ಶ್ರೀಮಲೆ ಆಡಿಯೋ ವಿಡಿಯೋ ಸಂಸ್ಥೆಯವರು ಹೊರತಂದಿರುವ ಚೆಲ್ಲಾಟಗಾರ ಮಾದಪ್ಪ ಖ್ಯಾತಿಯ ಕಲಾಶ್ರೀ ಡಾ.ಜಯಶ್ರೀ ಅರವಿಂದ್ ಅವರ ಸಾಹಿತ್ಯ ಮತ್ತು ಸಂಗೀತದಲ್ಲಿ ಮೂಡಿ ಬಂದಿರುವ "ಮುದ್ದುಗಾರ ಮಾದಪ್ಪ" ಎಂಬ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಜಾನಪದ ಶ್ಯಲಿಯ ಸುಪ್ರಭಾತ ದೃಶ್ಯಗೀತೆಯನ್ನು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿರುದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಯುತ ಎ.ಇ.ರಘುರವರು ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಬಿಡುಗಡೆ ಮಾಡಿದರು. ಈ ಶುಭ ಸಂಧರ್ಭದಲ್ಲಿ ಸಂಗೀತ ನಿರ್ದೇಶಕಿ ಕಲಾಶ್ರೀ ಡಾ.ಜಯಶ್ರೀ ಅರವಿಂದ್, ಅರವಿಂದ್ ಕಿಗ್ಗಾಲ್, ಶ್ರೀ ಮಲೆ ಆಡಿಯೋ ವಿಡಿಯೋ ಸಂಸ್ಥೆಯ ಬಿ.ಅರುಣ್ ಕುಮಾರ್ ಸಿಂಗ್, ಎಂ.ಪ್ರಕಾಶ್, ಬಿ.ಹೇಮಾವತಿ ಮತ್ತು ತಲಕಾಡು ದೇವಸ್ಥಾನದ ಅಧ್ಯಕ್ಷರಾದ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಈ ಸೃಶ್ರಾವ್ಯವಾದ ಗೀತೆಯನ್ನು ಕನ್ನಡದ ಪ್ರಸಿದ್ಧ ಗಾಯಕರಾದ ಅಜಯ್ ವಾರಿಯರ್ ಮತ್ತು ಶ್ರೀರಕ್ಷಾ ಪ್ರಿಯರಂ ಅವರು ಹಾಡಿದ್ದಾರೆ, ಛಾಯಾಗ್ರಹಣ ಮತ್ತು ಸಂಕಲನವನ್ನು ಹೃಶಾಂಕ್ ಸಿಂಗ್ ಮಾಡಿರುತಾರೆ. ಈ ಸುಮಧುರ ಗೀತೆಯನ್ನು ಕೇಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. https://youtu.be/cBgnb_bPxPY