ಚಿತ್ರ : ಕಣ್ಣಾ ಮುಚ್ಚೆ ಕಾಡೇ ಗೂಡೇ
ನಿರ್ದೇಶಕ : ನಟರಾಜ್ ಕೃಷ್ಣೇಗೌಡ
ನಿರ್ಮಾಪಕರು : ಅನಿತಾ ವೀರೇಶ್ ಕುಮಾರ್ , ಮೀನಾಕ್ಷಿ ರಾಜಶೇಖರ್
ಸಂಗೀತ : ಶ್ರೀ ಸಾಸ್ತ
ಛಾಯಾಗ್ರಹಣ : ದೀಪಕ್
ತಾರಾಗಣ : ರಾಘವೇಂದ್ರ ರಾಜ್ ಕುಮಾರ್ , ಅಥರ್ವ ಪ್ರಕಾಶ್ , ಪ್ರಾರ್ಥನಾ, ವೀರೇಶ್ ಕುಮಾರ್ , ಜ್ಯೋತಿಷ್ ಶೆಟ್ಟಿ , ದೀಪಕ್ ರೈ, ಅರವಿಂದ ಬೋಳಾರ್, ರವಿ ರಾಮಕುಂಜ, ಚಂದ್ರಕಲಾ ಇತರರು...
ಒಂದು ಕೊಲೆ, ಆ ಕೊಲೆಯ ಹಿಂದಿನ ರಹಸ್ಯ ಪತ್ತೆಹಚ್ಚಲು ಬರುವ ಪೊಲೀಸ್ ಹಾಗೂ ಪ್ರೈವೇಟ್ ಡಿಟೆಕ್ಟಿವ್ ನಡುವಿನ ಸಂಘರ್ಷ. ಈ ನಡುವೆ ಆಸ್ತಿಯ ಆಸೆಯಿಂದ ತಂದೆ, ಸಹೋದರಿ ಎಂದೂ ನೋಡದೆ ಕೊಲೆ ಮಾಡಲು ಮುಂದಾಗುವ ಮಗ,
ಇದೆಲ್ಲವನ್ನೂ ಇಟ್ಟಿಕೊಂಡು ಗೇಮ್ ಪ್ಲಾನ್ ಥರ ಸಾಗುವ ಕಥೆಯನ್ನು ಈ ವಾರ ತೆರೆಕಂಡಿರುವ "ಕಣ್ಣಾ ಮುಚ್ಚೆ ಕಾಡೇ ಗೂಡೇ" ಚಿತ್ರದಲ್ಲಿ ಕಾಣಬಹುದು.
ಡಾಕ್ಟರ್ ಸುಧಾಕರ್ (ರಾಘವೇಂದ್ರ ರಾಜ್ ಕುಮಾರ್). ಅವರು ನಿವೃತ್ತಿಯಾಗುವ ಕೊನೆಯ ದಿನ ಪೋಸ್ಟ್ ಮಾರ್ಟಂ ಮಾಡಿದ ವ್ಯಕ್ತಿಯ ಸುತ್ತ ಈ ಚಿತ್ರಕಥೆ ಸಾಗುತ್ತದೆ. ಪೊಲೀಸರಿಗೂ ಮುಂಚೆ ಡಿಟೆಕ್ಟಿವ್ ರಾಮ್(ಅಥರ್ವ ಪ್ರಕಾಶ್)ಗೆ ಸಿಗುವ ಮಾಹಿತಿ.
