"ಕಮಿಟ್ ಮೆಂಟ್, ಜವಾಬ್ದಾರಿ ಫ್ಯಾಮಿಲಿಗೆ ಮಾತ್ರವಲ್ಲ ಮಾಡುವ ಉದ್ಯೋಗ, ಕೆಲಸದ ಮೇಲೂ ಇರಬೇಕು. ಫ್ಯಾಮಿಲಿಗೆ ತೋರಿಸವುದು ಕೆಲಸದ ಮೇಲೆ ತೋರಿಸಬೇಕು. ಆಗ ಮಾತ್ರ ಮಾಡುವ ಕೆಲಸಕ್ಕೆ ಗೌರವ ಸಲ್ಲಿಸಲು ಸಾಧ್ಯ..
" ಹೀಗಂತ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ ಹೇಳಿಕೆಯಲ್ಲಿ ಯಾವುದೇ ಅತಿಶಯೋಕ್ತಿ ಇರಲಿಲ್ಲ, ಬದಲಾಗಿ ಮಾಡುವ ಕೆಲಸವನ್ನು ಪ್ರೀತಿಸುವ ಮತ್ತು ಗೌರವಿಸುವ ಬದ್ದತೆ ಕಾಣುತ್ತಿತ್ತು. ತೀವ್ರ ಅನಾರೋಗ್ಯದ ಸಮಸ್ಯೆಯ ನಡುವೆಯೂ ಚಿತ್ರೀಕರಣದಲ್ಲಿ ಭಾಗಿಯಾಗಿ ಡಬ್ಬಿಂಗ್ ಮುಗಿಸಿಕೊಟ್ಟ ಅವರ ಕೆಲಸ ಕನ್ನಡ ಚಿತ್ರರಂಗದ ಅಷ್ಟೇ ಅಲ್ಲ ಭಾರತೀಯ ಚಿತ್ರರಂಗದ ಕಲಾವಿದರಿಗೆ ಮಾದರಿ ಮತ್ತು ಅನುಕರಣೀಯ.
"45" ಚಿತ್ರದ ಟೀಸರ್ ಬಿಡುಗಡೆ ವೇಳೆ ಮಾಹಿತಿ ಹಂಚಿಕೊಂಡ ಶಿವಣ್ಣ, ಆರೋಗ್ಯದಲ್ಲಿ ಏರುಪೇರಾದಾದ ನನಗೂ ಭಯ ಕಾಡ್ತಾ ಇತ್ತು. ನಾಳೆ ಏನಾಗುತ್ತದೆ ಯಾರಿಗೆ ಗೊತ್ತು ಎನ್ನುವ ಆತಂಕ ಮನೆ ಮಾಡಿತ್ತು, ಈ ಕಾರಣಕ್ಕೆ ನನ್ನಿಂದ ಚಿತ್ರತಂಡಕ್ಕೆ ಮತ್ತು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದ ಅರ್ಜುನ್ ಜನ್ಯಗೆ ತೊಂದರೆ ಆಗಬಾರದು ಎಂದು ಕೆಲಸ ಮಾಡಿ ಮುಗಿಸಿಕೊಟ್ಟೆ ಎಂದರು.
ಕಿಮೋ ಥೆರಪಿಗೆ ಓಳಗಾಗಬೇಕು ಎಂದು ಹೇಳುತ್ತಿದ್ದಂತೆ ನಿರ್ದೇಶಕ ಅರ್ಜುನ್ ಜನ್ಯ ಮಗುವಿನ ರೀತಿ ಅತ್ತು ಬಿಟ್ಟರು. ಚಿತ್ರೀಕರಣ ನಿಲ್ಲಿಸಲು ಮುಂದಾಗಿದ್ದರು.,ಕಿಮೋ ಮಾಡಿಸಿಕೊಳ್ಳಿ ಎಂದರು. ಯಾವುದೇ ಕಾರಣಕ್ಕೂ ಚಿತ್ರೀಕರಣ ನಿಲ್ಲಿಸಬಾರದು. ಮುಂದುವರಿಸುತ್ತೇವೆ ಎಂದರೆ ಕಿಮೋಗೆ ಒಪ್ಪಿಕೊಳ್ಳುತ್ತೇನೆ ಎನ್ನುವ ಷರತ್ತು ಹಾಕಿದೆ. ಅವರು ಒಪ್ಪಿಕೊಂಡರು, ಚಿತ್ರೀಕರಣ ಮಾಡಿ ಮುಗಿಸಿದೇವೆ. ಎಲ್ಲಾ ಆದ ನಂತರವೇ ಅಮೇರಿಕಾಕ್ಕೆ ಚಿಕಿತ್ಸೆಗೆ ತೆರಳಿದ್ದು ಎಂದು ಹೇಳಿದರು
ನನ್ನ ಆರೋಗ್ಯದ ಸಮಸ್ಯೆ ಎದುರಾಗಿದ್ದ ಸಮಸ್ಯೆ ಎದುರಾಗಿದ್ದ ವೇಳೆ ತುಂಬಾ ಮಂದಿ ಸಹಾಯ ಮಾಡಿದ್ದಾರೆ. ಅಭಿಮಾನಿಗಳು,ಚಿತ್ರರಂಗದವರು ಮಾದ್ಯಮದವರು, ಸಹಕಾರ ನೀಡಿದ್ದಾರೆ. ನಾನು ಹೇಳುವವರೆಗೆ ಯಾರೂ ಹೇಳಲಿಲ್ಲ ಇದಕ್ಕಿಂತ ಪ್ರೀತಿ ಇನ್ನೇನು ಬೇಕು. ದುಡ್ಡು ಬರುತ್ತೆ ಹೋಗತ್ತೆ. ಪ್ರೀತಿ ವಿಶ್ವಾಸ ಶಾಶ್ವತವಾಗಿರಬೇಕು ಎಂದು ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು ಶಿವಣ್ಣ
