ಚಿತ್ರ; ಬ್ಯಾಡ್
ನಿರ್ದೇಶನ : ಪಿ.ಸಿ ಶೇಖರ್
ತಾರಾಗಣ; ನಕುಲ್ ಗೌಡ, ಮಾನ್ವಿತಾ ಹರೀಶ್, ಅಪೂರ್ವ ಭಾರಧ್ವಜ್, ಕಡ್ಡಿಪುಡಿ ಚಂದ್ರು ಮತ್ತಿತರರು
ಅವಧಿಯ ಸಮಯ : 100 ನಿಮಿಷ
ರೇಟಿಂಗ್ : * 3/5
ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಚಿತ್ರ ಕಟ್ಟಿಕೊಟ್ಟಿರುವ ನಿರ್ದೇಶಕ ಪಿ.ಸಿ ಶೇಖರ್. ಇದೀಗ ಬ್ಯಾಡ್ ಮೂಲಕ ಮತ್ತೊಂದು ಬಗೆಯ ಚಿತ್ರವನ್ನು ಪ್ರೇಪಕ್ಷಕರ ಮುಂದಿಟ್ಟಿದ್ದಾರೆ.
ಸೇಡಿನ ಕಥೆಯನ್ನು ಕೊನೆತನಕ ಕುತೂಹಲ ಕಾಪಾಡಿಕೊಂಡು ಜನರನ್ನು ಹಿಡಿದಿಡುವ ಕೆಲಸ ಮಾಡಿದ್ದಾರೆ ನಿರ್ದೇಶಕರು. ಅದರಲ್ಲಿ ಅವರು ಒಂದು ಸಫಲರಾಗಿದ್ದಾರಾ ಅಥವಾ ವಿಫಲರಾಗಿದ್ದಾರಾ ಎನ್ನುವುದು ಚಿತ್ರದಲ್ಲಿ ನೋಡಬೇಕು. ಆದರೆ ಉತ್ತಮ ಪ್ರಯತ್ನ ಮಾಡಿದ್ದಾರೆ.
ಸಾಲು ಸಾಲು ಕೊಲೆಗಳ ಸುತ್ತ ನಡೆಯುವ ಪ್ರತೀಕಾರದ ಕಥೆಗೆ ಹಳ್ಳಿಯ ಹಿನ್ನೆಲೆ ಮತ್ತು ರೌಡಿಸಂ, ರಾಜಕಾರಣ ಪ್ರೀತಿ, ಪ್ರೇಮ ಎಲ್ಲವನ್ನೂ ಬೆರೆಸಿ ಚಿತ್ರವನ್ನು ಜನರ ಮುಂದಿಟ್ಟಿದ್ದಾರೆ. ಈ ಮೂಲಕ ಹೆಸರಿಗೆ ತಕ್ಕಂತೆ " ಬ್ಯಾಡ್ " ಚಿತ್ರವನ್ನು ತೆರೆಯ ಮೇಲೆ ಬಂದಿದೆ.
ವೇದ ( ನಕುಲ್ ಗೌಡ) ಹೇಳಿದ್ದೇ ವೇದ ವಾಕ್ಯ. ಎಂತಹ ಕಠಿಣ ಕೆಲಸವನ್ನೂ ಒಬ್ಬನೇ ನೀರು ಕುಡಿದಷ್ಟು ಸಲೀಸಾಗಿ ಮಾಡಬಲ್ಲ. ಇಂತವನಿಗೆ ರಾಜಕೀಯ ವ್ಯಕ್ತಿಯೊಬ್ಬರಿಂದ ಎದುರಾಳಿಯನ್ನು ಪತ್ತೆ ಹಚ್ಚುವ ಸುಫಾರಿ ಸಿಗುತ್ತದೆ. ಅದನ್ನು ಪಡೆದ ಆತ ಬೆನ್ನುತ್ತುತ್ತಾನೆ.
ಮೂರ್ನಾಲ್ಕು ದಿನದಲ್ಲಿ ಶಾಸಕ ಸ್ಥಾನದ ಟಿಕೆಟ್ ಘೋ಼ಷಣೆ ಆಗಬೇಕು,ಅಷ್ಟರ ಒಳಗೆ ಒಪ್ಪಿಕೊಂಡ ಕೆಲಸ ಮಾಡಬೇಕು ಆದರೆ. ಆತನೋ ಬಂದ ಕೆಸಕ್ಕಿಂತ ಒಬ್ಬೊಬ್ಬರನ್ನೇ ಹತ್ಯೆ ಮಾಡುತ್ತಾನೆ. ಸಾಲು ಸಾಲು ಕೊಲೆ ಯಾಕೆ ಮಾಡಿದ ಎನ್ನುವುದಕ್ಕೆ ಫ್ಲಾಶ್ ಬ್ಯಾಕ್ ಅದು ಮತ್ತಷ ಕುತೂಹಲಕಾರಿ.
ಮೊದಲ ನೋಟದಲ್ಲಿ ಕಂಡ ಹುಡುಗಿ ಅನು ( ಮಾನ್ವಿತಾ ಕಾಮತ್) ನನ್ನು ನೋಡಿ ಆಕೆಯನ್ನು ಪ್ರೀತಿ ಮಾಡಿ ಮದುವೆಯಾಗುತ್ತಾನೆ. ಇನ್ನೇನು ಎಲ್ಲವೂ ಸಲೀಲು ಎನ್ನುವಾಗ ಅನಾಹುತ ಸಂಭವಿಸುತ್ತದೆ.ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.
ನಾಯಕ ನಕುಲ್ ಗೌಡ ತಮಗೆ ಸಿಕ್ಕ ಪಾತ್ರವನ್ನು ನಿಬಾಯಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಭರವಸೆ ನಾಯಕನಾಗುವ ಲಕ್ಷಣ ತೋರಿಸಿದ್ದಾರೆ.ನಟನೆ,ಹಾವ ಭಾವದ ಕಡೆಗೆ ಗಮನಹರಿಸಿದರೆ ಒಳ್ಳೆಯದು. ನಾಯಕಿ ಮಾನ್ವಿತಾ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಚಿತ್ರದುದಕ್ಕೂ ನಟಿ ಅಪೂರ್ವ ಭಾರದ್ವಾಜ್ ಗಮನ ಸೆಳೆದಿದ್ದಾರೆ. ಸಾಯಿ ಕೃಷ್ಣ, ಕಡ್ಡಿಪುಡಿ ಚಂದ್ರು ಮತ್ತಿತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.