ತನಿಖೆಯ ಹಾದಿಯಲ್ಲಿ ತಮ್ಮನ್ನೇ ಓವರ್ ಟೇಕ್ ಮಾಡುವ ರಾಮ್ ಮೇಲೆ ಇನ್ಸ್ಪೆಕ್ಟರ್ ದಶಮುಖ (ಜ್ಯೋತಿಷ್ ಶೆಟ್ಟಿ) ಸಿಡಿಮಿಡಿಗೊಳ್ಳುತ್ತಾನೆ. ಡಿಟೆಕ್ಟಿವ್ ಏಜೆನ್ಸಿಯಲ್ಲಿ ಕೆಲಸ ಕೇಳಿಕೊಂಡು ಬರುವ ಜಾನವಿ (ಪ್ರಾರ್ಥನಾ) ಮೇಲೆ ರಾಮ್ ಗೆ ಲವ್ವಾಗುತ್ತೆ
ಆ ಪ್ರೀತಿ ಮದುವೆಯ ಹಂತಕ್ಕೆ ಬರುತ್ತದೆ. ಮತ್ತೊಂದೆಡೆ ಪೊಲೀಸ್ ನೀಡುವ ಚಾಲೆಂಜ್ ಗೆ ಭೇದಿಸಲು ಮುಂದಾದ ರಾಮ್ ಬದುಕಲ್ಲಿ ಪ್ರೇಯಸಿ ಜಾನು ಸಾವಿನ ವಿಡಿಯೋ ಬೇರೆಯದೇ ಗೊಂದಲವನ್ನ ಸೃಷ್ಟಿ ಮಾಡುತ್ತದೆ. ಆರು ತಿಂಗಳ ಹಿಂದೆ ಸತ್ತ ಜಾನವಿ, ಮೂರು ದಿನಗಳ ಹಿಂದೆ ರಾಮ್ ಜೊತೆ ಮದುವೆಗೆ ಒಪ್ಪುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಗೊಂದಲ ಮೂಡಿಸುತ್ತದೆ. ಇದೆಲ್ಲದರ ಹಿಂದೆ ಒಂದು ನಿಗೂಢ ಕಥೆ ತೆರೆದುಕೊಳ್ಳುತ್ತದೆ. ಶ್ರೀಮಂತನ ಇಬ್ಬರ ಪತ್ನಿಯರು, ಮಕ್ಕಳು, ಆಸ್ತಿಗಾಗಿ ಮಗ ವಿದ್ಯುತ್ (ವೀರೇಶ್) ಹೂಡುವ ತಂತ್ರ, ಹೀಗೆ ಕುತೂಹಲಕಾರಿಯಾಗಿ ಸಾಗುವ ಚಿತ್ರ ಕೊನೆಯ ಹಂತಕ್ಕೆ ಬಂದು ನಿಲ್ಲುತ್ತದೆ.
ಕೌಟುಂಬಿಕ ಕಲಹ, ಆಸ್ತಿಗಾಗಿ ಕೊಲೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ನಡೆಸುವ ಗೇಮ್ ಪ್ಲಾನ್ ಎಲ್ಲವೂ ಗಮನ ಸೆಳೆಯುತ್ತದೆ. ನಿರ್ದೇಶಕರ ಈ ಪ್ರಯತ್ನಕ್ಕೆ ನಿರ್ಮಾಪಕರ ಸಾತ್ ಮೆಚ್ಚುವಂತಿದೆ. ಸಂಗೀತ ಸೊಗಸಾಗಿದ್ದು , ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಇನ್ನು ಕಲಾವಿದರ ವಿಷಯಕ್ಕೆ ಬಂದರೆ ಡಾಕ್ಟರ್ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ತಮ್ಮ ಪಾತ್ರಕ್ಕೆ ನ್ಯಾಯ ನೀಡಿದ್ದು, ಚಿತ್ರದ ಆರಂಭ ಹಾಗೂ ಅಂತ್ಯಕ್ಕೆ ಕೊಂಡಿಯಾಗಿದ್ದಾರೆ.
ನಾಯಕ ಅಥರ್ವ ಪ್ರಕಾಶ್ ಡಿಸ್ಟ್ರಿಕ್ಟಿವ್ ಏಜೆಂಟ್ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ನಟಿ ಪ್ರಾರ್ಥನಾ ಸುವರ್ಣ ಕೂಡ ಎರಡು ಶೇಡ್ ಗಳಲ್ಲಿ ಗಮನ ಸೆಳೆದಿದ್ದು , ಚಿತ್ರದ ಕೇಂದ್ರ ಬಿಂದುವಾಗಿ ಮಿಂಚಿದ್ದಾರೆ. ಇನ್ಸ್ಪೆಕ್ಟರ್ ಪಾತ್ರದಲ್ಲಿ ಜ್ಯೋತಿಷ್ಯ ಶೆಟ್ಟಿ ಗಮನ ಸೆಳೆದಿದ್ದಾರೆ.
ಇನ್ನು ನೆಗೆಟಿವ್ ಷೇಡ್ ನಲ್ಲಿ ವೀರೇಶ್ ಕುಮಾರ್ , ಲಾಯರ್ ಪಾತ್ರದಲ್ಲಿ ದೀಪಕ್ ರೈ ಪಾಣಾಜೆ , ಪೊಲೀಸ್ ಪಾತ್ರದಲ್ಲಿ ಅರವಿಂದ್ ಬೋಳಾರ್ , ಅಸಿಸ್ಟೆಂಟ್ ಡಿಟೆಕ್ಟಿವ್ ಆಗಿ ರವಿ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಮನ
ರಂಜನೆಯ ದೃಷ್ಟಿಯಿಂದ ಈ ಚಿತ್ರವನ್ನು ಒಮ್ಮೆ ನೋಡಿ ಎಂಜಾಯ್ ಮಾಡಬಹುದು.