ಕಟ್ಲೆ ನಿರ್ಮಾಪಕರಿಂದ ಶಾಸಕ ಅಶ್ವತ್ಥ ನಾರಾಯಣ್ ಅವರಿಗೆ ಬೆಳ್ಳಿ ಕಿರೀಟ ಧಾರಣೆ
Posted date: 02 Sun, Feb 2025 08:39:02 PM

ಫೆಬ್ರವರಿ. 2ರ ಭಾನುವಾರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಅಶ್ವತ್ಥ ನಾರಾಯಣ ಅವರ 56ನೇ ವರ್ಷದ ಹುಟ್ಟು ಹಬ್ಬವಿತ್ತು. ಆ ಪ್ರಯುಕ್ತ ಕಟ್ಲೆ ಚಲನಚಿತ್ರದ ನಿರ್ಮಾಪಕರಾದ ಹೊಸಕೋಟೆಯ ಭರತ್ ಗೌಡ್ರು ಶಾಸಕ ಅಶ್ವತ್ಥ ನಾರಾಯಣ ಅವರಿಗೆ ಬೆಳ್ಳಿಯ ಕಿರೀಟಧಾರಣೆ ಮಾಡಿ, 56 ಕೆ.ಜಿ. ತೂಕದ ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ನೆಚ್ಚಿನ ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ ಕಟ್ಲೆ ಚಿತ್ರದ ನಾಯಕ ನಟ ಕೆಂಪೇಗೌಡ ಕೂಡ ಹಾಜರಿದ್ದರು.
Kannada Movie/Cinema News - ಕಟ್ಲೆ ನಿರ್ಮಾಪಕರಿಂದ ಶಾಸಕ ಅಶ್ವತ್ಥ ನಾರಾಯಣ್ ಅವರಿಗೆ ಬೆಳ್ಳಿ ಕಿರೀಟ ಧಾರಣೆ - Chitratara.com
Copyright 2009 chitratara.com Reproduction is forbidden unless authorized. All rights reserved.