ಜೊತೆಗೆ ರಿಯಾಲಿಟಿ ಶೋ ಮಾಡುವಾಗ ನಟಿ ರಕ್ಷಿತಾ ಸೇರಿದಂತೆ ಎಲ್ಲರೂ ಸಹಕಾರ ನೀಡಿದರು, ವಾಕಿಂಗ್ ಸ್ನೇಹಿತರು, ಬಾಲ್ಯದ ಗೆಳೆಯರು ಪ್ರತಿಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಈ ಹಂತದಲ್ಲಿ ಚಿಕಿತ್ಸೆ ನೀಡಿದವರು ಎಲ್ಲರಿಗೂ ಧನ್ಯವಾದ. ಚಿಕಿತ್ಸೆಯ ಬಳಿಕ ಡಬ್ಬಲ್ ಎನರ್ಜಿ ಬಂದಿದೆ. ಕಳೆದ ಏಪ್ರಿಲ್ ನಿಂದ ಈ ವರ್ಷದ ಮಾರ್ಚ್ ತನಕ ಮನಸ್ಸಿನಲ್ಲಿ ಏನೇನೋ ಓಡ್ತಾ ಇತ್ತು. ಈಗ ಎಲ್ಲ ಗೊಂದಲ ಸಮಸ್ಯೆಗೆ ಪರಿಹಾರ ಸಿಕ್ಕಿದೆ.ಈಗ ವಾಪಸ್ ಬಂದಿದ್ದೇನೆ ಆರೋಗ್ಯವಾಗಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು
ಅಂಡರ್ ವಲ್ಡ್ ಸಿನಿಮಾಗೆ ಓಂಕಾರ ಹಾಕಿದ್ದು ಉಪೇಂದ್ರ
ಎಲ್ಲರೂ "ಓಂ" ಚಿತ್ರದ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ, ನಾನು ಚೆನ್ನಾಗಿ ಮಾಡಿದ್ದರೆ ಅದರ ಹಿಂದೆ ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಮೇಕಪ್ ಮ್ಯಾನ್, ಲೈಟ್ ಮ್ಯಾನ್ ನಿಂದ ಎಲ್ಲರ ಸಹಕಾರವೂ ಇದೆ, ನಿರ್ದೇಶಕರು ಪಾತ್ರವನ್ನು ಸ್ಕೆಚ್ ಮಾಡಿ ಈ ರೀತಿ ಮಾಡಬೇಕು ಎಂದಾಗ ಮಾಡಿದ್ದೇನೆ ಹೊರತು ಅದರಲ್ಲಿ ನನ್ನದೇನು ಇಲ್ಲ ಎಂದು ದೊಡ್ಡತನ ಮೆರೆದರು ಶಿವಣ್ಣ.
ಅಂಡರ್ ವಲ್ಡ್ ಚಿತ್ರಕ್ಕೆ ಓಂಕಾರ ಹಾಕಿದವರೇ ಉಪೇಂದ್ರ, ಅವರ ಓಂ ಬಗ್ಗೆ ಮಾತನಾಡುವ ಮೊದಲು ಅವರ ತರ್ಲೆ ನನ್ಮಗ, ಶ್. ಸೇರಿದಂತೆ ಅನೇಕ ಚಿತ್ರ ನೋಡಿ ಅವರ ಪ್ರತಿಭೆ ತಿಳಿಯುತ್ತದೆ. ಓಂ ಚಿತ್ರ ಒಪ್ಪಿಕೊಳ್ಳುವಾಗ ಅಪ್ಪಾಜಿ, ವರದಪ್ಪ ಅವರು ಪ್ರಮುಖ ಪಾತ್ರ ವಹಿಸಿದ್ದರು, ಅಮ್ಮ ನಿರ್ಮಾಣ ಮಾಡಿದ್ದರು ಹೀಗಾಗಿ ಓಂ ಇತಿಹಾಸ ಸೃಷ್ಠಿ ಮಾಡಿತು ಎಂದರು
ನಾಯಕ ತನ್ನ ಕೆಲಸದ ವೇಳೆ ನಿರ್ದೇಶಕನನ್ನು ಪ್ರೀತಿಸಬೇಕು. ಆತ ಮಾಡುವ ಕೆಲಸ ಬೆಂಬಲ ನೀಡಬೇಕು.ಸಣ್ಣ ಪುಟ್ಟ ಗೊಂದಲ ಇದ್ದರೆ ಪರಿಹರಿಸಿಕೊಳ್ಳಬೇಕು. ಓಂ ಚಿತ್ರೀಕರಣದ ಸಮಯದಲ್ಲಿ ಉಪೇಂದ್ರ ಹೇಳಿದ ಹಾಗೆ ಕೇಳುತ್ತಿದೆ. ಕಥೆ ಕೇಳಿದ ದಿನವೂ ಪಾತ್ರದೊಳಗೆ ಹೋಗಿದ್ದೆ, ಹೀಗಾಗಿ ಚಿತ್ರ ಚೆನ್ನಾಗಿ ಮೂಡಿ ಬಂದು ಇತಿಹಾಸ ಸೃಷ್ಠಿಸಿತು, ಅದೇ ರೀತಿ "45" ಆಗಬೇಕು.ವಿಭಿನ್ನವಾದ ಭಾರತದಲ್ಲಿ ವಿಭಿನ್ನವಾದ ಸಿನಿಮಾ ಆಗಲಿದೆ ಎಂದು ಸಿಕ್ತು ಸೆನ್ಸ್ ಹೇಳ್ತಾ ಇದೆ ಎಂದು ಭವಿಷ್ಯ ನುಡಿದರು