Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ
Posted date: 21 Fri, Mar 2025 10:17:57 AM
 ಮಾರ್ಚ್ 22ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ  ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಬೆಂಬಲ ವ್ಯಕ್ತಪಡಿಪಡಿಸಿದೆ. ಈ ಕುರಿತು ಮಾಹಿತಿ ನೀಡಲು  ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಕನ್ನಡ ಚಿತ್ರರಂಗ ಕರ್ನಾಟಕ ಬಂದ್‌ಗೆ ತನ್ನ ಬೆಂಬಲ ನೀಡುತ್ತಿದೆ, ಆದರೆ ಯಾವುದೇ  ಚಿತ್ರೀಕರಣ ಬಂದ್ ಮಾಡಲಾಗಲ್ಲ ಎಂದರು. 
 
ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲ ಇರಲಿದೆಯಾದರೂ ಸಿನಿಮಾ ಚಿತ್ರೀಕರಣಗಳನ್ನು ನಿಲ್ಲಿಸಲಾಗುತ್ತಿಲ್ಲ. ಚಿತ್ರಪ್ರದರ್ಶಕರು ಸಹ ಬಂದ್‌ಗೆ ತಮ್ಮ  ಬೆಂಬಲ ನೀಡಿದ್ದು, ಅಂದು ಬೆಳಗಿನ ಶೋ ನಿಲ್ಲಿಸುತ್ತಿದ್ದಾರೆ, ಆದರೆ  ಮಧ್ಯಾಹ್ನದ ನಂತರ  ಎಂದಿನಂತೆ ಶೋ ನಡೆಯಲಿವೆ.
 
ಸಭೆಯ ಬಳಿಕ ಮಾತನಾಡಿದ ಚೇಂಬರ್ ಅಧ್ಯಕ್ಷ  ನರಸಿಂಹಲು, ರಾಜಣ್ಣ ಅವರ ಕಾಲದಿಂದಲೂ  ಕನ್ನಡ ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಚಿತ್ರರಂಗ  ಬೆಂಬಲ ನೀಡುತ್ತಾ ಬಂದಿದೆ. ಈಗ ರಾಜ್ಯದ ಹಿತದೃಷ್ಟಿಯಿಂದ ಮಾಡುತ್ತಿರುವ ಈ ಬಂದ್‌ಗೆ ಚಿತ್ರರಂಗದ ಎಲ್ಲಾ ವಲಯಗಳ ಬೆಂಬಲವಿದೆ. ಎಂದು ಹೇಳಿದ್ದಾರೆ.
 
ಚಲನಚಿತ್ರದ  ಶೂಟಿಂಗ್‌ಗೆ ಯಾವುದೇ ಕಡಿವಾಣ ಇರುವುದಿಲ್ಲ. ಆದರೆ ಚಿತ್ರ ತಂಡಗಳು ಅಥವಾ ನಿರ್ಮಾಪಕರು ಸ್ವಯಂಪ್ರೇರಿತವಾಗಿ ಚಿತ್ರೀಕರಣ ಬಂದ್ ಮಾಡಿದರೆ ಅದಕ್ಕೆ ನಮ್ಮ ಸ್ವಾಗತವಿದೆ. ಕಲಾವಿದರ ಸಂಘ, ನಿರ್ಮಾಪಕರ ಸಂಘವೂ ಸಹ ಬೆಂಬಲ ವ್ಯಕ್ತಪಡಿಸಿದೆ  ಎಂದು ಮಾಹಿತಿ ನೀಡಿದರು.
 
ಪ್ರದರ್ಶಕರ ಸಂಘದ ಕಾರ್ಯದರ್ಶಿ ಕುಶಾಲ್ ಚಂದ್ರಶೇಖರ್ ಮಾತನಾಡಿ, ಮಾರ್ಚ್ ೨೨ರಂದು ಬೆಳಗಿನ ಪ್ರದರ್ಶನ ಬಂದ್ ಮಾಡಿ, ಮಧ್ಯಾಹ್ನದಿಂದ ಎಂದಿನಂತೆ ಪ್ರದರ್ಶನ ನಡೆಯಲಿವೆ, ಒಂದು ಶೋ ಬಂದ್ ಮಾಡುವ ಮೂಲಕ  ಪ್ರದರ್ಶಕರ ವಲಯದಿಂದ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ - Chitratara.com
Copyright 2009 chitratara.com Reproduction is forbidden unless authorized. All rights reserved.