ಸಾಕಷ್ಟು ಸ್ಪರ್ಧೆ ಇರುವಂಥ ಈ ಕಾಲದಲ್ಲಿ ಜನ ಇಷ್ಟಪಡುವಂಥ ಚಿತ್ರ ನಿರ್ಮಿಸಬೇಕೆಂದರೆ, ಬಹಳ ಶ್ರಮವಹಿಸಬೇಕಿದೆ. ಆ ಚಿತ್ರತಂಡ ಹಗಲಿರುಳು ಎಫರ್ಟ್ ಹಾಕಬೇಕಾಗುತ್ತದೆ. ಅಂಥಾ ಶ್ರಮದ ಫಲವಾಗಿ ಮೂಡಿಬಂದ ಮತ್ತೊಂದು ಚಿತ್ರವೇ ಈವಾರ ತೆರೆಕಂಡಿರುವ ಮಿಸ್ಟರ್ ರಾಣಿ. ಯುವ ನಿರ್ದೇಶಕ ಮಧುಚಂದ್ರ ವಿಶೇಷ ಕಾನ್ಸೆಪ್ಟ್ ಇಟ್ಟುಕೊಂಡು ಈ ಸಿನಿಮಾ ನಿರೂಪಿಸಿದ್ದಾರೆ,
ಚಿತ್ರರಂಗದಲ್ಲಿ ತಾನೊಬ್ಬ ಹೀರೋ ಆಗಿ ಹೆಸರು ಮಾಡಬೇಕೆಂದು ಕನಸು ಕಟ್ಟಿಕೊಂಡಿದ್ದ ಯುವಕನೊಬ್ಬ ಅನಿವಾರ್ಯ ಸಂದರ್ಭದಲ್ಲಿ ಹೆಣ್ಣಾಗಿಬಿಡುತ್ತಾನೆ. ಸಂದರ್ಭದ ಸುಳಿಗೆ ಸಿಕ್ಕು ಆಕಸ್ಮಿಕವಾಗಿ ಹೀರೋಯಿನ್ ಆಗಿಬಿಡ್ತಾನೆ, ಅದೇ ಚಿತ್ರದ ಕಾನ್ಸೆಪ್ಟ್,
ಕಾಲೇಜಿನಲ್ಲಿದ್ದಾಗ ಮಾಡಿದ್ದ ಸ್ಕಿಟ್‌ವೊಂದರಲ್ಲಿ ರಾಜ, ರಾಣಿಯಾಗಿ ಹೆಣ್ಣಿನ ವೇಷ ಹಾಕಿರುತ್ತಾನೆ. ಎಷ್ಟೋ ದಿನಗಳ ನಂತರ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ ವೈರಲ್ ಆಗಿಬಿಡುತ್ತದೆ. ಆ ವಿಡಿಯೋ ನೋಡಿದ ಸಹಾಯಕ ನಿರ್ದೇಶಕನೊಬ್ಬ, ಅದು ಹುಡುಗಿಯೇ ಅಂತ ತಿಳಿದು ನಾಯಕಿಯ ಗೆಳತಿಯ ಪಾತ್ರ ಮಾಡಲು, ನಾಯಕನ ಸ್ನೇಹಿತನ ಮೂಲಕ ಆಹ್ವಾನಿಸುತ್ತಾನೆ. ಹೇಗೋ ಒಂದು ಪಾತ್ರ ಸಿಕ್ಕರೆ ಸಾಕು ಅಲ್ಲದೆ ತಾನು ಬಹಳ ಇಷ್ಟಪಡುವ ಹೀರೋಯಿನ್ ದೀಪಿಕಾಳ ಸ್ನೇಹಿತೆಯಾಗಿ ನಟಿಸಬೇಕು ಎಂದಾಗ ಒಪ್ಪಿಕೊಳ್ಳುತ್ತಾನೆ. ಮತ್ತೊಮ್ಮೆ ರಾಜಕುಮಾರಿಯಂತೆ ಮೇಕಪ್ ಮಾಡಿಕೊಂಡು ಬಂದ ರಾಜನನ್ನು ನೋಡಿದ ಯಾರೊಬ್ಬರೂ ಇದು ಹುಡುಗ ಅಂತ ಊಹಿಸಲಾರದಷ್ಟು ಚೇಂಜೋವರ್ ಆಗಿರುತ್ತಾನೆ. ಈತ ಹುಡುಗಿಯಲ್ಲ ಎಂದು ಸ್ವತ: ಹೆತ್ತ ತಂದೆಯೇ ಕಂಡುಹಿಡಿಯಲು ಆಗಲ್ಲ. ಸುಂದರ ಹೆಣ್ಣಾಗಿ ಬದಲಾದ ರಾಜನನ್ನು ನೋಡಿದ ಆ ಸಿನಿಮಾದ ಡೈರೆಕ್ಟರ್ ಆಕೆಗೆ ಮನಸೋಲುತ್ತಾನೆ. ಚಿಕ್ಕ ಪಾತ್ರವಲ್ಲ ಎಂದು ಒತ್ತಾಯಕ್ಕೆ ಒಪ್ಪಿದ ರಾಜನಿಗೆ, ಆ ಚಿತ್ರದ ನಾಯಕಿ ಮಾಡುಕೊಂಡ ಎಡವಟ್ಟಿನಿಂದ ಆಕೆಯೇ ಹೀರೋಯಿನ್ ಆಗುವ ಛಾನ್ಸ್ ಸಿಗುತ್ತದೆ, ರಾಣಿ ದೊಡ್ಡ ಸ್ಟಾರಿಣಿ ಕೂಡ ಆಗುತ್ತಾಳೆ, ಮುಂದೆ ರಾಜ ಹೆಣ್ಣಿನ ವೇಶದಲ್ಲಿ ಏನೆಲ್ಲ ಕ್ಲಿಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ, ಅದೆರಲ್ಲದರಿಂದ ರಾಜ ಹೇಗೆ ಬಚಾವಾದ? ಚಿತ್ರರಂಗದಲ್ಲಿ ತಾನೊಬ್ಬ ನಾಯಕನಾಗಿ ಬೆಳೆಯಬೇಕೆಂಬ ರಾಜನ ಆಸೆ ಏನಾಯ್ತು, ರಾಜ ಕೊನೆಯವರೆಗೆ ರಾಣಿಯಾಗೇ ಉಳಿಯಬೇಕಾಯ್ತಾ. ಹೆಣ್ಣಿನ ವೇಷ ಹಾಕಿಕೊಂಡದ್ದು ಆತ ಏನೇನೆಲ್ಲ ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು ಎಂಬುದನ್ನು ನಿರ್ದೇಶಕ ಮಧುಚಂದ್ರ ಹಾಸ್ಯ ಮಿಶ್ರಿತವಾಗಿ ಎಲ್ಲೂ ಬೋರಾಗದಂತೆ ಹೇಳಿಕೊಂಡು ಹೋಗಿದ್ದಾರೆ, ಚಿತ್ರದ ಆರಂಭದಲ್ಲಿ ಬರುವ ಯು ಕ್ಯಾನ್ ಡು ಇಟ್ ಮಚ್ಚಾ, ನೆವರ್ ಗಿವ್ ಅಪ್ ಮಚ್ಚಾ ಹಾಡಲ್ಲಿ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ, ರವಿಚಂದ್ರನ್, ಜಗ್ಗೇಶ್, ಯಶ್, ಸುದೀಪ್, ದರ್ಶನ್, ಶ್ರೀಮುರುಳಿ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲ ಸೂಪರ್ ಸ್ಟಾರ್‌ಗಳನ್ನು ಎಐ ಟೆಕ್ನಾಲಜಿ ಉಪಯೋಗಿಸಿ ಕರೆತಂದಿರುವುದು ಗಮವಾರ್ಹ, ಕೆಲ ಸೀನ್‌ಗಳು ತಮಿಳಿನ ಕಮಲಹಾಸನ್ ನಟಿಸಿದ್ದ ಅವೈಷಣ್ಮುಗಿ ಚಿತ್ರವನ್ನು ನೆನಪಿಸುತ್ತದೆ. ನಾಯಕ ದೀಪಕ್ ಸುಬ್ರಮಣ್ಯ ರಾಜ, ಮುಖ್ಯವಾಗಿ ರಾಣಿಯ ಪಾತ್ರದಲ್ಲಿ ಯುವತಿಯರೇ ನಾಚುವಂತೆ ಅಭಿನಯಿಸಿದ್ದಾರೆ.
ಜೂಡಾ ಸ್ಯಾಂಡಿ ಅವರ ಸಂಗೀತ ಸಂಯೋಜನೆಯ ಹಾಡುಗಳು ಸದಾ ಗುನುಗುವಂತಿವೆ. ಪ್ರತಿ ಸಿನಿಮಾದಲ್ಲಿ ಗಟ್ಟಿ ಸಂದೇಶದ ಮೂಲಕ ಪ್ರೇಕ್ಷಕರೆದುರು ಹಾಜರಾಗುವ ನಿರ್ದೇಶಕ ಮಧುಚಂದ್ರ ಮಿಸ್ಟರ್ ರಾಣಿ ಮೂಲಕ ಮತ್ತೊಮ್ಮೆ ಅಂಥಾ ಪ್ರಯತ್ನ ಮಾಡಿದ್ದಾರೆ, ಹೊಡಿ, ಬಡಿ, ಥ್ರಿಲರ್, ಹಾರರ್‌ನಂಥ ಮಾಮೂಲಿ ಅಂಶಗಳನ್ನು ಬದಿಗಿಟ್ಟು ವಿನೂತನ ಶೈಲಿಯ ಕಾಮಿಡಿ ಎಂಟರ್‌ಟೈನರ್ ಆಗಿ ಮಿಸ್ಟರ್ ರಾಣಿ ಮೂಡಿಬಂದಿದೆ, ರವೀಂದ್ರನಾಥ್ ಟಿ, ಅವರ ಛಾಯಾಗ್ರಹಣದಲ್ಲಿ ಚಿತ್ರ ಸುಂದರವಾಗಿ ಮೂಡಿಬಂದಿದೆ, ಸಂಗೀತ ಹಾಡುಗಳು ಚಿತ್ರಕ್ಕೆ ಪೂರಕವಾಗಿವೆ. ನಿರ್ದೇಶಕ ಮಧುಚಂದ್ರ ನಿರ್ದೇಶಕನಾಗೇ ಕಾಣಿಸಿಕೊಂಡಿರೋದು ಈ ಚಿತ್ರದ ಮತ್ತೊಂದು ವಿಶೇಷ.