ಡಾ. ರಾಜ್ ಕುಮಾರದ ಹಿರಿಯ ಪುತ್ರಿ ಲಕ್ಣ್ಮಿ ಗೋವಿಂದ ರಾಜ್ ಅವರ ಪುತ್ರ ಷಣ್ಮುಖ ಚೊಚ್ಚಲ ಬಾರಿ ನಟಿಸಿರುವ " ನಿಂಬಿಯಾ ಬನಾದ ಮೇಲೆ ಚಿತ್ರ ತೆರೆಗೆ ಬಂದಿದೆ.
ಚಿತ್ರ ವೀಕ್ಷಣೆ ಮಾಡಿದ ಹಿರಿಯ ನಟ ಶಿವರಾಜ್ ಕುಮಾರ್ ಮಾವನಾಗಿ ಬಂದಿಲ್ಲ : ಪ್ರೇಕ್ಷಕನಾಗಿ ಹೇಳ್ತಾ ಇದ್ದೀ ಎಂದು ಬಾಮೈದನ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಚಿತ್ರವನ್ನು ಯಾವುದೇ ಆಡಂಬರ ಇಲ್ಲದೆ ಸರಳವಾಗಿ ಮತ್ತು ಎಲ್ಲರಿಗೂ ಇಷ್ಟವಾಗುವ ರೀತಿ ಚಿತ್ರವನ್ನು ತೆರೆಗೆ ಕಟ್ಟಿಕೊಡಲಾಗಿದೆ. ಡಾ ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಬರುತ್ತಿದ್ದಾರೆ ಎನ್ನುವಗ ಆಡಂಬರ ಅಬ್ಬರ ಇಲ್ಲಬದಲಾಗಿ ನೈಜತೆಗೆ ಒತ್ತು ನೀಡಲಾಗಿದೆ ಎಂದು ಶಿವಣ್ಣ ತಿಳಿಸಿದ್ದಾರೆ
ಚಿತ್ರದಲ್ಲಿ ಹಾಡು ಪೈಟ್ ಸೇರಿದಂತೆ ಎಲ್ಲ ಅಂಶಗಳನ್ನು ಇಡಬಹುದಿತ್ತು ನಿರ್ದೇಶಕರು ಚಿತ್ರದಕ್ಕೆ ಕಥೆಗೆ ಎಷ್ಟು ಬೇಕೋ ಅಷ್ಟನ್ನು ಅಚ್ಚುಕಟ್ಟಾಗಿ ತೆರೆಗೆ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಜನರಿಗೂ ಕೂಡ ಇಷ್ಟವಾಗಲಿದೆ, ನಟ ಷಣ್ಮುಖ ಸೇರಿದಂತೆ ಎಲ್ಲಾ ಕಲಾವಿದರು ಉತ್ತಮವಾಗಿ ನಟಿಸಿದ್ದಾರೆ, ಚಿತ್ರ ಜನರಿಗು ಇಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಲಾತ್ಮಕ ಚಿತ್ರಕ್ಕೆ ಬಜೆಟ್ ಮುಖ್ಯ, ಅದರ ಚೌಕಟ್ಟು ಒಳಗೆ ಸಿನಿಮಾವನ್ನು ಜನರಿಗೆ ಇಷ್ಟವಾಗುವ ರೀತಿ ಕಟ್ಟಿಕೊಡಲಾಗಿದೆ. ಚಿತ್ರವನ್ನು ನೋಡಿದ್ದೇನೆ. ಚೆನ್ನಾಗಿ ಬಂದಿದೆ. ಮಾವನಾಗಿ ಹೇಳುತ್ತಿಲ್ಲ.ಬದಲಾಗಿ ಪ್ರೇಪಕಕನಾಗಿ ಸಿನಿಮಾ ಕಷ್ಟವಾಯಿತು ಎಂದರು