ಪ್ರೊ.ಬರಗೂರಪ್ಪ ಅವರ ಹೊಸ ಚಿತ್ರ "ಸ್ವಪ್ನ ಮಂಟಪ" ಚಿತ್ರದ ಹಾಡುಗಳ ಬಿಡುಗಡೆಯಾಗಿದೆ. ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ ಮತ್ತು ನಟಿ ರಂಜನಿ ರಾಘವನ್ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳ ಪ್ರದರ್ಶನದ ನಂತರ ಕಾನುನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್. ಕೆ ಪಾಟೀಲ್ ಹಾಡು ಬಿಡುಗಡೆ ಮಾಡಿ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಮತ್ತವರ ತಂಡದ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿ ಮಹತ್ವ ಉಳಿದಿಲ್ಲ. ಆದರೆ ಪ್ರೊಫೆಸರ್ ಏನೇ ಬರೆದರೂ ಅವರಿಗೆ ಪ್ರಶಸ್ತಿ ಬರುತ್ತೆ ಸ್ವಪ್ನ ಮಂಟಪದ ಕಥೆ ಚೆನ್ನಾಗಿದೆ ಕಾದಂಬರಿ ಆದಾರಿತ ಚಿತ್ರ ನೋಡುವರು ಮಾಡುವರ ಸಂಖ್ಯೆ ಕಡಿಮೆ ಇದೆ. ಇಂತ ಸಮಯದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದರು.
ಈ ವೇಳೆ ಮಾತನಾಡಿದ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ, 25 ವರ್ಷಗಳ ಹಿಂದೆ ವಾರಪತ್ರಿಕೆಯಲ್ಲಿ ಪ್ರಕಟವಾದ ಕಾದಂಬರಿ "ಸ್ವಪ್ನ ಮಂಟಪ" ಇದೀಗ ಅದನ್ನು ಚಿತ್ರ ರೂಪದಲ್ಲಿ ಕಟ್ಟಿಕೊಡಲಾಗಿದೆ. ಚಾರಿತ್ರಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ ಪರಂಪರೆ ಉಳಿಸಬೇಕು ಎನ್ನುವ ಆಶಯವನ್ನು ಅಭಿವ್ಯಕ್ತಿ ಪಡಿಸುವ ಚಿತ್ರ ಇದು. ನಾಯಕ ಚರಿತ್ರೆಯ ಬಗೆಗೆ ಆಸಕ್ತಿ ಇರುವವನು, ನಾಯಕಿ ಸಮಾಜ ವಿಜ್ಞಾನದ ಬಗ್ಗೆ ಕುತೂಹಲ ಉಳ್ಳವಳು. ಚಾರಿತ್ರಿಕ ಮತ್ತು ಸಾಮಾಜಿಕ ಪ್ರಜ್ಞೆ ಎರಡೂ ಸೇರಿ ಸಮಾಜಮುಖಿ , ಇತಿಹಾಸ ಪ್ರಜ್ಞೆ ಇರಬೇಕು ಎನ್ನುವ ಜೊತೆ ಜೊತೆಗೆ ಸ್ಮಾರಕ ರಕ್ಷಣೆ ಮಾಡಬೇಕು ಎನ್ನುವ ಆದರ್ಶ ಮತ್ತು ಆಶಯ ಹೊಂದಿದೆ ಎಂದರು.
ಚಿತ್ರದಲ್ಲಿ ರಾಜನ ಕಥೆ ಬರುತ್ತದೆ. ಸ್ವಪ್ನ ಮಂಟಪದ ಪ್ರದೇಶ ಪ್ರವೇಶ ಮಾಡಿದರೆ ಸಾಕು ಕನಸುಗಳು ಅನಾವರಣವಾಗುವ ಪ್ರದೇಶ. ಇಂತಹ ವಾತಾವರಣವಿರುವ ಪ್ರದೇಶವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಮುಂದಾದಾಗ ನಾಯಕ ನಾಯಕಿ ಜನರನ್ನು ಜಾಗೃತಿ ಮೂಡಿಸಿ ಸ್ಮಾರಕ ರಕ್ಷಣೆ ಮಾಡುವ ತಿರುಳನ್ನು ಚಿತ್ರದ ಕಥಾವಸ್ತು ಎಂದು ಹೇಳಿದರು.
ಸ್ವಪ್ನ ಮಂಟಪ ಸೇರಿ 24 ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ. ಅದರಲ್ಲಿ ಇದುವರೆಗೂ ಬಿಡುಗಡೆಯಾದ 22 ಚಿತ್ರಗಳಿಗೆ ಒಂದಿಲ್ಲ ಒಂದು ರಾಜ್ಯ, ರಾಷ್ಟ್ರ ಪ್ರಶಸ್ತಿ ಬಂದಿವೆ. ಆದರೆ ಕಳೆದ ಹತ್ತು ಹನ್ನೆರಡು ವರ್ಷದಿಂದ ಚಿತ್ರಕ್ಕೆಂದೇ ಪ್ರಶಸ್ತಿ ಬಂದಿಲ್ಲ ಈ ಚಿತ್ರಕ್ಕೆ ಬರಬಹುದು ಎನ್ನುವ ಆಶಯವಿದೆ ಎಂದು ವಿಶ್ವಾಸ ಹೊರ ಹಾಕಿದರು.
