ಬಹಳ ದಿನಗಳ ನಂತರ ಗಾಂಧಿನಗರದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಜಯಣ್ಣ ಫಿಲಂಸ್ ಮೂಲಕ ಜಯಣ್ಣ ಭೋಗೇಂದ್ರ ಅವರು ನಿರ್ಮಿಸಿರುವ ಬಹುನಿರೀಕ್ಷಿತ ಚಿತ್ರ `ರಾಯಲ್` ಇದೇ ಶುಕ್ರವಾರ ಜ.24 ರಂದು ನಾಳೆಯಿಂದ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ದರ್ಶನ್ ಸಹೋದರ ದಿನಕರ್ ತೂಗುದೀಪ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಇದಾಗಿದ್ದು, ಆರು ವರ್ಷಗಳ ನಂತರ ನಿರ್ದೇಶಕ ದಿನಕರ್ ತೂಗುದೀಪ ಅವರು ಆಕ್ಷನ್ ಕಟ್ ಹೇಳಿದ್ದಾರೆ. ರಾಯಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಸೂಪರ್ ಹಿಟ್ ನೀಡಲು ಹೊರಟಿದ್ದಾರೆ.
ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಡಾರ್ ದರ್ಶನ್, ವಿಜಯಲಕ್ಷ್ಮಿ, ಮೀನಾ ತೂಗುದೀಪ ಅವರುಗಳು ರಾಯಲ್ ಚಿತ್ರವನ್ನು ವೀಕ್ಷಿಸಿ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಇದೊಂದು ಯೂಥ್‌ಫುಲ್ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರವಾಗಿದ್ದು, ಭಾವನಾತ್ಮಕತೆ, ಹಾಸ್ಯ ಮತ್ತು ಆ್ಯಕ್ಷನ್ ಸೀಕ್ವೇನ್ಸ್ ಗಳ ಮಿಶ್ರಣದ ಜತೆಗೆ ಒಂದೊಳ್ಳೇ ಸಂದೇಶವನ್ನು ರಾಯಲ್ ಚಿತ್ರವು ಹೊತ್ತು ತರುತ್ತಿದೆ.
ಈ ಚಿತ್ರದಲ್ಲಿ ಕಿಸ್ ಖ್ಯಾತಿಯ ವಿರಾಟ್, ಸಲಗ ಖ್ಯಾತಿಯ ನಟಿ ಸಂಜನಾ ಆನಂದ್ ನಾಯಕ, ನಾಯಕಿಯಾಗಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಯಣ್ಣ ಕಂಬೈನ್ಸ್ ನಿರ್ಮಾಣದ ಮತ್ತೊಂದು ಅದ್ದೂರಿ ಬಜೆಟ್ ಚಿತ್ರ ಇದಾಗಿದೆ, ಟೈಟಲ್ ಅಷ್ಟೇ ಅಲ್ಲ, ಪ್ರಮೋಷನ್‌ನಲ್ಲೂ ನಾವು ರಾಯಲ್ ಎನ್ನುತ್ತಾ ರಾಯಲ್ ಚಿತ್ರತಂಡ ಸಿನಿಮಾದ ಪ್ರಮೋಷನ್ ಕೆಲಸಗಳನ್ನು ಭರ್ಜರಿಯಾಗಿ ನಡೆಸಿದ್ದು ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಕಾಯುತ್ತಿದೆ, ಈಗಾಗಲೇ ರಿಲೀಸಾಗಿರುವ ರಾಯಲ್ ಸಿನಿಮಾದ ಹಾಡುಗಳು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಈ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಡೈರೆಕ್ಟರ್ ಚರಣ್‌ರಾಜ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಸಂಕೇತ್ ಮೈಸೂರು ನಿರ್ವಹಿಸಿದ್ದಾರೆ.
