ಭಾರತೀಯ ಚಿತ್ರರಂಗದ ಘಟಾನುಘಟಿ ನಾಯಕರುಗಳ ಸಂಗಮದ ಅದ್ದೂರಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರ " ಕಣ್ಣಪ್ಪ " ಏಪ್ರಿಲ್ 25 ರಂದು ಬಹುಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ತೆಲುಗಿನ ಹಿರಿಯ ನಟ ಮೋಹನ್ ಬಾಬು ನಿರ್ಮಾಣದ ಈ ಚಿತ್ರದಲ್ಲಿ ಅವರ ಪುತ್ರ ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮುಖೇಶ್ ಕುಮಾರ್ ಸಿಂಗ್ ಆಕ್ಷನ್ ಕಟ್ ಹೇಳಿದ್ದಾರೆ.
ವಿವಿಧ ಭಾಷೆಯ ನಟರಾದ ಮೋಹನ್ ಲಾಲ್, ಅಕ್ಷಯ್ ಕುಮಾರ್ ,ಪ್ರಭಾಸ್ , ಶರತ್ ಕುಮಾರ್ , ದೇವರಾಜು, ಕಂಗನಾ ರಣಾವತ್, ಮೋಹನ್ ಬಾಬು, ಕಾಜಲ್, ಸೇರಿದಂತೆ ಮತ್ತಿತರರು ನಟಿಸಿದ್ದು ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಕುತೂಹಲ ಮತ್ತಷ್ಟು ಮಾಡಿದೆ.
ನಾಯಕ ವಿಷ್ಣು ಮಂಚು ಮಾತನಾಡಿ, ಅಲ್ಪ ಸ್ವಲ್ಪ ಕನ್ನಡ ಬರುತ್ತೆ ಎಂದರೆ ಅದಕ್ಕೆ ಹಿರಿಯ ನಟ ಅಂಬರೀಶ್ ಅಂಕಲ್ ಕಾರಣ. 1953ರಲ್ಲಿ ವರನಟ ಡಾ. ರಾಜ್ ಕುಮಾರ್ ಅವರು ಬೇಡರ ಕಣ್ಣಪ್ಪ ಚಿತ್ರ ಮಾಡಿದ್ದರು. ಆ ಚಿತ್ರವನ್ನು ತೆಲುಗಿನಲ್ಲಿ ಕೃಷ್ಣಂ ರಾಜ್ ರಿಮೇಕ್ ಮಾಡಿದ್ದರು. ಐದು ದಶಕಗಳ ನಂತರ ಅದೇ ಮಾದರಿಯ ಚಿತ್ರವನ್ನು ಮಾಡುತ್ತಿದ್ದೇವೆ. ಆದರೆ ಕಥ ಅದಲ್ಲ. ಈಗಿನ ಕಾಲಕ್ಕೆ ತಕ್ಕಂತೆ ಹೊಂದಿಸಿಕೊಂಡು ಚಿತ್ರ ಮಾಡಲಾಗಿದೆ. ಸ್ವಿಟ್ಜರ್ಲೆಂಡ್‍ನಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಭಾರತದಿಂದ ಕರೆದುಕೊಂಡು ಹೋಗಿದ್ದ 600ಕ್ಕೂ ಹೆಚ್ಚು ಮಂದಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. 70 ಮಂದಿ ಥಾಯ್‍ಲೆಂಡ್‍ನ ಮಂದಿ ಸೇರಿದಂತೆ ಬಹುಭಾಷೆಯ ಬಹುತಾರಾಗಣದ ಜೊತೆಗೆ ಅದ್ದೂರಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದರು
40-50 ವರ್ಷಗಳ ಹಿಂದೆ ಈ ಮಾದರಿಯ ಚಿತ್ರಗಳನ್ನು ವೀಕ್ಷಿಸುವ ಜನರು ಇದ್ದರು. ಈಗ ಕಾಲ ಬದಲಾಗಿದೆ. ಬದಲಾದ ಸನ್ನಿವೇಶಕ್ಕೆ ತಕ್ಕಂತ ಚಿತ್ರ ಮಾಡಿದ್ದೇವೆ. ನಮ್ಮ ಅದೃಷ್ಠ ಎನ್ನುವಂತೆ ಏಪ್ರಿಲ್ 24 ರಂದು ಡಾ.ರಾಜ್ ಕುಮಾರ್ ಹುಟ್ಟುಹಬ್ಬವಿದೆ. ಮರುದಿನವೇ ಚಿತ್ರ ಬಿಡುಗಡೆಯಾಗುತ್ತಿದೆ. ವಿದೇಶದಲ್ಲಿ ಏಪ್ರಿಲ್ 24ರಂದೇ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಚಿತ್ರದ ವಿತರಣೆ ಜವಾಬ್ದಾರಿ ಪಡೆದಿರುವ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ನಿರ್ಮಾಪಕ ಮೋಹನ್ ಬಾಬು ಅವರು ಒಮ್ಮೆ ಕಾಲ್ ಮಾಡಿ ಸಿನಿಮಾ ನೋಡು ಎಂದರು. ಚಿತ್ರ ಅದ್ಬುತವಾಗಿ ಮೂಡಿ ಬಂದಿದೆ. ಕಣ್ಣಪ್ಪ ಚಿತ್ರವನ್ನು ಮೊದಲು ಡಾ. ರಾಜ್ ಕುಮಾರ್ ಮಾಡಿದ್ದರು. ಈಗ ಮೋಹನ್ ಬಾಬು ಪುತ್ರ ವಿಷ್ಣು ಮಾಡಿದ್ದಾರೆ . 