ಡಾಲಿ ಧನಂಜಯ ನಿರ್ಮಾಣದಲ್ಲಿ ಮೂಡಿ ಬಂದಿರುವ " ವಿದ್ಯಾಪತಿ" ಚಿತ್ರ ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ನಾಗಭೂಷಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಗರುಡ ರಾಮ್, ಡಾಲಿ ಧನಂಜಯ ಸೇರಿದಂತೆ ಹಲವು ಮಂದಿ ಕಲಾವಿದರಿದ್ದು ಮನ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದು ಎನ್ನುವ ಮಾತುಗಳು ಕೇಳಿಬಂದಿವೆ.
"ವಿದ್ಯಾಪತಿ" ಚಿತ್ರ ಏಪ್ರಿಲ್ 10 ರಂದು ಬಿಡುಡಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಜೊತೆ ಮುಖಾಮುಖಿಯಾಗಿದ್ದ ನಟ ನಾಗಭೂಷಣ ಮತ್ತು ನಟಿ ಮಲೈಕಾ ವಸುಪಾಲ್ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು,
"ವಿದ್ಯಾಪತಿ" ಚಿತ್ರದಲ್ಲಿ ನಾನೊಬ್ಬಳು ಸೂಪರ್ ಸ್ಟಾರ್ ನಟಿ, ಮಾಡಿದ 6 ಚಿತ್ರಗಳನ್ನು ಸೂಪರ್ ಡೂಪರ್ ನೀಡಿದ ನಟಿ. ಎರಡನೇ ಚಿತ್ರದಲ್ಲಿ ನಿರೀಕ್ಷೆ ಮಾಡದ ಪಾತ್ರ ಸಿಕ್ಕಿದೆ. ಜೊತೆಗೆ ನಟನೆಗೂ ಹೆಚ್ಚಿನ ಅವಕಾಶವಿದೆ. ಸೂಪರ್ ಸ್ಟಾರ್ ನಟಿಯಾಗಿ ಲ್ಯಾವಿಶ್ ಬದುಕು ನಡೆಸುತ್ತಿದ್ದರೂ ಅವರಿಗೂ ಸಣ್ಣ ಪುಟ್ಟ ಆಸೆಗಳು ಇರುತ್ತವೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸಲಾಗಿದೆ. ವಿದ್ಯಾ ಸೂಪರ್ ಸ್ಟಾರ್ ಆಗಿದ್ದರೂ ಅಪ್ಪ ಅಮ್ಮನ ಪ್ರೀತಿ ಸಿಕ್ಕಿರಲಿಲ್ಲ, ಪಾನಿ ಪೂರಿ ತಿನ್ನಬೇಕು ಎನ್ನುವುದು ಸೇರಿದಂತೆ ಚಿಕ್ಕ ಚಿಕ್ಕ ಆಸೆಗಳು ಇರುತ್ತವೆ
ವಿದ್ಯಾಪತಿಯಲ್ಲಿ ನಾನೊಬ್ಬ ಸೂಪರ್ ಸ್ಟಾರ್ ನಟಿ, ತನ್ನ ಪತಿ ಮುಗ್ದ ಎಂದು ನಂಬಿಕೆದವಳು, ಗಂಡ ಸಿಕ್ಕರೆ ಇಂತವನೇ ಇರಬೇಕು ಎಂದು ಅಂದುಕೊಂಡವಳು. ಆದರೆ ಆತ ನನ್ನ ದುಡ್ಡಿನಲ್ಲಿ ಶೋಕಿ ಮಾಡ್ತಾ ಇರುತ್ತಾನೆ, ಇದು ಆಕೆಗೆ ಗೊತ್ತಾಗುತ್ತಾ, ಗೊತ್ತಾದರೆ ಏನು ಮಾಡುತ್ತಾಳೆ ಎನ್ನುವುದು ಕುತೂಹಲದ ವಿಷಯ.
ಚಿತ್ರದ ಕಥೆ ಕೇಳಿದಾಗ 6 ಚಿತ್ರದಲ್ಲಿ ನಟಿಸಿದ ಸೂಪರ್ ಸ್ಟಾರ್ ನಟಿ. ದೊಡ್ಡ ನಟಿಯಾದರೂ ಮುಗ್ದೆ, ಇವಳಿಗೆ ಕ್ವಾಟ್ಲೆ ಕೊಡುವ ಪಾತ್ರ ಇಷ್ಟವಾಯಿತು, ಹೀಗಾಗಿ ಕಥೆ ಕೇಳಿದ ತಕ್ಷಣ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ನನ್ನ ಚಿತ್ರ ಜೀವನದ ಎರಡನೇ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಪುಣ್ಯ
ನಾಯಕಿಯಾಗಿ ಇಂತಹುದೇ ಪಾತ್ರ ಎಂದೇನು ಇಲ್ಲ. ಯಾವುದೇ ಪಾತ್ರ ಸಿಕ್ಕರೂ ನಟಿಸುವೆ.ನಿಜ ಜೀವನದಲ್ಲಿ ನಾನು ಇರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಬಂದರೂ ನಟಿಸುವೆ. ನೆಗೆಟೇವ್ ಪಾತ್ರ ಬಂದರೆ ನಟಿಸಬೇಕು, ಮೊದಲ ಸಿನಿಮಾದಲ್ಲಿ 18 ವರ್ಷ, ಇಲ್ಲಿ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದೇನೆ, ಅದರಲ್ಲಿಯೂ ಮದನಾರಿ ಹಾಡಿನಲ್ಲಿ ಮಾದಕವಾಗಿ ತೋರಿಸಿದ್ದಾರೆ ಹಾಡು ಚೆನ್ನಾಗಿ ಮೂಡಿಬಂದಿದೆ.
