Chief Editor
Manohar. R (Manu)
Photo Journalist
chitrataramanu@gmail.com
+91 9845549026
`ರಾಯಲ್` ಕೃಷ್ಣನ ಮಾಸ್ಟರ್ ಪ್ಲಾನ್ ..ರೇಟಿಂಗ್ : - 3.5/5 ****
Posted date: 25 Sat, Jan 2025 11:11:17 AM
ರೂಪಿಸಿದ್ದಾರೆ.  ಕಿಸ್ ಚಿತ್ರದ ನಾಯಕ ವಿರಾಟ್ ಮತ್ತು ಸಂಜನಾ ಆನಂದ್ ಲೀಡ್ ಪಾತ್ರಗಳಲ್ಕಿ ನಟಿಸಿರುವ  ಈ ಚಿತ್ರದ ಮೂಲಕ ಕಲಿಯುಗದ ಕೃಷ್ಣನ ಲೀಲೆಯನ್ನು ನಿರ್ದೇಶಕ  ದಿನಕರ್ ಲೈವಿಯಾಗಿ, ಅಷ್ಟೇ ಸುಂದರವಾಗಿಯೀ ನಿರೂಪಿಸಿದ್ದಾರೆ. 
 
ಜೀವನದಲ್ಲಿ ಹಣವೇ ಎಲ್ಲಾ ಎಂದುಕೊಂಡಿದ್ದ  ಕೃಷ್ಣ(ವಿರಾಟ್) ಗೋವಾದಲ್ಲಿ ತಾನೊಬ್ಬ  ಟೂರಿಸ್ಟ್ ಗೈಡ್ ಎಂದು ಹೇಳಿಕೊಂಡು  ಅಲ್ಲಿ ವಿಹಾರಕ್ಕೆಂದು  ಬರುವ ಯುವಕ, ಯುವತಿಯರ ತಂಡವನ್ನು ಗುರಿಯಾಗಿಸಿಕೊಂಡು ಬಣ್ಣದ ಮಾತುಗಳಿಂದ ಅವರನ್ನು ಯಾಮಾರಿಸಿ, ಹಣ ಗಳಿಸುವುದೇ ಆತನ ಕಾಯಕ. ಆದರೆ ಆತ ಏನೇ ಮಾಡಿದರೂ ಅದರ ಹಿಂದೆ ಒಳ್ಳೇ ಉದ್ದೇಶವಿರುತ್ತದೆ,  ಹಾಗೇ ಅಲ್ಲಿಗೆ ತನ್ನ ಸ್ನೇಹಿತೆಯರೊಂದಿಗೆ ಖುಷಿಯಾಗಿ ಕಾಲ ಕಳೆಯಲೆಂದು ಬರುವ ಸಂಜನಾ(ಸಂಜನಾ ಆನಂದ್) ಹಾಗೂ ಆಕೆಯ ಸ್ನೇಹಿತೆಯರು ಕೃಷ್ಣನ ಮರುಳು ಮಾತುಗಳಿಗೆ ಮನಸೋತು ತಮ್ಮ ಮೊಬೈಲ್ ಗಳನ್ನೇ ಕಳಿದುಕೊಳ್ಖುತ್ತಾರೆ. ನಂತರ ಆತನಿಗೇ ಹಣಕೊಟ್ಟು ಮೊಬೈಲ್ ವಾಪಸ್ ಪಡೆದುಕೊಳ್ಳಬೇಕಾಗುತ್ತದೆ. ಅದರೆ ಆತ ಏನೇ ಮಾಡಿದರೂ ಅದರ ಹಿಂದೊಂದು ಒಳ್ಳೇ ಉದ್ದೇಶವಿರುತ್ತದೆ. ಅದು ಸಂಜನಾ ದೊಡ್ಡದೊಂದು  ಕಂಟಕದಿಂದ ಪಾರಾಗುವಂತೆಯೂ ಮಾಡುತ್ತದೆ. ಜೋತಿಷಿಯೊಬ್ಬರ ಪ್ರಕಾರ ಕೃಷ್ಣ ನಿನ್ನ ಜತೆಗಿರುವಷ್ಟು ಕಾಲ ನೀನು ಸೇಫಾಗಿರುವೆ ಎಂದಾಗ ಅದನ್ನಾಕೆ ನಂಬಲ್ಲ. ನಂತರ ನಡೆದ ಘಟನೆಯಿಂದ ಜೋತಿಷಿಯ ಮಾತು ನಿಜವಾಗುತ್ತದೆ. ಕೃಷ್ಣನ ಮೇಲೆ ತನಗರಿವಿಲ್ಲದ ಹಾಗೆ ಸಂಜನಾಗೆ ಲವ್ವಾಗುತ್ತದೆ. ಇದೇ ಸಮಯದಲ್ಲಿ  ಕೃಷ್ಣನ ಜೀವನದಲ್ಲೊಂದು  ದೊಡ್ಡ ಟ್ವಿಸ್ಟ್ ಎದುರಾಗುತ್ತದೆ. ಪ್ರಥಮಾರ್ಧದ ನಂತರ  ರಾಯಲ್ ಹೊಸ ಆಯಾಮ ಪಡೆದುಕೊಳ್ಳುತ್ತದೆ.
 
