ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ಆರೂನ್ ಕಾರ್ತಿಕ್ ನಿರ್ದೇಶನದ " ಜಸ್ಟೀಸ್ " ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ. ಚಿತ್ರ ಫೆಬ್ರವರಿ 7 ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತದ ಜೊತೆಗೆ ನಿರ್ದೇಶನ ಮಾಡಿರುವ ಆರೂನ್ ಕಾರ್ತಿಕ್ ಅವರ ಪ್ರಯತ್ನಕ್ಕೆ ಆಹಮ್ಮದ್ ಆಲಿ ಖಾನ್ ಮತ್ತು ಮಹಮ್ಮದ್ ಜಾವೇದ್ ಬಂಡವಾಳ ಹೂಡಿದ್ದಾರೆ.
"ಜಸ್ಟೀಸ್ " ಚಿತ್ರದ ಅಡಿ ಬರಹದಲ್ಲಿ " ನೋ ಜಸ್ಟೀಸ್ ನೋ ಪೀಸ್ ಎನ್ನುವ ಸಾಲು ಇದೆ. ಚಿತ್ರದಲ್ಲಿ ಸರ್ಕಾರ್ ಸಾಹಿಲ್- ರಿಯಾ ಭಾಸ್ಕರ್ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಪೋಸ್ಟರ್ ಅನ್ನು ನಟ ಶರಣ್ ಬಿಡುಗಡೆ ಮಾಡಿ ಜಸ್ಟೀಸ್ ಚಿತ್ರರಂಗಕ್ಕೆ ಶುಭ ಹಾರೈಸಿದ್ದಾರೆ.
ಬಾಲಿವಿಡ್ ನಟ ಮನೋಜ್ ಮಲ್ಹೋತ್ರ ಪ್ರತಿಕ್ರಿಯೆ ನೀಡಿ ಜಸ್ಟೀಸ್ ಚಿತ್ರದ ಕಥಾವಸ್ತು ಚೆನ್ನಾಗಿದೆ. ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ.ನಿರ್ದೇಶಕ ಆರೂನ್ ಕಾರ್ತಿಕ್ ಮತ್ತವರ ತಂಡದ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಅತ್ಯಾಚಾರಿಗೆ ಶಿಕ್ಷೆಯಾಗಬೇಕು ಎನ್ನುವ ಗಟ್ಟಿ ಸಂದೇಶ ಹೊತ್ತು ಚಿತ್ರ ಮೂಡಿ ಬಂದಿದೆ., ಜೊತೆಗೆ ಮಹಿಳಾ ಸಬಲಕೀರಣದ ಕುರಿತು ಚಿತ್ತದ ಬಗ್ಗೆ ಸಂದೇಶವಿದೆ.
ಚಿತ್ರದಲ್ಲಿ ಸಾಹಿಲ್ ಖಾನ್, ನವಾಜ್, ಚೇತನ್ ಕೃಷ್ಣ,ಗಣೇಶ್ ರಾವ್, ಸುರೇಶ್ ಬಾಬು, ಟಿಕ್ ಟಾಕ್ ನಜೀರ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆ ಮತ್ತು ಸಂದೇಶ ಜನರಿಗೆ ಇಷ್ಡವಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ನಿರ್ದೇಶಕ ಆರೂನ್ ಕಾರ್ತಿಕ್ ಹೇಳಿದ್ದಾರೆ.