Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉತ್ತರಹಳ್ಳಿಯಿಂದ ಉತ್ತರ ಖಂಡದವರಿಗೆ ಸಂಚರಿಸಿದ ಕಾರು``ಪಾರು ಪಾರ್ವತಿ`` ಚಿತ್ರದ ನಾಲ್ಕನೇ ಪ್ರಮುಖ ಪಾತ್ರಧಾರಿ ಬಿಗ್ ಬಾಸ್ ಖ್ಯಾತಿಯ ದೀಪಿಕಾದಾಸ್ ಅಭಿನಯದ ಈ ಚಿತ್ರ ಜನವರಿ 31 ರಂದು ತೆರೆಗೆ
Posted date: 12 Sun, Jan 2025 05:36:05 PM
EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಂನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ "ಬಿಗ್ ಬಾಸ್" ಖ್ಯಾತಿಯ ದೀಪಿಕಾ ದಾಸ್, ಪೂನಂ ಸಿರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ "# ಪಾರು ಪಾರ್ವತಿ" ಚಿತ್ರದ ನಾಲ್ಕನೇ ಪ್ರಮುಖಪಾತ್ರಧಾರಿಯನ್ನು ಇಂದು ಚಿತ್ರತಂಡ ಪರಿಚಯಿಸಿತು. ಜತೆಗೆ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಯಿತು. ಆ ಪ್ರಮುಖಪಾತ್ರಧಾರಿ ಬೇರೆ ಯಾರು ಅಲ್ಲ. ಚಿತ್ರದಲ್ಲಿ ಎಂಟು ರಾಜ್ಯಗಳನ್ನು ಸುತ್ತಿದೆ ಈ ಕಾರು. ಈ‌ ವಿಷಯಗಳ ಬಗ್ಗೆ ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಮಾತನಾಡಿದ್ದು ಹೀಗೆ.

ಇದೊಂದು ಟ್ರಾವೆಲ್ ಅಡ್ವೆಂಚರ್ ಡ್ರಾಮ ಜಾನರ್ ನ ಚಿತ್ರ ಎಂದು ಮಾತನಾಡಿದ ನಿರ್ದೇಶಕ ರೋಹಿತ್ ಕೀರ್ತಿ, ನಮ್ಮ‌ ಚಿತ್ರ ಮೂರು ಪ್ರಮುಖ ಪಾತ್ರಗಳ ಜೊತೆಗೆ ಸಾಗುತ್ತದೆ.‌ ದೀಪಿಕಾ ದಾಸ್, ಪೂನಂ ಸಿರ್‌‌ ನಾಯಕ್‌ ಹಾಗೂ ಫವಾಜ್ ಆಶ್ರಫ್ ಮೂರು ಪ್ರಮುಖ ಪಾತ್ರಧಾರಿಗಳು. ಇವರೊಟ್ಟಿಗೆ ಮತ್ತೊಂದು ‌ಪ್ರಮುಖಪಾತ್ರಧಾರಿ ಎಂದರೆ ಅದು ಕಾರು. ಟ್ರಾವೆಲ್ ಕಥಾಹಂದರ ಹೊಂದಿರುವ ಚಿತ್ರವಾಗಿರುವುದರಿಂದ ಕಾರು ಸಹ ಚಿತ್ರದಲ್ಲಿ ಪ್ರಮುಖಪಾತ್ರ ವಹಿಸುತ್ತದೆ.‌ ಜನವರಿ 31ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಸಂಕ್ರಾಂತಿ ದಿನ ನಮ್ಮ ಚಿತ್ರದ ಟ್ರೇಲರ್ ಅನಾವರಣವಾಗಲಿದೆ. ಈಗ ಈ ಕಾರು ಪ್ರಚಾರದ ಸಲುವಾಗಿ ಕರ್ನಾಟಕದಾದ್ಯಂತ ಚಲಿಸಲಿದೆ. ಯೂಟ್ಯೂಬರ್ ಶ್ರೀಕಾಂತ್ ಅವರು ಕಾರನ್ನು ಚಲಿಸಿಕೊಂಡು ಪಯಣಿಸಲಿದ್ದಾರೆ ಎಂದರು. 

ನಾನು ಮೊದಲೇ ತಿಳಿಸಿದಂತೆ ಇದೊಂದು ಪ್ರಯಾಣ ಹಾಗೂ ಅಡ್ವೆಂಚರ್ಸ್ ಕಥನಾ. ಆದರೆ ಈ ಚಿತ್ರದಲ್ಲಿ ಬರೀ ಪ್ರವಾಸ ಮಾತ್ರ ಇಲ್ಲ. ಪ್ರೇಕ್ಷಕರು ಕುಟುಂಬ ಸಮೇತ ನೋಡಬಹುದಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಇನ್ನು ಕಾರಿನ ಜೊತೆಗೆ ಕರ್ನಾಟಕದಿಂದ ಉತ್ತರ ಖಂಡದವರೆಗೂ ಎಂಟು ರಾಜ್ಯಗಳನ್ನು ಸಂಚರಿಸಿದ ಅನುಭವ ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಾಯಲ್ ನನ್ನ ಪಾತ್ರದ ಹೆಸರು ಎಂದು ನಾಯಕಿ ದೀಪಿಕಾ ದಾಸ್ ತಿಳಿಸಿದರು. 

ಜನವರಿ 31 ರಂದು ಬಿಡುಗಡೆಯಾಗಲಿರುವ ನಮ್ಮ ಚಿತ್ರಕ್ಕೆ  ಎಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕ ಪಿ.ಬಿ.ಪ್ರೇಂನಾಥ್ ಮನವಿ ಮಾಡಿದರು. ಛಾಯಾಗ್ರಾಹಕ ಅಬಿನ್ ರಾಜೇಶ್ ಚಿತ್ರೀಕರಣ ಸಮಯದ ಅನುಭವ ಹಂಚಿಕೊಂಡರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉತ್ತರಹಳ್ಳಿಯಿಂದ ಉತ್ತರ ಖಂಡದವರಿಗೆ ಸಂಚರಿಸಿದ ಕಾರು``ಪಾರು ಪಾರ್ವತಿ`` ಚಿತ್ರದ ನಾಲ್ಕನೇ ಪ್ರಮುಖ ಪಾತ್ರಧಾರಿ ಬಿಗ್ ಬಾಸ್ ಖ್ಯಾತಿಯ ದೀಪಿಕಾದಾಸ್ ಅಭಿನಯದ ಈ ಚಿತ್ರ ಜನವರಿ 31 ರಂದು ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.