"ಟಗರು ಪಲ್ಯ" ಚಿತ್ರದ ಬಳಿಕ ಡಾಲಿ ಧನಂಜಯ ನಿರ್ಮಾಣದ ಎಮೋಷನ್, ಕಾಮಿಡಿ, ಆಕ್ಷನ್ ಜಾನರ್ ಕಥಾ ಹಂದರವೊಂದಿರುವ ಬಹು ನಿರೀಕ್ಷಿತ ಚಿತ್ರ "ವಿದ್ಯಾಪತಿ" ಚಿತ್ರ ಏಪ್ರಿಲ್ 10 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಅನ್ನು ಪ್ರೇರಣಾ ಪತಿ, ನಟ ದೃವ ಸರ್ಜಾ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
"ವಿದ್ಯಾಪತಿ" ಚಿತ್ರದಲ್ಲಿ ನಾಗಭೂಷಣ್ ನಾಯಕನಾಗಿ ಕಾಣಿಸಿಕೊಂಡಿದ್ದು ಮಲೈಕಾ ವಸುಪಾಲ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ವಿಶೇಷ ಪಾತ್ರದಲ್ಲಿ ಡಾಲಿ ಧನಂಜಯ, ಗರುಡ ರಾಮ್, ರಂಗಾಯಣ ರಘು ,ಧರ್ಮಣ್ಣ ಕಡೂರು ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಇಶಾಮ್ ಮತ್ತು ಹಸೀನ್ ಆಕ್ದನ್ ಕಟ್ ಹೇಳಿದ್ದು ಏಪ್ರಿಲ್ 10 ರಂದು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರ ಕೆಆ ರ್ ಜಿ ಸ್ಟುಡಿಯೋ ಮೂಲಕ ಚಿತ್ರ ಬಿಡುಗಡೆ ಆಗುತ್ತಿದೆ.
ಏಪ್ರಿಲ್ 10ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡದ ಜನ ನಿರ್ಮಾಣದ ಸಿನಿಮಾ ಕೈ ಹಿಡಿದ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ನಿರ್ಮಾಣ ಮಾಡಲು ಪ್ರೋತ್ಸಾಹ ಸಿಗುತ್ತಿದೆ.ಮಕ್ಕಳ ಸಮೇತ ಚಿತ್ರಮಂದಿರಕ್ಕೆ ಬನ್ನಿ.ಮನೆಮಂದಿಯೆಲ್ಲಾ ಎಂಜಾಯ್ ಮಾಡುವ ಸಿನಿಮಾ. ವಿದ್ಯಾಪತಿ ಚಿತ್ರವನ್ನು ನಿರ್ದೇಶಕ ಜೋಡಿ ಪ್ರೀತಿಯಿಂದ ಮಾಡಿದ್ದಾರೆ. ಕೆಆರ್ ಜಿ ಸ್ಟುಡಿಯೋ ವಿತರಣೆ ಮಾಡುತ್ತಿದೆ. ನನ್ನ ಐದು ಚಿತ್ರವನ್ನೂ ಮಾಡಿದ್ದಾರೆ. ನಿಮಗೆ ನಿರ್ಮಾಣ ಮಾಡುವುದು ಬೇಕಾ ಅನ್ನುವ ಜನರು ಇದ್ಸಾರೆ. ಒಳ್ಳೆಯ ಕಥೆ ಕೇಳಿದರೆ ಮತ್ತೊಂದು ಸಿನಿಮಾ ಮಾಡೋಣ ಎನ್ನುವ ಉದ್ದೇಶದಿಂದ ನಿರ್ಮಾಣ ಮಾಡುತ್ತಿದ್ದೇನೆ. ನಟ ನಾಗಭೂಷಣ್ ಅವರಿಗೆ ಒಳ್ಳೆಯ ಸಿನಿಮಾ ಬರಲಿ. ಚಿತ್ರದಲ್ಲಿ ಅನಕೊಂಡ ಪಾತ್ರ ಮಾಡಿದ್ದೇನೆ ಎಂದರು.
