2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಸರ್ಕಾರ ಇಂದು ಪ್ರಕಟಿಸಿದ್ದು ಅತ್ಯುತ್ತಮ ನಟ ಪ್ರಶಸ್ತಿ ಕಿಚ್ಚ ಸುದೀಪ್ ಅವರಿಗೆ ಪೈಲ್ವಾನ್ ಚಿತ್ರಕ್ಕೆ ಲಭಿಸಿದೆ
ಅತ್ಯುತ್ತಮ ನಟಿ ಪ್ರಶಸ್ತಿ ಅನುಪಮಾ ಗೌಡ ಅವರಿಗೆ ತ್ರಯಂಬಕಂ ಚಿತ್ರದ ನಟನೆಗಾಗಿ ಪ್ರಶಸ್ತಿ ದೊರೆತಿದೆ.
ಅತ್ತುತ್ತಮ ಚಿತ್ರ ವಿಭಾಗದಲ್ಲಿ ಮೋಹನದಾಸ ಚಿತ್ರ ಆಯ್ಕೆಯಾಗಿದ್ದು, ಈ ಚಿತ್ರವನ್ನು ಪಿ. ಶೇಷಾದ್ರಿ ನಿರ್ದೇಶಿಸಿದ್ದು, ಕೆ.ಸಿ.ಎನ್. ಗೌಡ ನಿರ್ಮಾಣ ಮಾಡಿದ್ದಾರೆ.
ಎರಡನೇ ಅತ್ಯುತ್ತಮ ಚಿತ್ರ ಲವ್ ಮಾಕ್ ಟೈಲ್ ಗೆ ಪ್ರಶಸ್ತಿ ಲಭಿಸಿದ್ದು, ಡಾರ್ಲಿಂಗ್ ಕೃಷ್ಣ ಅವರಿಗೆ ನಿರ್ದೇಶಕ ಪ್ರಶಸ್ತಿ ಲಭಿಸಿದೆ.
ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಆರ್ಘ್ಯಂ ಚಿತ್ರಕ್ಕೆ ದೊರೆತಿದ್ದು, ಈ ಚಿತ್ರದ ನಿರ್ದೇಶಕರು ವೈ. ಶ್ರೀನಿವಾಸ್. ಸಾಮಾಜಿಕ ಕಳಕಳಿಯ ಚಿತ್ರ ಕನ್ನೇರಿಗೆ ಲಭಿಸಿದ್ದು, ಮಂಜುನಾಥ್ ಎಸ್, ನಿರ್ದೇಶಕರು.
ಅತ್ಯುತ್ತಮ ಮನರಂಜನಾ ಚಿತ್ರ ಇಂಡಿಯಾ ವರ್ಸರ್ ಇಂಗ್ಲೆಂಡ್ ಗೆ ಲಭಿಸಿದ್ದು, ಡಾ. ನಾಗತಿಹಳ್ಳಿ ಚಂದ್ರಶೇಖರ್ ಚಿತ್ರ ನಿರ್ದೇಶಿಸಿದ್ದಾರೆ.
* ಅತ್ಯುತ್ತಮ ಮಕ್ಕಳ ಚಿತ್ರ `ಎಲ್ಲಿ ಆಡೋದು ನಾವು – ಎಲ್ಲಿ ಆಡೋದು`
* ಪ್ರಥಮ ನಿರ್ದೇಶನದ ಚಿತ್ರ ಗೋಪಾಲ ಗಾಂಧಿ,
* ಪ್ರಾದೇಶಿಕ ಚಿತ್ರ ತ್ರಿಬಲ್ ತಲಾಖ್ ಗೆ ಲಭಿಸಿದೆ.
* ಪೋಷಕ ನಟ ಪ್ರಶಸ್ತಿ ತಬಲ ನಾಣಿ ಅವರಿಗೆ ಕೆಮಿಸ್ಟ್ರಿ ಆಫ್ ಕರಿಯಪ್ಪ,
* ಪೋಷಕ ನಟಿ ಅನುಷಾ ಕೃಷ್ಣ ಅವರಿಗೆ ಬ್ರಾಹ್ಮಿ ಚಿತ್ರಕ್ಕೆ
* ಅತ್ತುತ್ತಮ ಕಥೆ ಜಯಂತ್ ಕಾಯ್ಕಿಣಿ ಅವರ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಚಿತ್ರಕ್ಕೆ ಲಭಿಸಿದೆ.