ನಾಗಭೂಷಣ ಅವರ "ಟಗರು ಪಲ್ಯ" ಚಿತ್ರಮಂದಿರಲ್ಲಿ ಯಶಸ್ಸು ಕಂಡಿದೆ. ಅದೇ ರೀತಿ ನಾನು ನಟಿಸಿದ "ಉಪಾಧ್ಯಕ್ಷ " ಚಿತ್ರ ಕೂಡ ಹಿಟ್ ಆಗಿದೆ. ಈಗ ನಮ್ಮಿಬ್ಬರ ಕಾಂಬಿನೇಷನ್‍ನ "ವಿದ್ಯಾಪತಿ" ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಇಬ್ಬರದೂ ಚಿತ್ರಮಂದಿರಕ್ಕೆ ಬರುತ್ತಿರುವ ಎರಡನೇ ಚಿತ್ರ. ಸಿನಿಮಾಗಳಲ್ಲಿ ಡಬ್ಬಲ್ ಮೀನಿಂಗ್ ಇದ್ದೇ ಇರುತ್ತದೆ, ಆದರೆ ನಮ್ಮ ಸಿನಿಮಾದಲ್ಲಿ ಒಂದೇ ಒಂದು ಡಬ್ಬಲ್ ಮೀನಿಂಗ್ ಇಲ್ಲ, ಎಲ್ಲರಿಗೂ ಇಷ್ಟವಾಗಲಿದೆ, ಅದರಲ್ಲಿಯೂ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯಾವುದೇ ಮುಜುಗರವಿಲ್ಲದೆ ಸಿನಮಾ ನೋಡಬಹುದು. ಸಾಮಾನ್ಯವಾಗಿಗಿ ಕಾಮಿಡಿ ಸಿನಿಮಾಗಳಲ್ಲಿ ರೋಮಾನ್ಸ್ ಮತ್ತು ಆಕ್ಷನ್ ಇರುವುದಿಲ್ಲ ನಮ್ಮ ಚಿತ್ರದಲ್ಲಿ ಇದೆ.ಅದರಲ್ಲಿಯೂ ಗರುಡ ರಾಮ್ ಮತ್ತು ನಾಗಭೂಷಣ ಎದುರು ಬದರು ನಿಂತಾಗ ಅದನ್ನು ನೋಡುವುದೇ ಮಜಾ
ದಸರಾಗೆ ಕಲ್ಟ್ ಬಿಡುಗಡೆಯಾಗುವ ಸಾಧ್ಯತೆ ಇದೆ, ಇನ್ನು 10 ದಿನ ಬಾಕಿ ಚಿತ್ರೀಕರಣ ಇದೆ. ಅಜಯ್ ರಾವ್ ಜೊತೆ ಸಿನಿಮಾಗೆ ಸಹಿ ಹಾಕಿದ್ದೇನೆ. ಇನ್ನು ಒಂದಷ್ಟು ಕಥೆಗಳನ್ನು ಕೇಳುತ್ತಿದ್ದೇನೆ. ಉಪಾಧ್ಯಕ್ಷ ಚಿತ್ರದ ವೇಳೆಯೂ ಹೇಳಿದ್ದೆ, ಸ್ಥಳೀಯ ಕಲಾವಿದರು ನಟಿಯರಿಗೆ ಅವಕಾಶ ಕೊಡಿ ಎಂದಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ., ಸ್ಥಳೀಯರಿಗೆ ಅವಕಾಶ ಕೊಟ್ಟಾಗ ಅವರ ಪ್ರತಿಭೆ ಮತ್ತು ಸಾಮಥ್ರ್ಯ ತಿಳಿಯಲಿದೆ. ಜೊತೆಗೆ ಸ್ಥಳೀಯರು ಬೆಳೆಯಲು ಅವಕಾಶ ಸಿಗುತ್ತದೆ. ನಮ್ಮದು ಹೊಟ್ಟೆ ಪಾಡು ತಾನೆ. ನಾಯಕಿಯಾಗಿ ನಾವು ಕನ್ನಡದಲ್ಲಿಯೇ ಮುಂದುವರಿಯುವ ಆಸೆ ಇದೆ
ವಿದ್ಯಾಪತಿ ಚಿತ್ರದಲ್ಲಿ ಸಿಕ್ಕಿರುವ ಪಾತ್ರ ಯಾವುದೇ ನಟಿಗೆ ಕನಸಿನ ಪಾತ್ರ. ನಟಿಯರಿಗೆ ಗ್ಲಾಮರಸ್ ಪಾತ್ರ ಮಾಡುವ ಹಂಬಲವಿರುತ್ತದೆ, ಅದು ನನಗೆ ಎರಡನೇ ಚಿತ್ರದಲ್ಲಿ ಸಿಕ್ಕಿದೆ. ಅದು ನನ್ನ ಅದೃಷ್ಟ ಜೊತೆಗೆ ವಿಭಿನ್ನ ಕಥೆ ಎಲ್ಲರಿಗೂ ಇಷ್ಟವಾಗಲಿದೆ ಎಂದರು ನಟಿ ಮಲೈಕಾ ವಸುಪಾಲ್