ನಟ ದೃವ ಸರ್ಜಾ ಮಾತನಾಡಿ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಧನಂಜಯ ಅವರು ಸಿನಿಮಾದಲ್ಲಿ ದುಡಿದ ದುಡ್ಡನ್ನು ಸಿನಿಮಾಗೆ ಹಾಕುತ್ತಿದ್ದಾರೆ.ನಮ್ಮ ತಲೆ ಮಾರಿನ ನಟರ ಪೈಕಿ ನಟ ಧನಂಜಯ ಮಾದರಿ. ಏಪ್ರಿಲ್ 13 ರಂದು ಪತ್ನಿ ಜೊತೆಗೂಡಿ ಸಿನಿಮಾ ನೋಡುತ್ತೇನೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.
ನಾಯಕಿ ಮಲೈಕಾ ವಸುಪಾಲ್ ಮಾತನಾಡಿ, ಚಿತ್ರದಲ್ಲಿ ಸೂಪರ್ ಸ್ಟಾರ್ ನಟಿಯ ಪಾತ್ರ ಮಾತನಾಡಿದ್ದೇನೆ. ಒಳ್ಳೆಯ ಪಾತ್ರ ಸಿಕ್ಕಿದೆ. ಏಪ್ರಿಲ್ 10 ರಂದು ಚಿತ್ರ ಬಿಡುಗಡೆ ಆಗುತ್ತಿದೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದರು.
ನಿರ್ದೇಶಕ ರಾದ ಇಶಾಮ್ ಮತ್ತು ಹಸೀನ್ ಮಾತನಾಡಿ, ಸಿನಿಮಾ ಮಾಡಬೇಕು ಎನ್ನುವ ಬಹು ದಿನದ ಕನಸನ್ನು ನಟ ಡಾಲಿ ಧನಂಜಯ ಸಾಕಾರ ಮಾಡಿದ್ದಾರೆ.. ಈ ಮುಂಚೆ " ಇಕ್ಕಟ್ಟು" ಚಿತ್ರದ ಬಳಿಕ ಎರಡನೇ ಚಿತ್ರ. ಚಿತ್ರಕ್ಕೆ ಯಾವುದೇ ಕೊರತೆ ಇಲ್ಲದೆ ಡಾಲಿ ಧನಂಜಯ ಚಿತ್ರಕ್ಕೆ ಏನು ಬೇಕೋ ಅದನ್ನು ನೀಡಿದ್ದಾರೆ. ವಿದ್ಯಾಪತಿ ಚಿತ್ರವನ್ನು ಕುಟುಂಬ ಸಮೇತ ನೋಡುವ ಚಿತ್ರ. ನಾಗಭೂಷಣ ಜೊತೆ ಕೆಲಸ ಮಾಡುವುದು ಕಂಫರ್ಟ್ . ನಾಗಭೂಷಣ್ ಅವರ ನಟನೆ ನೋಡಿದರೆ ಎಲ್ಲರೂ ಇಂಪ್ರೆಸ್ ಆಗುತ್ತೀರಾ.. ನಾಯಕಿ ಮಲೈಕಾ ಕೂಡ ಚೆನ್ನಾಗಿ ಮಾಡಿದ್ದಾರೆ. ಗರುಡ ರಾಮ್ ಕಥೆ ಕೇಳಿ ಒಪ್ಪಿಕೊಂಡರು ಎಂದು ಮಾಹಿತಿ ಹಂಚಿಕೊಂಡರು ವಿತರಕರಾದ ಯೋಗಿ ಜಿ ರಾಜ್ .
ಕಲಾವಿದ ಧರ್ಮಣ್ಣ ಕಡೂರು ಮಾತನಾಡಿ ಎಣ್ಣೆಗೆ ಏನೇ ನೆಂಚಿಕೊಂಡರೂ ಉಪ್ಪಿನಕಾಯಿ ಅಷ್ಟು ರುಚಿ ಸಿಗಲ್ಲ ಆ ರೀತಿಯ ಪಾತ್ರ. ಚಿತ್ರ ಅಂದುಕೊಂಡಂತೆ ಚೆನ್ನಾಗಿ ಮೂಡಿ ಬಂಂದಿದೆ ಎಂದರು.
ನಿರ್ದೇಶಕ ಶಶಾಂಕ್ ಸೋಗಲ್, ನಟ ಪೂರ್ಣ ಚಂದ್ರ ತೇಜಸ್ವಿ ಕಲಾವಿದರಾದ ಗಿರೀಶ್ ಜಟ್ಟಿ, ಶ್ರೀವತ್ಸ, ಬಿಂಧು, ಪ್ರತೀಕ್ಷಾ
ಮತ್ತಿತರರು ಮಾಹಿತಿ ಹಂಚಿಕೊಂಡರು.