ನಿರ್ದೇಶಕ ದಿನಕರ್ ತೂಗುದೀಪ ಹೇಳುವಂತೆ ಮನರಂಜನೆಯ ಜತೆಗೆ ಯೂಥ್ ಫುಲ್ ಕಂಟೆಂಟ್ ಒಳಗೊಂಡ ಸಿನಿಮಾ ಇದಾಗಿದೆ. ರಾಯಲ್ ಚಿತ್ರವು ಜನರಿಗೆ ಖಂಡಿತ ಇಷ್ಟವಾಗುತ್ತೆ ಎಂಬ ನಂಬಿಕೆಯಿದೆ. ಜೊತೆ ಜೊತೆಯಲಿ, ನವಗ್ರಹ, ಸಾರಥಿ ಚಿತ್ರಗಳನ್ನು ನಾನು ಹಿಟ್ ಮಾಡಿಲ್ಲ. ಪ್ರೇಕ್ಷಕರೇ ಆ ಚಿತ್ರಗಳನ್ನು ಗೆಲ್ಲಿಸಿದರು. ನನಗೆ ಒಳ್ಳೆಯ ಸಿನಿಮಾ ಮಾಡೋದಷ್ಟೇ ಗೊತ್ತು, ಹಿಟ್ ಮಾಡೋಕೆ ಗೊತ್ತಿಲ್ಲ. ಆ ಚಿತ್ರಗಳನ್ನು ಅಭಿಮಾನಿಗಳೇ ಹಿಟ್ ಮಾಡಿದ್ದು. ಎಲ್ಲಾ ವರ್ಗದ ಆಡಿಯನ್ಸ್ ಗೆ ಬೇಕಿರೋ ಅಷ್ಟೂ ಎಲಿಮೆಂಟ್ಸ್ ರಾಯಲ್ ಚಿತ್ರದಲ್ಲಿದೆ. ಈ ಸಿನಿಮಾ ಹಿಂದಿರುವ ದೊಡ್ಡ ಶಕ್ತಿ ಎಂದರೆ ಅದು ನಿರ್ಮಾಪಕರಾದ ಜಯಣ್ಣ ಭೋಗೇಂದ್ರ. ನನ್ನ ನಿರೀಕ್ಷೆಯನ್ನ ನಾಯಕ ವಿರಾಟ್, ನಾಯಕಿ ಸಂಜನಾ ಆನಂದ್ ಅವರು ಪೂರೈಸಿದ್ದಾರೆಂದು ಹೇಳಿದ್ದಾರೆ.
ಸಾಹಿತಿ ಕವಿರಾಜ್ ಹೇಳುವಂತೆ ರಾಯಲ್ ಸಿನಿಮಾದ ಎಲ್ಲ ಹಾಡುಗಳೂ ರಾಯಲ್ ಆಗಿ ಮೂಡಿಬಂದಿವೆ. ಕಾರಣ ಪ್ರೊಡ್ಯೂಸರ್, ಡೈರೆಕ್ಟರ್ ಎಲ್ಲರೂ ರಾಯಲ್, ಮ್ಯೂಸಿಕ್ ಡೈರೆಕ್ಟರ್ ಕೂಡ ಪಕ್ಕಾ ರಾಯಲ್, ಜಯಣ್ಣ ಫಿಲಂಸ್ ಪ್ರೊಡಕ್ಷನ್ ನಲ್ಲಿ ಯಾವಾಗ್ಲೂ ರಾಯಲ್ ಸಿನಿಮಾಗಳೇ ಮೂಡಿಬರುತ್ತವೆ ಎಂದಿದ್ದಾರೆ.
ಕಿಸ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ವಿರಾಟ್ ಅವರಿಗೆ ರಾಯಲ್ ಎರಡನೇ ಚಿತ್ರವಾಗಿದೆ. ಇನ್ನು ತೆಲುಗು ಸಿನಿಮಾಗಳಲ್ಲಿ ಬಿಝಿಯಾಗಿರುವ ಸಂಜನಾ ಆನಂದ್ ಅವರು ರಾಯಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಉಳಿದ ಪಾತ್ರವರ್ಗದಲ್ಲಿ ನಟ ರಘು ಮುಖರ್ಜಿ, ಛಾಯಾಸಿಂಗ್, ಅಚ್ಯುತ್‌ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಅಭಿಲಾಷ್ ಮತ್ತು ಗೌರವ್ ಶೆಟ್ಟಿ ಮುಂತಾದವರು ಕಾಣಿಸಿಕೊಂಡಿದ್ದಾರೆ.