ಅದು ಎಂಥದ್ದೇ ಲಾಕ್ ಆದರೂ ಅದನ್ನು ಕ್ಷಣ ಮಾತ್ರದಲ್ಲಿ ಅನ್‌ಲಾಕ್ ಮಾಡುವಂಥ ಚಾಣಾಕ್ಷತೆ ಚಿತ್ರದ ನಾಯಕ ರಾಘವನಲ್ಲಿರುತ್ತದೆ. ಬೀಗದ ಚಲನವಲನ ತಿಳಿದು ಅದನ್ನು ಸಣ್ಣ ಕಡ್ಡಿಯ ಮೂಲಕ ಓಪನ್ ಮಾಡುವ ಬುದ್ದಿವಂಥ ರಾಘವ ಸಮಸ್ಯೆಗಳನ್ನು ಕೂಡ ಅನ್‌ಲಾಕ್ ಮಾಡುತ್ತಿರುತ್ತಾನೆ. ಆದರೆ ಒಮ್ಮೆ ಸ್ವತಃ ಅವನೇ ಒಂದು ಸಮಸ್ಯೆಯಲ್ಲಿ ಲಾಕ್ ಆಗಿಬಿಡುತ್ತಾನೆ.ನಂತರ ಆತ ಅದರಿಂದ ಹೇಗೆ ಹೊರ ಬರುತ್ತಾನೆ ಎಂಬುದೇ ಅನ್‌ಲಾಕ್ ರಾಘವ ಚಿತ್ರದ ಒನ್ ಲೈನ್ ಕಾನ್ಸೆಪ್ಟ್.
ಇನ್ನು ಈ ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ ಯುವಕನೊಬ್ಬ ಜಮೀನಿನಲ್ಲಿ ನಿಧಿ ಇದೆಯೆಂದು ಭೂಮಿಯನ್ನು ಅಗೆಯುತ್ತಿರುವುದನ್ನು ಕಂಡು ಹತ್ತಿರ ಹೋದಾಗ ಆತ ಪ್ರೇತದ ಮುಖವಾಡ ಹಾಕಿರುತ್ತಾನೆ. ಅದನ್ನು ನೋಡಿ ಮೂರ್ಚೆ ಬಿಳತ್ತಾನೆ. ಹಾಗೂ ಅನ್‌ಲಾಕ್ ರಾಘವ ಶಾಲೆಯ ಕೋಣೆಯೊಂದರಲ್ಲಿ ಬಂಧಿಯಾದ ಜಾನಕಿಯನ್ನು ರಕ್ಷಿಸಲು ಬೀಗವನ್ನು ತೆಗೆಯೋದರೊಂದಿಗೆ ಚಿತ್ರದ ಕಥೆ ಓಪನ್ ಆಗುತ್ತದೆ.
ಅಲ್ಲಿಂದ ಅನ್‌ಲಾಕ್ ರಾಘವ ಹಾಗೂ ಜಾನಕಿಯ ನಡುವೆ ಪ್ರೀತಿ ಮೂಡುತ್ತದೆ. ಜಾನಕಿಯ ತಂದೆಗೆ ವರ್ಗಾವಣೆಯಾದ ಕಾರಣ ಜಾನಕಿ ಆ ಊರನ್ನೇ ಬಿಟ್ಟು ಹೋಗುತ್ತಾಳೆ. ಒಂದೆಡೆ ಪುರಾತತ್ತ್ವ ಇಲಾಖೆಯಲ್ಲಿ ಕಾರ್ಯನಿರ್ವಾಹಿಸುತ್ತಿರುವ ಜಾನಕಿ ಹಾಗೂ ಅವಳ ತಂದೆ ಜಗಪತಿಗೆ ಹಳ್ಳಿಯೊಂದರ ಜಮೀನಿನಲ್ಲಿ ಸುಮಾರು ವರ್ಷಗಳ ಹಿಂದಿನ ನಿಧಿ ಪೆಟ್ಟಿಗೆಯನ್ನು ಹುಡುಕುವ ಕೆಲಸ ಬರುತ್ತದೆ.
ಆ ಕೂಡಲೇ ಜಗಪತಿ ಹಾಗೂ ಹಳೇ ವಸ್ತುಗಳನ್ನು ವಿದೇಶಕ್ಕೆ ಮಾರಾಟ ಮಾಡುವ ಪೀಟರ್ ಹೊಂಚು ಹಾಕುತ್ತಾರೆ. ಇನ್ನೊಂದೆಡೆ ರಾಘವ ಜಾನಕಿ ಅನ್‌ಲಾಕ್ ವಿಶ್ವವಿದ್ಯಾಲಯ ಎನ್ನುವ ತರಗತಿ ತೆರೆದು, ಸಮಸ್ಯೆಗಳನ್ನು ಅನ್‌ಲಾಕ್ ಮಾಡುತ್ತಿರುತ್ತಾನೆ.
ನಿಧಿ ಹುಡುಕಲು ಬಂದ ಇಲಾಖೆಯ ಅಧಿಕಾರಿಗಳ ತಂಡವು ಜಮೀನಿನಲ್ಲಿ ನಿಧಿಯನ್ನು ಹುಡುಕಿ ಪತ್ತೆ ಮಾಡುತ್ತಾರೆ.
