ಯೋಗರಾಜ್ ಭಟ್ ಜೊತೆ ಮೋಹಕ ತಾರೆ ರಮ್ಯಾ ಸಿನಿಮಾ ಮನದ ಕಡಲು ಚಿತ್ರದ ಹಾಡನ್ನ ಬಿಡುಗಡೆ ಮಾಡಿದ ರಮ್ಯಾ
Posted date: 07 Fri, Mar 2025 10:40:36 AM

ಮೋಹಕ ತಾರೆ , ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಕರುನಾಡ ಪ್ರೇಕ್ಷಕ ವಲಯದಲ್ಲಿದೆ. ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಕಂಗೋಳಿಸೋದು ಫೈನಲ್ ಆಗಿತ್ತು ; ಆದ್ರೆ ಸ್ಪಷ್ಟ ಉತ್ತರ ಸಿಗ್ಲಿಲ್ಲ. ಈಗ ವಿಚಾರವೆನೆಂದ್ರೆ `ಮನದ ಕಡಲು` ಡೈರೆಕ್ಟರ್ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ಮೋಹಕ ತಾರೆ ಮಿನುಗಿ ಮಿಂಚೋದು ಪಕ್ಕಾ ಆದ್ರೂ ಅಚ್ಚರಿಯಿಲ್ಲ. ಹಿಂದೆ `ರಂಗ SSLC` ಸಿನಿಮಾದಲ್ಲಿ ಭಟ್ಟರ ನಿರ್ದೇಶನದಲ್ಲಿ ಕಿಚ್ಚ ಸುದೀಪ್ - ರಮ್ಯಾ ಅದ್ಭುತ ಅಭಿನಯ ಮಾಡಿದ್ರು. ಈಗ ಮತ್ತೊಮ್ಮೆ ರಮ್ಯಾ-ಯೋಗರಾಜ್ ಭಟ್ ಕಾಂಬಿನೇಷನ್ ಒಟ್ಟಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ. `ಮನದ ಕಡಲು` ನಿರ್ಮಾಪಕರುಗಳಾದ ಇ.ಕೃಷ್ಣಪ್ಪ ಮತ್ತು ಜಿ.ಗಂಗಾಧರ್ ಅವರೇ ರಮ್ಯಾ -ಯೋಗರಾಜ್ ಭಟ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಲು ಆಸೆ ವ್ಯಕ್ತಪಡಿಸಿದ್ದಾರೆ. ರಮ್ಯಾ ಒಡೆತನದ ಆ್ಯಪಲ್ ಬಾಕ್ಸ್ ಸಹಯೋಗದಲ್ಲಿ ಇ.ಕೆ.ಎಂಟರ್ ಟೈನರ್ ನಡಿ ಈ ಸಿನಿಮಾ ಸಿದ್ಧವಾಗಲಿದೆ. ಈ ಬಗ್ಗೆ ರಮ್ಯಾ ಅವರೆ ಆಸಕ್ತಿದಾಯಕವಾಗಿ ಮಾತನಾಡಿದ್ದಾರೆ. `ಮನದ ಕಡಲು` ಸಿನಿಮಾದ ನೀಲಿ ನೀಲಿ ಕಡಲು ಎಂಬುವ ಹಾಡನ್ನ ಬಿಡುಗಡೆ ಮಾಡುವ ಸಂದರ್ಭದಲ್ಲಿ ರಮ್ಯಾ ಈ ಮಾತನ್ನ ಆಡಿದ್ದಾರೆ. ಮಾರ್ಚ್ 28 ರಂದು `ಮನದ ಕಡಲು` ಸಿನಿಮಾ ಬಿಡುಗಡೆಯಾದ ನಂತರ ರಮ್ಯಾ- ಯೋಗರಾಜ್ ಭಟ್ ಕಾಂಬೋ ಸಿನಿಮಾದ ಶುರುವಿನ ಸುದ್ದಿ ಕೇಳಬಹುದು.
Kannada Movie/Cinema News - ಯೋಗರಾಜ್ ಭಟ್ ಜೊತೆ ಮೋಹಕ ತಾರೆ ರಮ್ಯಾ ಸಿನಿಮಾ ಮನದ ಕಡಲು ಚಿತ್ರದ ಹಾಡನ್ನ ಬಿಡುಗಡೆ ಮಾಡಿದ ರಮ್ಯಾ - Chitratara.com
Copyright 2009 chitratara.com Reproduction is forbidden unless authorized. All rights reserved.