಗ್ರಹಣ ಮೆಚ್ಚುವಂತಿದೆ. ಭೂಗತ ಜಗತ್ತಿನ ರೌಡಿಗಳ ಅಟ್ಟಹಾಸ, ಡ್ರಗ್ ಮಾಫಿಯಾ,  ದಂದೆ ಕೋರರ ಪ್ಲಾನ್ , ಅಲ್ಲೊಂದು ನಿಷ್ಕಲ್ಮಶ ಪ್ರೀತಿ ಸೇರಿದಂತೆ ಹಲವು ವಿಚಾರಗಳನ್ನು ಗನ್ಸ್ ಅಂಡ್ ರೋಜಸ್ ಹೊತ್ತು ತಂದಿದ್ದು, ವೀಕೆಂಡ್ ನಲ್ಲಿ ಥಿಯೇಟರಿಗೆ ಹೋಗಿ ಒಮ್ಮೆ ಈ ಚಿತ್ರ ವೀಕ್ಷಿಸಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗನ್ಸ್ ಅಂಡ್ ರೋಜಸ್ ಭೂಗತ ಜಗತ್ತಿನಲ್ಲೊಂದು ಪ್ರೇಮಕಥೆ... ರೇಟಿಂಗ್ : 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.