Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಗ್ಲೋಬಲ್` ಲೆವೆಲ್ನಲ್ಲಿ ಕನ್ನಡಿಗ ಮಹಾಬಲ ರಾಮ್ ಹವಾ..ಪಾಕಿಸ್ತಾನ ಪ್ರವಾಸದ ಮಾಡಿದ ಮೊದಲ ಯೂಟ್ಯೂಬರ್
Posted date: 06 Sun, Apr 2025 03:59:58 PM
ಇದು ಸೋಷಿಯಲ್ ಮೀಡಿಯಾ ಜಮಾನ..ಮನೆ ಮನೆಯಲ್ಲಿಯೂ ಯೂಟ್ಯೂಬ್ ಗಳ ಹಂಗಾಮ. ಇಂತಹ ಕಾಲಘಟ್ಟದಲ್ಲಿ ಯೂಟ್ಯೂಬರ್ ಗಳು ಹೊಸ ಸಾಹಸಗಳನ್ನು ಮಾಡಲೇಬೇಕು. ಭಿನ್ನ-ವಿಭಿನ್ನ ಕಂಟೆಂಟ್ಗಳನ್ನು ವೀಕ್ಷಕರಿಗೆ ಕೊಡಬೇಕು. ಅಂತಹ ಸಾಹಸವನ್ನು ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಖ್ಯಾತಿಯ ಮಹಾಬಲ ರಾಮ್ ಮಾಡಿದ್ದಾರೆ.

ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಮೂಲಕ ಹೊಸ ಬಗೆಯ ಕಂಟೆಂಟ್ ಕೊಡ್ತಿರುವ ಮಹಾಬಲ ರಾಮ್ ಮೊದಲ ಬಾರಿಗೆ ಪಾಕಿಸ್ತಾನ ಸುತ್ತಿ ಬಂದಿದ್ದಾರೆ. ಅದು ಕೇವಲ ಒಂದೆರೆಡು ದಿನವಲ್ಲ. ಬರೋಬ್ಬರಿ 7 ದಿನದ ಪ್ರವಾಸ. ಏಳು ದಿನ ಪಾಕಿಸ್ತಾನ ಸುತ್ತಿ ಬಂದಿದ್ದು, ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದು, ಇಂಡಿಯಾ ಪಾಕ್ ಪಂದ್ಯ ನೋಡಿ ಖುಷಿಪಟ್ಟ ಕ್ಷಣಗಳನ್ನು ಸೆರೆ ಹಿಡಿದ್ದಾರೆ. ಪಾಕಿಸ್ತಾನದಲ್ಲಿ ಸುತ್ತಿ ವಿಡಿಯೋ ಮಾಡಿದ ಮೊದಲ ಯೂಟ್ಯೂಬರ್ ಎಂಬ ಖ್ಯಾತಿ ಗ್ಲೋಬಲ್ ಕನ್ನಡಿಗ ರಾಮ್ ಗೆ ಸಿಕ್ಕಿದೆ. ಇನ್ನೂ ಅವರ ಏಳು ದಿನದ ಪಾಕಿಸ್ತಾನದ ಪ್ರವಾಸ ಹೇಗಿತ್ತು ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ. 

ಫೆಬ್ರವರಿ 2025 ಭಾರತದ ಅತ್ತಾರಿ ಗಡಿಯಿಂದ ಪಾಕಿಸ್ತಾನದ ಅಫೀಷಿಯಲ್ ವೀಸಾ ಒಂದಿಗೆ ಪಾಕಿಸ್ತಾನದ ವಾಗಾ ಗಡಿಯ ಕಡೆಗೆ ಕಾಲಿಟ್ಟು ಅಲ್ಲಿಂದ 22 kms ದೂರದಲ್ಲಿ ಇರುವ ಲಾಹೊರ್ ನಗರಕ್ಕೆ ತಲುಪಿದೆ. ಅಂದಿನ ಸಂಜೆ ಸಿಖ್ ಸಮುದಾಯದ ದೇರಾ ಸಹಿಬ್ ಗುರುದ್ವಾರವನ್ನು ಅನ್ವೇಷಸಿ ನಂತರ ಲಾಹೋರ್ ನಗರದ ಸುಪ್ರಸಿದ್ಧ ಫುಡ್ ಸ್ಟ್ರೀಟ್ ಸುತ್ತಾಡಿ, ಅಲ್ಲಿಂದ ಬಹಳ ವಿಶೇಷವಾದ ಹವೇಲಿ ರೆಸ್ಟುರೆಂಟ್ ನಲ್ಲಿ ಬಾದ್ಶಾಹಿ ಮಸೀದಿಯ ವ್ಯೂ ನಲ್ಲಿ ಕುಳಿತು ರಾತ್ರಿಯ ಉಪಹಾರ ಮಾಡಿದೆ.