ನಾಯಕಿ ರಂಜನಿ ರಾಘವನ್ ಮಾತನಾಡಿ ಚಿತ್ರದಲ್ಲಿ ಎರಡು ಪಾತ್ರಗಳನ್ನು ಮಾಡಿದ್ದೇನೆ. ಒಂದು ರಾಣಿಯ ಪಾತ್ರ ಮತ್ತೊಂದು ಶಿಕ್ಷಕಿ ಪಾತ್ರ ಚಿತ್ರದಲ್ಲಿ ನಟಿಸಿದ್ದು ಅದರಲ್ಲಿಯೂ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ್ದು ಕಲಿಕೆಗೆ ಸಿಕ್ಕ ಅವಕಾಶ ಎಂದು ಹೇಳಿದರು.
ಸಂಗೀತ ನಿರ್ದೇಶಕ ಡಾ. ಶಮಿತಾ ಮಲ್ನಾಡ್ ಮಾತನಾಡಿ, ಚಿತ್ರರಂಗದಲ್ಲಿ ಅವಕಾಶ ನೀಡಿದ ಗುರುಕಿರಣ್ ಹಾಗು ಗಾಯಕಿಯಾಗಿದ್ದ ನನ್ನನ್ನು ಸಂಗೀತ ನಿರ್ದೇಶಕಿಯನ್ನಾಗಿ ಮಾಡಿದ ಪ್ರೊ ಬರಗೂರು ರಾಮಚಂದ್ರಪ್ಪ ಅವರಿಗೆ ಸದಾ ಋಣಿ. ಮೊದಲೇ ಸಾಹಿತ್ಯ ರಚನೆ ಆಗಿತ್ತು. ಅದಕ್ಕೆ ಸಂಗೀತ ನೀಡುವುದು ಸವಾಲಾಗಿತ್ತು ಎಂದು ಹೇಳಿಕೊಂಡರು.
ಗಾಯಕರಾದ ಹೇಮಂತ್ , ಅಮೂಲ್ಯ ಮೈಸೂರು, ಸಿರಾ ಮೋಹನ್ , ಒಂದು ಹಾಡುನ್ನು ನಾನು ಹಾಡಿದ್ದೇನೆ. ವಿಜಯ್ ರಾಘವೇಂದ್ರ ಹಾಡಿದ್ದಾರೆ. ಇಡೀ ತಂಡವಾಗಿ ಕೆಲಸ ಮಾಡಿದ್ದಾರೆ. ನಿನಗಾಗಿ ಚಿತ್ರದಲ್ಲಿ ಮೊದಲ ಬಾರಿಗೆ ಗುರುಕಿರಣ್ ಹಾಡಲು ಅವಕಾಶ ಕೊಟ್ಟಿದ್ದರು. ನನ್ನನ್ನು ಪ್ರೊ. ಬರಗೂರು ರಾಮಚಂದ್ರಪ್ಪ ಸಂಗೀತ ನಿರ್ದೇಶಕರನ್ನಾಗಿ ಮಾಡಿದ್ದಾರೆ. ಅವರ ಜೊತೆ ಹಲವು ಚಿತ್ರಗಳಿಗೆ ಸಂಗೀತ ನೀಡಿದ್ದೇನೆ ಎಂದರು
ಸಂಗೀತ ನಿರ್ದೇಶಕ ಗುರುಕಿರಣ್, ತಂಡಕ್ಕೆ ಒಳ್ಳೆಯದಾಗಲಿ ,ಕನ್ನಡ ಚಿತ್ರರಂಗದಕ್ಲಿ ಹಲವು ಬಾಬು ಗಳು ಖ್ಯಾತಿ ಪಡೆದಿದ್ದಾರೆ ನಿಮಗೂ ಒಳ್ಳೆಯದಾಗಲಿ ಎಂದು ನಿರ್ಮಾಪಕ ಎ.ಎಂ ಬಾಬು ಮತ್ತೊಂದು ಕವಿತಾ ಬಾಬು ದಂಪತಿಗೆ ಎಂದು ಶುಭ ಹಾರೈಸಿದರು.
ಹಿರಿಯ ಕಲಾವಿದ ಸುಂದರ್ ರಾಜ್ ಮಾತನಾಡಿ ಮೇಷ್ಟು ಇದುವರೆಗೂ 24 ನೇ ಚಿತ್ರ ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ಬಹುತೇಕ ಚಿತ್ರದಲ್ಲಿ ನಟಿಸಿದ್ದೇನೆ. ಪಾತ್ರ ಬರೆಯುವಾಗಲೇ ಯಾವ ಯಾವ ಕಲಾವಿದರು ಎಂದು ಹೆಸರು ಬರೆದು ಬಿಡುತ್ತಾರೆ. 25 ವರ್ಷಗಳ ಹಿಂದಿನ ಕಾದಂಬರಿ , ವಾಸ್ತವಿಕ ಮತ್ತು ಕಾಲ್ಪನಿಕ ವಿಷಯದ ಜೊತೆಗೆ ಸಮತೆ ಮತ್ತು ಮಮತೆ ಇರಬೇಕು, ನಿರ್ಮಾಪರಕನ್ನು ಉಳಿಸುವ ಕೆಲಸ ಮಾಡಿದ್ದಾರೆ. ಈ ಚಿತ್ರಕ್ಕೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ನಿರೀಕ್ಷೆ ಮಾಡುತ್ತೇವೆ. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡಿಗೆ ಸರಿ ಸಮಾನವಾಗಿ ಕನ್ನಡದ ಹಾಡು ಮೂಡಿಬಂದಿದೆ ಎಂದರು