* ಚಿತ್ರಕಥೆ ಲವ್ ಮಾಕ್ ಟೇಲ್ ಚಿತ್ರಕ್ಕಾಗಿ ಡಾರ್ಲಿಂಗ್ ಕೃಷ್ಣ,
* ಸಂಭಾಷಣೆ ಅಮೃಮತಿ ಚಿತ್ರಕ್ಕಾಗಿ ಬರಗೂರು ರಾಮಚಂದ್ರಪ್ಪ,
* ಸಂಗೀತ ನಿರ್ದೇಶನ ಯಜಮಾನ ಚಿತ್ರಕ್ಕಾಗಿ ವಿ. ಹರಿಕೃಷ್ಣ,
* ಸಂಕಲನ ಪ್ರಶಸ್ತಿ ಝಾನ್ಸಿ ಐಪಿಎಸ್ ಚಿತ್ರಕ್ಕೆ ಬಸವರಾಜ ಅರಸ್,
* ಬಾಲನಟ ಪ್ರಶಸ್ತಿ ಮಿಂಚುಹುಳ ಚಿತ್ರಕ್ಕಾಗಿ ಮಾಸ್ಟರ್ ಪ್ರೀತಂ,
* ಬಾಲನಟಿ ಪ್ರಶಸ್ತಿ ಸುಂಗದಿ ಚಿತ್ರಕ್ಕಾಗಿ ಬೇಬಿ ವೈಷ್ಣವಿ ಅಡಿಗ,
* ಕಲಾ ನಿರ್ದೇಶನ ಮೋಹನದಾಸ ಚಿತ್ರಕ್ಕಾಗಿ ಹೊಸಮನೆ ಮೂರ್ತಿ,
* ಪೆನ್ಸಿಲ್ ಬಾಕ್ಸ್ ಚಿತ್ರದ ರಜಾಕ್ ಪುತ್ತೂರ್ ಅವರಿಗೆ ಗೀತರಚನೆಗಾಗಿ,
* ಹಿನ್ನೆಲೆ ಗಾಯಕ ಪ್ರಶಸ್ತಿ ಲವ್ ಮಾಕ್ ಟೇಲ್ ಚಿತ್ರಕ್ಕಾಗಿ ರಘು ದೀಕ್ಷಿತ್,
ಹಿನ್ನೆಲೆ ಗಾಯಕಿ ರಾಗ ಭೈರವಿ ಚಿತ್ರಕ್ಕಾಗಿ ಡಾ. ಜಯದೇವಿ ಜಿಂಗಮಶೆಟ್ಟಿ,
ವಿಶೇಷ ತೀರ್ಪುಗಾರರ ಪ್ರಶಸ್ತಿ ಅಮೃತಮತಿ ಹಾಗೂ ತಮಟೆ ನರಸಿಂಹಯ್ಯ ಚಿತ್ರಕ್ಕೆ ಲಭಿಸಿವೆ.
ಅತ್ಯುತ್ತಮ ನಿರ್ಮಾಣ, ನಿರ್ವಾಹಕ ಪ್ರಶಸ್ತಿ ಆರ್. ಗಂಗಾಧರ್ ಗೆ ಲಭಿಸಿದೆ.
ನಂಜುಂಡೇಗೌಡ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ, ಪ್ರಶಸ್ತಿಗಾಗಿ ಸಲ್ಲಿಕೆಯಾಗಿದ್ದ 180 ಚಿತ್ರಗಳ ಪೈಕಿ 8 ಚಿತ್ರಗಳನ್ನು ಹೊರತುಪಡಿಸಿ, 172 ಚಿತ್ರಗಳನ್ನು ವೀಕ್ಷಿಸಿ ವಿವಿಧ ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.