100 ದಿನಗಳ ಕಾಲ ನ್ಯೂಜಿಲೆಂಡ್ ಚಿತ್ರ ನಿರ್ಮಾಣ ಮಾಡಿರುವುದು ಹೆಗ್ಗಳಿಕೆಯೇ ಸರಿ. ಜೊತೆಗೆ ತಂತ್ರಜ್ಞಾನ ಬಳಸಿರುವುದು ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದೆ. ಚಿತ್ರ ಮಾಡಿದ ನಂತರ ಮಾರಾಟ, ಮಾರಾಟ, ಬಿಡುಗಡೆ ಎಷ್ಡು ಕಷ್ಟ ಇದೆ ಎನ್ನುವುದು ಗೊತ್ತಿದೆ. ಚಿತ್ರಕ್ಕೆ ಎಲ್ಲರೂ ಬೆನ್ನಲುಬಾಬು ನಿಲ್ಲಿ ಎಂದು ಮನವಿ ಮಾಡಿದರು
ನಿರ್ದೇಶಕ ಮುಖೇಶ್ ಕುಮಾರ್ ಮಾತನಾಡಿ, ಡಾ. ರಾಜ್ ಕುಮಾರ್ ಅಭಿನಯದ ಬೇಡರ ಕಣ್ಣಪ್ಪ ಚಿತ್ರ ನೋಡಿದೆ. ಅಂತಹ ಚಿತ್ರವನ್ನು ಮತ್ತೆ ಪುನರ್ ನಿರ್ಮಾಣ ಮಾಡಲು ಸಾದ್ಯವಿಲ್ಲ.ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡುವುದು ಸವಾಲಿನ ಕೆಲಸ ಅದರಲ್ಲಿಯೂ ಧಾರ್ಮಿಕ ಚಿತ್ರ ಮಾಡುವುದು ಕಷ್ಟವೇ ಸರಿ. ಇದಕ್ಕಾಗಿ ಮೋಹನ್ ಬಾಬು ಮತ್ತು ವಿಷ್ಣು ಮಂಚು ಅವರನ್ನು ಅಭಿನಂಧಿಸುವುದಾಗಿ ತಿಳಿಸಿದರು.
ಹಿರಿಯ ನಟ ಶರತ್ ಕುಮಾರ್ ಮಾತನಾಡಿ ಚಿತ್ರದಲ್ಲಿ ಬುಡಕಟ್ಟು ಸಮುದಾಯದ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಧಾರ್ಮಿಕ ಸಿನಿಮಾ ಮಾಡುವುದು ಸವಾಲಿನ ಕೆಲಸ. ವಿಷ್ಣು ಒಂದು ಎಳೆಯ ಕಥೆ ಕೇಳಿ ಥ್ರಿಲ್ ಆದೆ. ಸ್ವಿಟ್ಜರ್ಲೆಂಡ್ ವಾತಾವರಣದಲ್ಲಿ ಚಿತ್ರೀಕರಣ ಮಾಡಿದ್ದು ವಿಶೇಷ ಅನುಭವ, ಬಹುತಾರಾಗಣವಿದೆ ಎಲ್ಲಾ ಪಾತ್ರಗಳಿಗೆ ಅದರೇ ಆದ ಮಹತ್ವವಿದೆ. ದೇವರ ಮೇಲೆ ನಂಬಿಕೆ ಮತ್ತು ನಂಬಿಕೆ ಇಲ್ಲದವರೆ ನಡುವಿನ ಕಥೆ ಚಿತ್ರದಲ್ಲಿದೆ.ವಿಷ್ಣು ಮಂಚು ಅವರ ಸಮರ್ಪಣಾ ಭಾವ ಅದ್ಬುತವಾಗಿತ್ತು. ಒಟಿಟಿ ಯಲ್ಲಿ ಚಿತ್ರ ನೋಡುವ ಸಂಖ್ಯೆ ಹೆಚ್ಚಾಗಿದೆ. ಚಿತ್ರ ಜನರ ಮನಸ್ಸು ಗೆಲ್ಲಲಿದೆ ಎಂದರು
ನೃತ್ಯ ನಿರ್ದೇಶಕ ಪ್ರಭುದೇವ ಮಾತನಾಡಿ, ಕಣ್ಣಪ್ಪ ಚಿತ್ರ ಮಾಡಲು ಹಿಂದಿಯವರಾ ಎನ್ನುವ ಅನುಮಾನ ಮೂಡಿತ್ತು.ಮುಕೇಶ್ ಕುಮಾರ್ ನಿರ್ದೇಶನ ಮಹಾಭಾರತ ನೋಡಿದ ನಂತರ ಅವರೇ ಸೂಕ್ತ ಎನಿಸಿತು.ನಾಯಕಿ ಪ್ರೀತಿ ಮೋಹನ್ ಅದ್ಬುತವಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದೇನೆ. ನೃತ್ಯವೇ ಇಲ್ಲದೆ ನೃತ್ಯ ಸಂಯೋಜನೆ ಮಾಡುವುದು ಸವಾಲಾಗಿತ್ತು. ಮೋಹನ್ ಬಾಬು ಅವರು ಡ್ಯಾನ್ಸ್ ಮಾಡಲು ಕೆಲವೊಮ್ಮೆ 17-18 ಟೇಕ್ ತೆಗೆದುಕೊಂಡಿದ್ದಾರೆ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹವಿರಲಿ ಎಂದು ಕೇಳಿಕೊಂಡರು.