ದಕ್ಷಿಣ ಭಾರತದ ಅತಿದೊಡ್ಡ ಆಡಿಯೋ ಕ್ಯಾಟಲಾಗ್ ಕಂಪನಿ ಲಹರಿ ಮ್ಯೂಸಿಕ್ ಸ್ಥಾಪಕರಾದ ಮನೋಹರ್ ನಾಯ್ಡು ಅವರಿಗೆ 70ನೇ ಹುಟ್ಟುಹಬ್ಬದ ಸಂಭ್ರಮ.
ಈ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಟ್ವೀಟ್ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಪಬ್ಲಿಕ್ ಟಿವಿ ಮುಖ್ಯಸ್ಥ, ಪತ್ರಕರ್ತ ಹೆಚ್.ಆರ್ ರಂಗನಾಥ್, ಹಲವು ರಾಜಕೀಯ ಮುಖಂಡರು, ಚಲನಚಿತ್ರ ರಂಗದ ಗಣ್ಯರು, ಲಹರಿ ಮ್ಯೂಸಿಕ್, ಪಬ್ಲಿಕ್ ಟಿವಿ ಸಿಬ್ಬಂದಿ ವರ್ಗದವರು ಹಾಗೂ ಕುಟುಂಬದವರು ತಮ್ಮ ಹೃದಯಾಳದ ಮಾತುಗಳ ಮೂಲಕ ಮನೋಹರ್ ನಾಯ್ಡು ಅವರಿಗೆ ಶುಭ ಕೋರಿದ್ದಾರೆ.
ಲಹರಿ ಮ್ಯೂಸಿಕ್ ಸ್ಥಾಪನೆಗೆ ನಿಮ್ಮ ಪಯಣವು ನಿಜವಾಗಿಯೂ ಪ್ರೇರಣಾದಾಯಕ. ಕೇವಲ 500 ರೂಪಾಯಿಗಳಿಂದ ಆರಂಭಗೊಂಡ ಈ ಸಂಸ್ಥೆ ಈಗ ದೇಶದಲ್ಲೇ ಬೃಹದಾಕಾರವಾಗಿ ಬೆಳೆದು ನಿಂತಿದೆ. 55 ವರ್ಷಗಳ ಸಂಗೀತ ಉದ್ಯಮ ಸೇವೆಯ ಮೂಲಕ, ನೀವು ಭಾರತೀಯ ಸಂಗೀತ ಲೋಕವನ್ನು ಪರಿವರ್ತಿಸಿ, ಕೋಟಿ ಕೋಟಿ ಹೃದಯಗಳಲ್ಲಿ ಮಧುರ ನಾದವನ್ನು ತುಂಬುವ ಕೆಲಸ ಮಾಡಿದ್ದೀರಿ.
ಸಂಗೀತ ಕ್ಷೇತ್ರದ ಜೊತೆ ಜೊತೆಗೆ, ಪಬ್ಲಿಕ್ ಟಿವಿ ಎಂಬ ನಂಬಿಕಾರ್ಹ ಕನ್ನಡ ನ್ಯೂಸ್ ಚಾನೆಲ್ ಸ್ಥಾಪನೆಯ ಮೂಲಕ ನಿಮ್ಮ ಧೃಡವಾದ ಮೌಲ್ಯಗಳು ಮತ್ತು ಪ್ರಾಮಾಣಿಕತೆಗೆ ನಿಮ್ಮ ಬದ್ಧತೆಯನ್ನು ನೀವು ಸಾಬೀತುಪಡಿಸಿದ್ದೀರಿ.
ಇಂದಿನ ಕಾಲದಲ್ಲಿ ಕುಟುಂಬಗಳು ಒಡೆದು ಹೋಗುತ್ತಿರುವಾಗ, ನಿಮ್ಮ ಕುಟುಂಬವನ್ನು ಒಗ್ಗೂಡಿಸುವ ನಿಮ್ಮ ಶಕ್ತಿಯು ಅಪೂರ್ವ. ಇದು ನಿಮ್ಮ ನಾಯಕತ್ವ ಗುಣ, ಬಲವಾದ ತತ್ವಗಳು ಮತ್ತು ಕುಟುಂಬದ ಬಗ್ಗೆ ನೀವು ಹೊಂದಿರುವ ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ.
ನಿಮ್ಮ ಹೆಸರು ಗೌರವದ ಪ್ರತೀಕವಾಗಿದೆ ಮತ್ತು ನಿಮ್ಮ ಸಾಧನೆಗಳು ಭವಿಷ್ಯದ ಪೀಳಿಗೆಗಳಿಗೆ ಪ್ರೇರಣೆಯಾಗಿ ಉಳಿಯಲಿ. ಈ ವಿಶೇಷ ದಿನದಲ್ಲಿ ನಿಮಗೆ ಆರೋಗ್ಯ, ಸಂತೋಷ ಮತ್ತು ಇನ್ನೂ ಹೆಚ್ಚಿನ ಯಶಸ್ಸು ಲಭಿಸಲಿ ಎಂದು ಹಾರೈಸುತ್ತೇನೆ.
ನಿಮಗೆ ಇನ್ನೂ ಅನೇಕ ಯಶಸ್ವಿ ವರ್ಷಗಳು ಬರಲೆಂದು ಹೃದಯಪೂರ್ವಕವಾಗಿ ಕೋರುತ್ತೇನೆ ಎಂದು ಮನೋಹರ್ ನಾಯ್ಡು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸಹೋದರ ಲಹರಿ ವೇಲು ತಿಳಿಸಿದ್ದಾರೆ.