ಅದರ ಲಾಕ್ ತೆಗೆಯಲು ಜಾನಕಿ, ರಾಘವನನ್ನು ಕರೆಯುತ್ತಾಳೆ. ಈ ನಡುವೆ ನಿಧಿಯ ಬಗ್ಗೆ ಜಗಪತಿ ಮಾತನಾಡುತ್ತಿರುವಾಗ, ಪೀಟರ್ ಕಡೆಯವರು ನಿಧಿಯನ್ನು ತೆಗೆದುಕೊಂಡು ಹೊಗಲು ಯತ್ನಿಸುತ್ತಾರೆ ಆಗ ರಾಘವನಿಗೆ ಅದು ಜಾನಕಿ ಅಂತಾ ಗೊತ್ತಾಗುತ್ತದೆ. ಆಗ ರಾಘವ ಅದನ್ನು ಹಿಡಿಯಲು ಹೋಗುತ್ತಾನೆ.
ಅತ್ತ ಆ ಲಾಕ್ ತೆಗೆಯಲು ಸಾದು ಕೋಕಿಲ ಜತೆ ಪೀಟರ್ ಡೀಲ್ ಮಾಡುತ್ತಾನೆ. ಆಗ ನಿಧಿ ತನ್ನಿಂದ ತಪ್ಪಿ ರಾಘವನಿಗೆ ಸಿಗುತ್ತದೆ ಎನ್ನುವ ಮಾಹಿತಿ ಸಿಗುತ್ತದೆ. ಅದಕ್ಕೆ ಜಾನಕಿಯನ್ನು ಅಪಹರಿಸಲು ಪೀಟರ್ ಹೇಳುತ್ತಾನೆ. ಅದೇ ವೇಳೆ ತನ್ನ ಪ್ರೇಯಸಿ ಸಿಕ್ಕಿದ ಖುಷಿಯಲ್ಲಿದ್ದ ರಾಘವನಿಗೆ, ಜಾನಕಿಯ ಅಪಹರಣ ಹಾಗೂ ಮಾವ ಸಾದು ಕೋಕಿಲ ತಲೆಗೆ ಬಿದ್ದ ಹೊಡೆತದಿಂದ ಕಂಗಾಲಾಗುತ್ತಾನೆ. ಹೀಗೆ ಸ್ವತಃ ರಾಘವನೇ ಒಂದು ದೊಡ್ಡ ಸಮಸ್ಯೆಯಲ್ಲಿ ಲಾಕ್ ಆಗುತ್ತಾನೆ. ನಂತರ ಆತ ಅದರಿಂದ ಹೇಗೆ ಹೊರ ಬರುತ್ತಾನೆ ಎಂಬ ಕುತೂಹಲಕಾರಿ ದಿಕ್ಕಿನಲ್ಲಿ ಸಿನಿಮಾ ಸಾಗುತ್ತದೆ.
ಇದು ಪುಕ್ಕ ಕಮರ್ಶಿಯಲ್ ಸಿನಿಮಾ ಆಗಿರುವುದರಿಂದ ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರು ಮನರಂಜನೆಗೆ ಯಾವುದೇ ಕೊರತೆಯಾಗದಂತೆ ಚಿತ್ರವನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಯುವ ನಟ ಮಿಲಿಂದ್ ಅನ್‌ಲಾಕ್ ರಾಘವ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ, ನಾಯಕಿ ರೆಚೆಲ್ ಡೇವಿಡ್ ಕೂಡ ತೆರೆಯ ಮೇಲೆ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಸಾಧು ಕೋಕಿಲ, ಸುಂದರ್ ರಾಜ್, ಶೋಭ ರಾಜ್, ಅವಿನಾಶ್ ಅವರ ಅಭಿನಯ ಚಿತ್ರದ ಓಟಕ್ಕೆ ಸಾಥ್ ನೀಡಿದೆ. ವಿಶೇಷವಾಗಿ ಈ ಚಿತ್ರದಲ್ಲಿ ಬರುವ ಮೂರು ಹಾಡುಗಳನ್ನು ಅನೂಪ್ ಸೀಳನ್ ಅವರು ಅದ್ಭುತವಾಗಿ ಕಂಪೋಜ್ ಮಾಡಿದ್ದಾರೆ. ಮಂಜುನಾಥ್ ದಾಸೇಗೌಡ ಮತ್ತು ಗಿರೀಶ್ ಕುಮಾರ್ ಅವರ ನಿರ್ಮಾಣದಲ್ಲಿ ಅನ್ ಕಾಕ್ ರಾಘವ ಅದ್ಭುತವಾಗಿ ಮೂಡಿಬಂದಿದ್ದಾನೆ ಎಂಧೇ ಹೇಳಬಹುದು. ಲವಿತ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕೆ ಹೊಸರೂಪ ಕೊಟ್ಟಿದೆ.ಒಟ್ಟಾರೆ ಇಡೀ ಕುಟುಂಬ ಕೂತು ನೋಡಬಹುದಾದಂಥ ಚಿತ್ರ ಎಂದು ಹೇಳಬಹುದು.