ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ N1 ಕ್ರಿಕೆಟ್ ಅಕಾಡೆಮಿಯ ಸಂಸ್ಥಾಪಕ ಬಿಆರ್ ಸುನಿಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಸುತ್ತಾ ಬಂದಿದ್ದಾರೆ. ಈಗಾಗಲೇ ಯಶಸ್ವಿಯಾಗಿ 3 ಸೀಸನ್ ಮುಕ್ತಾಯಗೊಂಡಿದ್ದು, ಇದೀಗ ಟಿಪಿಎಲ್ ನಾಲ್ಕನೇ ಸೀಸನ್ ಗೆ ಚಾಲನೆ ದೊರೆತಿದೆ. ಈ ಬಾರಿ ಟೆಲಿವಿಷನ್ ಪ್ರೀಮಿಯರ್ ಲೀಗ್ ನಾಲ್ಕನೇ ಸೀಸನ್ ಮಾರ್ಚ್ ತಿಂಗಳಲ್ಲಿ ನಡೆಯುತ್ತಿದ್ದು, ಅದಕ್ಕೂ ಮುನ್ನ ನಿನ್ನೆ ಖಾಸಗಿ ಹೋಟೆಲ್ ನಲ್ಲಿ ಪ್ಲೇಯರ್ಸ್ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು.
ಟಿಪಿಎಲ್ ಸೀಸನ್ 4ರಲ್ಲಿ ಒಟ್ಟು 12 ತಂಡಗಳು ಭಾಗಿಯಾಗುತ್ತಿದೆ. ಈ ಬಾರಿ ನಿರ್ದೇಶಕ ತರುಣ್ ಸುಧೀರ್, ನಟರಾದ ಲೂಸ್ ಮಾದಯೋಗಿ, ಡಾರ್ಲಿಂಗ್ ಕೃಷ್ಣ, ಜೆಕೆ ಸೇರಿದಂತೆ ಮತ್ತಿತರು ನಟರು ಟೆಲಿವಿಷನ್ ಪ್ರೀಮಿಯರ್ ಲೀಗ್ ಅಖಾಡಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಟಿಪಿಎಲ್ ಮತ್ತಷ್ಟು ರಂಗೇರಿದೆ. ಇನ್ನು, ಎವಿಆರ್ ಗ್ರೂಪ್ಸ್ ಹೆಚ್.ವೆಂಟಕೇಶ್ ರೆಡ್ಡಿ ಹಾಗೂ ಭಾಗ್ಯಲಕ್ಷ್ಮೀ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡುತ್ತಿದ್ದು, ಈ ಬಾರಿ ಟಿಪಿಎಲ್ ಗೆ SRR ಕಾಂಮಿಕ್ಸ್ ಸಂಸ್ಥೆಯ ಮಿಥಿಲೇಶ್ ಸಿಡಿ ಹಾಗೂ ಧರಣೇಶ್ ಕುಮಾರ್ ಸ್ಪಾನ್ಸರ್ ಮಾಡ್ತಿದ್ದಾರೆ. ಈ ಬಾರಿಯೂ ಟಿಪಿಎಲ್ ಸೀಸನ್ 4ರಲ್ಲಿ ಮಾಧ್ಯಮದವರಿಗೂ ಅವಕಾಶ ನೀಡಲಾಗಿದೆ.
12 ತಂಡಗಳು
1.AVR ಟಸ್ಕರ್ (ಅರವಿಂದ್ ವೆಂಕಟೇಶ್ ರೆಡ್ಡಿ-ಓನರ್-ದಿಗಂತ್-ಕೋಓನರ್-ಅಲೋಕ್ ನಂದ ಶ್ರೀನಿವಾಸ್-ನಾಯಕ)
2.DS ಮ್ಯಾಕ್ಸ್ ಲಯನ್ಸ್ (ರಾಜುಗೌಡ ಓನರ್-ಮಣಿಕಂಠ್ ನಾಯಕ್ ಕೋಓನರ್-ತರುಣ್ ಸುಧೀರ್-ನಾಯಕ)
3.GLR ವಾರಿಯರ್ಸ್ ( ರಾಜೇಶ್ ಎಲ್-ಓನರ್-ರಾಜೇಶ್ ಬಿಜಿ-ಕೋಓನರ್-ಲೂಸ್ ಮಾದ ಯೋಗಿ-ನಾಯಕ)
4.ಲಿಯೋ ಲೈಫ್ ಸೇವಿಯರ್ ಪ್ರ(ಸನ್ನ.ವಿ-ಓನರ್-ವಿನೋ ಜೋಸ್-ಕೋಓನರ್-ಜೆ.ಕೆ-ನಾಯಕ)
5.MM ವೆಂಚರ್ಸ್ (ಮಂಜುನಾಥ್ ನಾಗಯ್ಯ-ಓನರ್, ಅಭಿ-ನಾಯಕ)
6.RR ವಾರಿಯರ್ಸ್ (ಮಹೇಶ್ ಕೆ ಗೌಡ-ಓನರ್, ರಘು ಭಟ್-ಕೋ ಓನರ್, ಪ್ರತಾಪ್ ನಾರಾಯಣ್-ನಾಯಕ)
7.MR ಪ್ಯಾಂಥರ್ಸ್ (ಮಿಥುನ್ ರೆಡ್ಡಿ-ಓನರ್, ಡಾರ್ಲಿಂಗ್ ಕೃಷ್ಣ-ನಾಯಕ)
8.ದಿ ಬುಲ್ ಸ್ವಾಡ್ (ಮೋನಿಶ್-ಓನರ್, ಪ್ರಜ್ವಲ್ ಕೆ-ಕೋ ಓನರ್, ಶರತ್ ಪದ್ಮಾನಾಭನ್-ನಾಯಕ)
9.ಯುಮಿ ವೆಂಚರ್ಸ್ (ಕುಶಾಲ್ ಗೌಡ-ಓನರ್, ಅರ್ಜುನ್ ಯೋಗಿ-ನಾಯಕ)
10.ಅಶ್ವಸೂರ್ಯ ರೈಡರ್ಸ್ (ರಂಜಿತ್ ಕುಮಾರ್-ಓನರ್, ಜಗದೀಶ್ ಆರ್ ಚಂದ್ರ-ಕೋಓನರ್, ಹರ್ಷ ಸಿಎಂ ಗೌಡ-ನಾಯಕ)
11. ಕ್ರಿಕೆಟ್ ನಕ್ಷತ್ರ (ನಕ್ಷತ್ರ ಮಂಜುನಾಥ್-ಓನರ್, ಆರ್ ಕೆ ರಾಹುಲ್-ನಾಯಕ)
12.ಪಿಂಕ್ ಗೋಲ್ಡ್ ಪೈಲ್ವಾನ್ಸ್ (ಭರತ್-ಓನರ್, ದೀಕ್ಷಿತ್ ಶೆಟ್ಟಿ-ನಾಯಕ)