ಎರಡೇನೆಯ ದಿನ ಲಾಹೋರ್ ನ ಗಲ್ಲಿ ಗಳನ್ನು ಸುತ್ತಿ ಅಲ್ಲಿನ ಲೋಕಲ್ ಜೀವನವನ್ನು ಗಮನಿಸಿದ್ದು. ಅಂದು ಚಾಂಪಿಯನ್ಸ್ ಟ್ರೋಫಿ ಭಾರತದ ಹಾಗು ಪಾಕಿಸ್ತಾನದ ಪಂದ್ಯ ಎಂಜಾಯ್ ಮಾಡಿ, ಅಂದಿನ ದಿನ ಅಲ್ಲಿನ ಲೋಕಲ್ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಅವರ ಜೊತೆ ಮಾತಾಡಿದ್ದು ವಿಶೇಷವಾಗಿತ್ತು.

ನಮ್ಮ ಜೊತೆಯಲ್ಲಿ ಲಾಹೋರ್ ಪೊಲೀಸ್ ನ 24/7 ಬಂದೋಬಸ್ತ್ ಇರುತಿತ್ತು, ಪೊಲೀಸ್  ಕೈಯಲ್ಲಿ ಎಕೆ 47 ಬಂದೂಕು, ಪ್ರತಿ ಊರಿನ ಬದಲಾವಣೆಯ ದಿನ ಅಲ್ಲಿನ ಲೋಕಲ್ ಪೊಲೀಸ್ ಸ್ಟೇಷನ್ ಹೋಗಿ ನಾನು ರಿಜಿಸ್ಟರ್ ಮಾಡಬೇಕಾದದ್ದು ಕಡ್ಡಾಯವಾಗಿತ್ತು. ಲಾಹೋರ್ ನ ರಂಗಲೀಲಾ ಆಟೋದಲ್ಲಿ ಓಡಾಡಿದ್ದು ಮರೆಯಲಾರದ ಅನುಭವ. ಪಾಕಿಸ್ತಾನದ ಸರ್ವೇ ಸಾಮಾನ್ಯ ಜನರು ತುಂಬಾ ಖುಷಿಯಾಗಿದ್ದರು. ನಾನು ಭಾರತೀಯ ಅಂತ ತಿಳಿದಮೇಲೆ. ಒಬ್ಬರು ಕೂಡಾ ಕೋಪ ಆವೇಶ ತೋರಿಸಲಿಲ್ಲ. 

