ಚಿತ್ರ : ಕಾಡುಮಳೆ
ನಿರ್ದೇಶನ : ಸಮರ್ಥ್
ತಾರಾಗಣ : ಹರ್ಷನ್,ಸಂಗೀತ,ಮತ್ತಿತತರು
ರೇಟಿಂಗ್ : * 3 /5
ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಕಥಾಹಂದರದ ಕಥೆಗಳು ಮತ್ತು ಕಂಟೆಂಟ್ ಇರುವ ಹೊಸಬರ ಸಿನಿಮಾಗಳು ಗಮನ ಸೆಳೆಯುತ್ತಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಕಾಡುಮಳೆ.
ಎರಡು ಪಾತ್ರಗಳ ಸುತ್ತ, ಕಾಡು ಮತ್ತು ಮಳೆಯ ಸುತ್ತ ಚಿತ್ರದ ಕಥೆ ಸಾಗಿದೆ. ಮೂಲಕ ವಾಸ್ತವ ಮತ್ತು ಭ್ರಮೆಯ ಸುತ್ತ ಚಿತ್ರದ ಕಥೆ ಸಾಗಿದೆ. ಕಾಡುಮಳೆಯ ಮೂಲಕ ಪ್ರೇಪಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಲಾಗಿದೆ.ಆ ಕೆಲಸವನ್ನು ನಿರ್ದೇಶಕ
ನಿರ್ದೇಶಕ ಸಮರ್ಥ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕನಸಿನಲ್ಲಿ ಕಂಡದ್ದು ಬದುಕಿನಲ್ಲಿ ವಾಸ್ತವ, ಕಾಡಿನಲ್ಲಿ ಸತ್ಯ, ಸುಳ್ಳಿನ. ಸಂಸೋಧನೆಯ ಸುತ್ತ ಸಾಗಿರುವ ಕೌತುಕವನ್ನು ಹಿಡಿದಿಟ್ಟಿದ್ದಾರೆ.ಪ್ರೀತಿಸಿದ ಹುಡುಗ ಕೈಕೊಟ್ಟ ಎಂದು ಸಾಯಲು ನಿರ್ಧರಿಸಿದ ಮೀರಾ- ಸಂಗೀತಗೆ ನದಿಯಲ್ಲಿ ಬೀಳುವುದು ತನ್ನ ರೀತಿ ಇರುವ 7 ಮಂದಿಯನ್ನು ಕೊಂದ ರೀತಿ ಬಾಸವಾಗುವುದು. ಅದು ವಾಸ್ತವವಾ ಅಥವಾ ಭ್ರಮೆಯಾ ಎನ್ನುವ ಗೊಂದಲ,
ಕಾಡಿನಲ್ಲಿ ಅಚಾನಕ್ ಆಗಿ ಪ್ರತ್ಯಕ್ಷನಾಗುವ ಪ್ಯಾರಾ ನಾರ್ಮಲ್ ಆಕ್ಟಿವಿಸ್ಟ್ ರಿಚರ್ಡ್ - ಹರ್ಷನ್ ,ದಟ್ಟಡವಿಯಲ್ಲಿ ಸಿಲುಕಿದ ಮೀರಾಳನ್ನು ಕಾಪಾಡಲೆಂದೇ ಬಂದಿದ್ದೇನೆ ಎಂದು ಬಿಂಬಿಸುವುದು. ಕಾಡಿನಲ್ಲಿ ನಡೆಯುವ ರೋಚಕ ಕಥನ, ಕುತೂಹಲ, ಮಳೆ , ನದಿ, ಅಲ್ಲಿನ ಅಣಬೆ, ನಾಯಿ, ಹೀಗೆ ಒಂದೊಂದು ಕುತೂಹಲವನ್ನು ಹೆಚ್ಚು ಮಾಡಿವೆ. ಹೊಸ ಬಗೆಯ ಚಿತ್ರವನ್ನು ನೋಡುಗರ ಕುತೂಹಲ ಹೆಚ್ಚು ಮಾಡಿದೆ.
ಕಾಡಿನಲ್ಲಿ ಸಿಕ್ಕಿ ಹಾಕಿಕೊಂಡ ಮೀರಾಳನ್ನು ರಿಚರ್ಡ್ ಪಾರು ಮಾಡುತ್ತಾನಾ. ಅಥವಾ ಅಲ್ಲಿಂದ ಹೊರ ಬರ್ತಾರಾ, ಭ್ರಮೆಯಲ್ಲಿ ಇರುವ ಮಂದಿಗೆ ನಿಜಕ್ಕೂ ಆಗಿರುವುದು ಏನು ಎನ್ನುವ ಕೌತುಕ
.ಒಂದೇ ವ್ಯಕ್ತಿಯ ಎರಡೆರಡು ಪಾತ್ರಗಳು ನಕಲಿಯೋ ಅಸಲಿಯೋ ಎನ್ನುವ ಗೊಂದಲ ,ಕುತೂಹಲ ಪ್ರೇಕ್ಷಕರನ್ನು ಕೂಡ ತುದಿಗಾಲ ಮೇಲೆ ನಿಲ್ಲಿಸಿದೆ.
ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧಾರಿತ ಚಿತ್ರಗಳು ಗೆಲ್ಲುತ್ತಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಕಾಡುಮಳೆ. ನಿರ್ದೇಶಕ ಸಮರ್ಥ್ , ಸಮರ್ಥ ರೀತಿಯಲ್ಲಿ ಚಿತ್ರದ ಕಥನವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ನಾಯಕ ಹರ್ಷನ್ ಕುಡುಕ ಮತ್ತು ಪ್ಯಾರಾ ನಾರ್ಮಲ್ ಆಕ್ಟಿವಿಸ್ಟ್ ಆಗಿ ಗಮನ ಸೆಳೆದಿದ್ದಾರೆ, ನಟಿ ಸಂಗೀತಾ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉತ್ತಮಕಥೆಗಳು ಸಿಕ್ಕರೆ ಎಂತಹ ಪಾತ್ರವನ್ನೂ ನಿಬಾಯಿಸಬಲ್ಲೆ ಎನ್ನುವುದನ್ನು ನಿರೂಪಿಸಿದ್ದಾರೆ