ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ "ಹೈನಾ" ಚಿತ್ರ ಇದೇ ತಿಂಗಳ 31 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಅನ್ನು ಸಂಸದ ತೇಜಸ್ವಿ ಸೂರ್ಯ ಅನಾವರಣ ಮಾಡಿ ಶುಭ ಹಾರೈಸಿದ್ದಾರೆ.
ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ಸಮಾಜಕ್ಕೆ ಸಂದೇಶ ನೀಡಲು ಸಿನಿಮಾ ಮಾಡಿದ್ದಾರೆ,ಪ್ರಚಲಿತ ವಿಷಯ ಮುಂದಿಟ್ಟುಕೊಂಡು ಜನರಲ್ಲಿ ಅರಿವು ಮೂಡಿಸುವ ಪ್ರಯತ್ಬ ಶ್ಲಾಘನೀಯ ಸಮಾಜದಲ್ಲಿ ಜಾಗೃತಿ ಉಂಟಾಗಲಿ, ವೆಂಕಟ್ ಭಾರಧ್ವಜ್ ಅವರ ಪ್ರಯತ್ನಕ್ಕೆ ಒಳ್ಳೆಯದಾಗಲಿ, ಇನ್ನಷ್ಟು ಸಿನಿಮಾ ಅವರಿಂದ ಬರಲಿ ಎಂದು ಹಾರೈಸಿದರು.
ನಿರ್ದೇಶಕ ವೆಂಕಟ್ ಭಾರಧ್ವಜ್ ಮಾತನಾಡಿ ಸೆನ್ಸಾರ್ ಮಂಡಳಿಯವರು ಬಾಂಗ್ಲಾದೇಶ ಮತ್ತು ರೋಹಿಂಗ್ಯಾ ಹೆಸರು ಬಳಸಬೇಡಿ ಎಂದಿದ್ದು ಬೇಸರ ತರಿಸಿದೆ. ನೈಘ ಘಟನೆಯನ್ನು ತೆರೆಗೆ ತರಲು ಮುಂದಾದಾಗ ನಮ್ಮವರಿಂದಲೇ ಸಹಕಾರ ಸಿಗುತ್ತಿಲ್ಲ ಎಂದು ಬೇಸದ ವ್ಯಕ್ತಪಡಿಸಿದರು.
ಇದೇ ಭಾರತೀಯ ಚಿತ್ರರಂಗದಲ್ಲಿ ಪೈರಸಿ ಹಾವಳಿ ಹೆಚ್ಚಾಗಿದ್ದು ಈ ವಿಷಯವನ್ನು ಸಂಸತ್ ನಲ್ಲಿ ಚರ್ಚೆ ಮಾಡಿ ಎಂದು ಸಂಸದ ತೇಜಸ್ವಿ ಸೂರ್ಯ ಅವರಿಗೆ .ಮನವಿ ಮಾಡಿದರು.
ಹೈನಾ" ಚಿತ್ರದಲ್ಲಿ ದೇಶಭಕ್ತಿ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. ಗುಪ್ತಾಚಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಇಲಾಖೆಯ ಕಾರ್ಯವೈಖರಿಯ ಬಗ್ಗೆ ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ. ಇದೇ 31 ರಂದು ಚಿತ್ರ ತೆರೆಗೆ ಬರುತ್ತಿದೆ ಎಂದು ಹೇಳಿದರು.
ಕಥೆ ಬರೆದಿರುವ ಲಕ್ಷಣ್ ಶಿವಶಂಕರ್ ಮಾತನಾಡಿ ಅಕ್ರಮ ವಲಸಿಗರು ದೇಶಕ್ಕೆ ನುಸುಳಿ, ಹೇಗೆ ಉಪಯೋಗಿಸುತ್ತಿದ್ಸಾರೆ . ದೇಶದ ಆಂತರಿಕ ಭದ್ರತೆ , ಭಯೋತ್ಪಾದಕರಿಗೆ ಹಣ ಹೇಗೆ ಬರುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅಕ್ಕ ಪಕ್ಕ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಛಾಯಾಗ್ರಾಹ ನಿಶಾಂತ್ ನಾಣಿ , ಸಂಕಲನಕಾರ ಶಮೀಕ್ ಸೇರಿದಂತೆ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
ಹೈನಾ ಚಿತ್ರದ ಲಿರಿಕಲ್ ವೀಡಿಯೊ ಜನರ ಮನ ಗೆದ್ದಿದೆ. ಟ್ರೇಲರ್ ಹಾಗೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದ್ದು ತಿಂಗಳಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ.
ಚಿತ್ರದಲ್ಲಿ ಹರ್ಷ ಅರ್ಜುನ್, ದಿಗಂತ ಸ್ವರೂಪ, ರಾಜ್ ಕಮಲ್, ಲಕ್ಷ್ಮಣ ಶಿವಶಂಕರ್, ನಂದಕಿಶೋರ್ ಮತ್ತು ಲಾರೆನ್ಸ್ ಪ್ರೀತಂ ಅವರಂತಹ ಪ್ರತಿಭಾನ್ವಿತ ನಟರ ತಾರಾಬಳಗವಿರುವ "ಹೈನಾ" ಚಿತ್ರಕ್ಕೆ ಲಕ್ಷ್ಮಣ್ ಶಿವಶಂಕರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಲವ್ ಪ್ರಾಣ್ ಮೆಹ್ತಾ ಸಂಗೀತ ನಿರ್ದೇಶನ, ನಿಶಾಂತ್ ನಾನಿ ಛಾಯಾಗ್ರಹಣ ಹಾಗೂ ಶಮಿಕ್ ವಿ ಭಾರದ್ವಾಜ್ ಸಂಕಲನವಿದೆ.