ಪಾಕಿಸ್ತಾನದ katasraj ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿದ್ದು ನೆನಪಿನಲ್ಲಿ ಉಳಿಯುವಂತಹದ್ದು. ಅಲ್ಲಿ ಭಗವಾನ್ ಕೃಷ್ಣ ಸ್ಥಾಪಿಸಿರುವ ಶಿವಲಿಂಗಕ್ಕೆ ಕರ್ನಾಟಕದ ಪಂಚೆ ಸಿಲ್ಕ್ ಶರ್ಟ್ ಹಾಕಿ ಗ್ಲೋಬಲ್ ಕನ್ನಡಿಗ ಪೂಜೆ ಮಾಡಿದ್ದು ಬಹಳ ವಿಶೇಷ. ಅಲ್ಲಿ ಶ್ರೀ ರಾಮನ ದೇವಸ್ಥಾನ, ಹನುಮಂತನ ದೇವಸ್ಥಾನ ಕೂಡಾ ಭೇಟಿ ನೀಡಿ ಆಶೀರ್ವಾದ ಪಡೆದಿದ್ದು ವಿಶೇಷ. 
ನಂತರ ಹೋಗಿದ್ದು ಒಂದು ಪಾಕಿಸ್ತಾನಿ ಹಳ್ಳಿಗೆ, ಅಲ್ಲಿನ ಜನರ ನಿತ್ಯ ಜೀವನ, ವ್ಯಾಪಾರ ವಹಿವಾಟು ತಿಳಿದು ಅವರ ಜೀವನ ಶೈಲಿ ಅರಿತಿದ್ದು ವಿಶೇಷ . ನಂತರ ಹೋಗಿದ್ದು ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಬಾದ್ ಗೆ,  ಅಲ್ಲಿಯ ಮೆಲೋಡಿ ಮಾರುಕಟ್ಟೆ, ಲೋಕಲ್ ಸ್ಟ್ರೀಟ್ ಫುಡ್, ಅಲ್ಲಿನ ಉಡುಪುಗಳ ಅಂಗಡಿ ಹಾಗೆ ಅಲ್ಲಿನ ಪ್ರಸಿದ್ಧವಾದ ಹಿಲ್ ಸ್ಟೇಷನ್ ಆದ daman- e - koh ಗೆ ಮಳೆಯಲ್ಲಿ ಛತ್ರಿ ಹಿಡಿದು ಭೇಟಿ ನೀಡಿ ಅಲ್ಲಿ ಬಂದ ಲೋಕಲ್ ಜನರ ಜೊತೆ ಮಾತಾಡಿ ಅವರ ಅಭಿಪ್ರಾಯ ಅರಿತಿದ್ದು ಚೆನ್ನಾಗಿ ಇತ್ತು. 

ಅಲ್ಲಿನವರು ನಮ್ಮ ಪ್ರಧಾನ ಮಂತ್ರಿ ಮೋದಿ ಅವರ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದು ಉಂಟು.  ಇಸ್ಲಾಮಬಾದ್ ನ ಹಣ್ಣು ತರಕಾರಿಗಳ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ದರಗಳನ್ನು ಅರಿತಿದ್ದು, ಲಾಹೋರ್ ನ ಐತಿಹಾಸಿಕ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಅಲ್ಲಿನ ರುಚಿಯಾದ ಲೋಕಲ್ ಚಿಕನ್ ಬಿರಿಯಾನಿಯನ್ನು ಸೇವಿಸಿದ್ದು ಅದ್ಭುತವಾಗಿತ್ತು.  ಒಟ್ಟು 7 ದಿನಗಳ ಪ್ರವಾಸ, ಯಾವುದೇ ರೀತಿ ಅಹಿತಕರ ಘಟನೆ ಜರುಗದೆ ಮುಕ್ತ ಮನಸ್ಸಿನಿಂದ ಪಾಕಿಸ್ತಾನ್ ದೇಶವನ್ನ ಸುತ್ತಾಡಿದ್ದು ಸದಾ ಮನಸಿನಲ್ಲಿ ಹಾಗು ಗ್ಲೋಬಲ್ ಕನ್ನಡಿಗನ ವಿಡಿಯೋಗಲ್ಲಿ ಸದಾ ನೆನಪಿನಲ್ಲಿ ಉಳಿಯುವುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಗ್ಲೋಬಲ್` ಲೆವೆಲ್ನಲ್ಲಿ ಕನ್ನಡಿಗ ಮಹಾಬಲ ರಾಮ್ ಹವಾ..ಪಾಕಿಸ್ತಾನ ಪ್ರವಾಸದ ಮಾಡಿದ ಮೊದಲ ಯೂಟ್ಯೂಬರ್ - Chitratara.com
Copyright 2009 chitratara.com Reproduction is forbidden unless authorized. All rights reserved.