Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೆಬಾಸ್ಟಿಯನ್ ಡೇವಿಡ್ ನಿರ್ದೇಶನದ ``ಬೇಲಿ ಹೂ`` ಚಿತ್ರಕ್ಕೆ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಸಿನಿಮಾ‌ ವಿಭಾಗದಲ್ಲಿ ``ತೀರ್ಪುಗಾರರ ವಿಶೇಷ ಉಲ್ಲೇಖ``
Posted date: 16 Sun, Mar 2025 03:57:58 PM
ಮೂವತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ  ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್ ಈವರೆಗೂ "ಅನಿಶ್ಚಿತ", " ಜ್ಯೋತಿ ಅಲಿಯಾಸ್ ಕೋತಿರಾಜ್", "ಮಾನ", " ಧ್ವನಿ" "ಬೇಲಿ ಹೂ" ಹಾಗೂ ಪ್ರಸ್ತುತ ತನಿಷಾ ಕುಪ್ಪಂಡ ಹಾಗೂ ಮಾಲಾಶ್ರೀ ಅವರು ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ "ಪೆನ್ ಡ್ರೈವ್" ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸೆಬಾಸ್ಟಿಯನ್ ಡೇವಿಡ್‌ ಅವರ ನಿರ್ದೇಶನದ ಎಲ್ಲಾ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ  ಗುರುತಿಸಿಕೊಂಡಿರುವುದು ವಿಶೇಷ.
 
ಪ್ರಸ್ತುತ 16 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯಾ ಸಿನಿಮಾ ಹಾಗೂ ಕನ್ನಡ ಸಿನಿಮಾ ಎರಡು ವಿಭಾಗಗಳಲ್ಲಿ ವೆಂಕಟೇಶ್ ಎಸ್ ನಿರ್ಮಿಸಿ, ಸೆಬಾಸ್ಟಿಯನ್ ಡೇವಿಡ್ ಅವರು ನಿರ್ದೇಶಿಸಿರುವ ಹಾಗೂ ಸಂಪತ್ ಮೈತ್ರೇಯ, ಶ್ವೇತ ಶ್ರೀವಾಸ್ತವ್, ಲಯನ್ ವೆಂಕಟೇಶ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಬೇಲಿ ಹೂ"  ಆಯ್ಕೆಯಾಗಿತ್ತು‌. ಅದರಲ್ಲೂ ಇಂಡಿಯಾ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗಿದ್ದ ಏಕೈಕ ಕನ್ನಡ ಸಿನಿಮಾ "ಬೇಲಿ ಹೂ". 
 
ನೈಜ ಫಟನೆ ಆಧಾರಿತ ಚಿತ್ರ " ಬೇಲಿ ಹೂ". ಆಶಾ ಎಂಬ ಗ್ರಾಮೀಣ ಭಾಗದ ಹೆಣ್ಣುಮಗಳು ಮದ್ಯ ವ್ಯಸನಿ ಗಂಡನಿಂದ ನೊಂದು ಎರಡು ಮಕ್ಕಳ ಜೀವನಕ್ಕಾಗಿ ಹೆಣ ಹೂಳುವ ಕೆಲಸದಿಂದ ಆರಂಭಿಸಿ, ಅಂಬ್ಯುಲೆನ್ಸ್ ಚಾಲಕಿಯಾಗುತ್ತಾಳೆ. ಇಂತಹ ಆದರ್ಶ ಮಹಿಳೆ ಕುರಿತಾದ ಈ ಚಿತ್ರದಲ್ಲಿ ನಟಿಸುವ ಎಲ್ಲಾ ಕಲಾವಿದರ ಅಭಿನಯ ತುಂಬಾ ಅಮೋಘವಾಗಿ ಮೂಡಿಬಂದಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಇದನ್ನು ಶಿಂಗ್ ಸೌಂಡ್ ನಲ್ಲಿ ಚಿತ್ರಿಸಲಾಗಿದ್ದು, ಡಬ್ಬಿಂಗ್ ಸಹ  ಮಾಡಿಲ್ಲ. . 
 
ಇಂತಹ ಅಪರೂಪದ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯಾ ಸಿನಿಮಾ ವಿಭಾಗದಲ್ಲಿ‌ "ತೀರ್ಪುಗಾರರ ವಿಶೇಷ ಉಲ್ಲೇಖ" ದೊರಕಿದೆ. ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯಾ ಸಿ‌ನಿಮಾ ವಿಭಾಗದಲ್ಲಿ ಆಯ್ಕೆಯಾಗಿದ್ದ "ಬೇಲಿ ಹೂ" ಸಿನಿಮಾಕ್ಕೆ "ತೀರ್ಪುಗಾರರ ವಿಶೇಷ ಉಲ್ಲೇಖ" ದೊರಕಿರುವುದಕ್ಕೆ ಚಿತ್ರತಂಡದಲ್ಲಿ ಸಂತಸ ಮನೆ ಮಾಡಿದೆ. 
 
ಬೆಂಗಳೂರು ಅಂತರರಾಷ್ಟ್ರೀಯ  ಚಲನಚಿತ್ರೋತ್ಸವದಲ್ಲಿ ನಮ್ಮ ಚಿತ್ರಕ್ಕೆ ಸಿಕ್ಕ ಪ್ರಶಂಸೆಗೆ ಮನ ತುಂಬಿ ಬಂದಿದೆ. ನಮ್ಮ ನಿರ್ಮಾಪಕರಾದ ಎಸ್ ವೆಂಕಟೇಶ್ ಅವರು ಶೀಘ್ರದಲ್ಲೇ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ ಎನ್ನುತ್ತಾರೆ ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೆಬಾಸ್ಟಿಯನ್ ಡೇವಿಡ್ ನಿರ್ದೇಶನದ ``ಬೇಲಿ ಹೂ`` ಚಿತ್ರಕ್ಕೆ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಸಿನಿಮಾ‌ ವಿಭಾಗದಲ್ಲಿ ``ತೀರ್ಪುಗಾರರ ವಿಶೇಷ ಉಲ್ಲೇಖ`` - Chitratara.com
Copyright 2009 chitratara.com Reproduction is forbidden unless authorized. All rights reserved.