ನಟ ಉಪೇಂದ್ರ ನಟನೆಯ ಬುದ್ದಿವಂತ - 2 ಚಿತ್ರ ಬಿಡುಗಡೆಗೆ ಸಜ್ಜಾಗಿರುವ ನಡುವೆಯೇ ನಿರ್ದೇಶಕ ಜಯರಾಮ್, " ಚೇಸರ್ " ಹಿಂದೆ ಬಿದ್ದಿದ್ದಾರೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಸುಮಂತ್ ಶೈಲೇಂದ್ರ ನಾಯಕರಾಗಿರುವ ಚಿತ್ರಕ್ಕೆ ಮಾಲತಿ ಶೇಖರ್ ಬಂಡವಾಳ ಹಾಕಿದ್ದು ಬಿಕೆ ಮಂಜಣ್ಣ ಕಳೆ ಮತ್ತು ಜೋಡಿದಾರ್ ಹರೀಶ್ ಸಹ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
ಆಫ್ ರೋಡ್ ಬೈಕರ್ ಗೌರವ್ ಮತ್ತು ಕಾಲೇಜಿಗೆ ಹೋಗುವ ಹುಡುಗಿ ರಕ್ಷಿತಾ ನಡುವಿನ ಪ್ರೇಮಕಥೆಯ ಪ್ರಯಾಣಅವರ ಜೀವನದಲ್ಲಿ ಮನೋರೋಗಿಯೊಬ್ಬರು ಪ್ರವೇಶಿಸಿದಾಗ ಅನಿರೀಕ್ಷಿತ ಯು-ಟರ್ನ್ ತೆಗೆದುಕೊಳ್ಳುತ್ತದೆ.
.
ಸಸ್ಪೆನ್ಸ್ ಥ್ರಿಲ್ಲರ್ ನೊಂದಿಗೆ ನಾಲ್ಕು ಬೃಹತ್ ಫೈಟ್ಗಳೊಂದಿಗೆ ಚಿತ್ರಕಥೆ ಮತ್ತು ಹಿಂದೆಂದೂ ಕಾಣದ ಆಫ್-ರೋಡ್ ಬೈಕ್ ರೇಸಿಂಗ್ ಅನುಕ್ರಮವು ಖಂಡಿತವಾಗಿಯೂ ತೊಡಗಿಸಿಕೊಳ್ಳುತ್ತದೆ ಮತ್ತು ಪ್ರೇಕ್ಷಕರನ್ನು ಅವರ ಆಸನಗಳ ತುದಿಯಲ್ಲಿ ಇರಿಸುವ ಕಥಾ ವಸ್ತು ಇಟ್ಟುಕೊಂಡು ನಿರ್ದೇಶಕ ಜಯರಾಮ್ ಚಿತ್ರವನ್ನು ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ
ಚಿತ್ರದಲ್ಲಿ ರವಿಶಂಕರ್, ರಂಗಾಯಣ ರಘು, ಸಾದುಕೋಕಿಲ, ಸುಚೇಂದ್ರ ಪ್ರಸಾದ್, ಚಿಕ್ಕಣ್ಣ, ಕುರಿ ಪ್ರತಾಪ್,ಕಡ್ಡಿ ಪುಡಿ ಚಂದ್ರು, ದೀಪಾ ರವಿಶಂಕರ್, ಸಂಗೀತ ಅನಿಲ್, ಪ್ರಶಾಂತ್ ಸಿದ್ದಿ, ಉಗ್ರಂ ಮಂಜು, ಕಾಕ್ರೋಚ್ ಸುಧಿ ಮತ್ತಿತರಿದ್ದಾರೆ
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ರವಿವರ್ಮ ಸಾಹಸ, ಕೆ.ಎಂ ಪ್ರಕಾಶ್ ಸಂಕಲನ,ಕೆ ಎಸ್ ಚಂದ್ರಶೇಖರ್ ಛಾಯಾಗ್ರಹಣವಿದೆ.