ಚಿತ್ರದ ಮೊದಲಾರ್ಧದ ಹೆಚ್ಚಿನ ಭಾಗವನ್ನು ಗೋವಾದ ಸುಂದರ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿ ನಾಯಕನ ಹಿಂದಿನ ಜೀವನದ ಕಥೆ ತೆರೆದುಕೊಳ್ಳುತ್ತದೆ, ಆತನ ತಂದೆ ಸಿದ್ದಾರ್ಥ(ಅಚ್ಯುತ್ ಕುಮಾರ್) ಸಾಕಷ್ಟು ಕಂಪನಿಗಳಿಗೆ ಅಲೆದಾಡಿದರೂ ಕೆಲಸ ಸಿಗದೆ ಹೋದಾಗ ಆತನಿಗೆ ಆತ್ಮಸ್ಥೈರ್ಯ ತುಂಬುವ  ಪತ್ನಿ ಸೀತಾ(ಛಾಯಾಸಿಂಗ್) ತನ್ನ ಒಡವೆಗಳನ್ನೆಲ್ಲ ಕೊಟ್ಟು ಬೆಂಬಲಿಸಿದಾಗ, ಅದರಿಂದ ಸಣ್ಣ ಫುಡ್ ಪ್ರಾಡೆಕ್ಟ್ ಕಂಪನಿ ಆರಂಭಿಸುತ್ತಾರೆ. ಜನರಿಗೆ ಆರೋಗ್ಯಕರವಾದ ರಸಾಯನಿಕಮುಕ್ತ ಪದಾರ್ಥಗಳನ್ನು ಕೊಡುವ ಮೂಲಕ ಅಲ್ಪಕಾಲದಲ್ಲೇ ಅದು ದೊಡ್ಡದಾಗಿ ಬೆಳೆಯುತ್ತದೆ. ಆದರೆ ಕೃತಕಬಣ್ಣ ಬಳಸದೆ ಮಾಡಿದ  ಪದಾರ್ಥಗಳು ಹೆಚ್ಚು ಆಕರ್ಷಿಸದೆ ಬ್ಯುಸಿನೆಸ್ ಕುಂಠಿತವಾಗುತ್ತದೆ, ವ್ಯಾಪಾರದ ಲಾಭಕ್ಕಾಗಿ  ಪತಿ ಸಿದ್ದಾರ್ಥ್ ಬೇರೆ ದಾರಿಕಾಣದೆ ಅನ್ಯಾಯದ ಮಾರ್ಗ ಹಿಡಿದಿದ್ದನ್ನು ಸಹಿಸದ ಸೀತಾ, ಕಂಪನಿಯ ಪಾಲುದಾರಿಕೆಯ ಜತೆ ಪತಿಯನ್ನೂ ಬಿಟ್ಟು  ಹೊರಟು ಹೋಗುತ್ತಾಳೆ,   ಮಕ್ಕಳಿಗೆ ಪಾಠ ಹೇಳಿಕೊಡುತ್ತ ಒಂಟಿ ಜೀವನ ಸಾಗಿಸುವ ಸೀತಾಗೆ ಪುತ್ರ ಕೃಷ್ಣನೇ ಆಸರೆಯಾಗಿರುತಗತಾನೆ. ಮುಂದೆ ತನ್ನ ತಂದೆಯ ಬಗ್ಗೆ ತಿಳಿದುಕೊಂಡ ಕೃಷ್ಣ  ಮುಳುಗಿಹೋಗುತ್ತಿದ್ದ  ಕಂಪನಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದೇ ರಾಯಲ್ ಚಿತ್ರದ ಕಥೆ.  
 
ರಘು ಮುಖರ್ಜಿ ಇಲ್ಲಿ  ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಸಿದ್ದಾರ್ಥನ ಕಂಪನಿಯನ್ನು ದಿವಾಳಿ ಮಾಡಿ ಅದನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಏನೆಲ್ಲಾ  ಕಸರತ್ತು ಮಾಡುತ್ತಾನೆ ಎಂಬುದನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ.  ಇತ್ತ ಕೃಷ್ಣ  ಆತನ ಜತೆಗಿದ್ದುಕೊಂಡೇ ತಂದೆ ಕಟ್ಟಿ ಬೆಳೆಸಿದ ಕಂಪನಿಯನ್ನು ಹೇಗೆ ಮರಳಿ ಪಡೆಯುತ್ತಾನೆ ಎಂಬುದೇ  ಚಿತ್ರದ ಕುತೂಹಲ. ಒಟ್ಟಾರೆಯಾಗಿ ರಾಯಲ್ ಸಿನಿಮಾ ತೆರೆಮೇಲೆ ಅದ್ಭುತವಾಗಿ ಮೂಡಿ ಬಂದಿದ್ದು  ಹಿರಿಯ ವಿತರಕ, ನಿರ್ಮಾಪಕ ಜಯಣ್ಣ  ಭೋಗೇಂದ್ರ ಅವರ  ನಿರ್ಮಾಣದಲ್ಲಿ  ರಾಯಲ್ ಆಗಿಯೇ ಮೂಡಿಬಂದಿದೆ. ನಾಯಕನ ತಂದೆ ತಾಯಿಯಾಗಿ ಛಾಯಾಸಿಂಗ್, ಅಚ್ಯುತ್‌ಕುಮಾರ್ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಂಕೇತ್ ಅವರ  ಕ್ಯಾಮೆರಾವರ್ಕ್ ಅದ್ಭುತವಾಗಿದೆ,  ಚರಣರಾಜ್ ಅವರ ಸಂಗೀತದ ಹಾಡುಗಳು ಸದಾ  ನೆನಪಲ್ಲುಳಿಯುತ್ತವೆ,
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರಾಯಲ್` ಕೃಷ್ಣನ ಮಾಸ್ಟರ್ ಪ್ಲಾನ್ ..ರೇಟಿಂಗ್ : - 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.