ಗಾಂಧಿನಗರದಲ್ಲಿ ಹೊಸಬರ, ಹೊಸತನದ ಚಿತ್ರಗಳು ಬರ್ತಾನೇ ಇರುತ್ತವೆ. ಅದರಲ್ಲಿ ವಿಭಿನ್ನ ಕಥೆಯೊನ್ನುತ್ರು ಬರುವವರು ಗಮನ ಸೆಳೆಯುತ್ತಾರೆ. ಇದೀಗ ಅಂಥದ್ದೇ ಒಂದು ಸಿನಿಮಾ ಗಮನ ಸೆಳೆಯುತ್ತಿದ್ದು, ಅದೇ ರಕ್ಷಾ ಚಾಲಕ. ಚಿರಂತ್ ಎಂಬ ಯುವ ನಟ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿದ್ದಾರೆ. ಹಾಡುಗಳಲ್ಲಿ, ಟೀಸರ್ ನಲ್ಲಿ ನೋಡಿದಾಗ ಚಿರಂತ್ ಹೊಸ ಹೀರೋ ಎನಿಸುವುದೇ ಇಲ್ಲ. ಪಕ್ಕ ತರಬೇತಿ ತೆಗೆದುಕೊಂಡೇ ಬಂದಿದ್ದರೆ ಎನಿಸಿತು.
ಈ ಸಿನಿಮಾದ ಬಗ್ಗೆ ಮಾತನಾಡಿದ ಚಿರಂತ್, ನಾನು ತುಂಬಾ ಲಕ್ಕಿ ಹೀರೋ ಆಗಿ ಅವಕಾಶ ಸಿಕ್ಕಿದ್ದು. ಲಾಕ್ಡೌನ್ ಎಲ್ಲಾ ಆದಾಗ ಆಟೋ ಡ್ರೈವರ್ ಕಷ್ಟಗಳನ್ನ ನೋಡಿದ್ದರು ಆಯುಷ್ ಅವರು. ಅದೇ ಕಥೆಯನ್ನು ಈಗ ಕೇಳಿ ಖುಷಿ ಆಯ್ತು. ನಮ್ಮ ತಂದೆಯವರೇ ಡ್ಯಾನ್ಸರ್. ಅವರನ್ನೇ ನೋಡಿ ಕಲಿತಿರುವುದು. ಇದೊಂದು ಕಂಪ್ಲೀಟ್ ಆಟೋ ಡ್ರೈವರ್ ಗಿರುವ ಕಷ್ಟವನ್ನು ಸಿನಿಮಾದಲ್ಲಿ ತೋರಿಸಲಾಗಿದೆ ಎಂದಿದ್ದಾರೆ.
ನಿರ್ದೇಶಕ ಆಯುಷ್ ಶಶಿಕುಮಾರ್ ಮಾತನಾಡಿ, ಚಿಕ್ಕ ವಯಸ್ಸಿನಿಂದ ತಂದೆಯವರು ಶೂಟಿಂಗ್ ಹೋದಾಗ ನನ್ನನ್ನು ಕರೆದುಕೊಂಡು ಹೋಗ್ತಾ ಇದ್ರು. ಡಿಫರೆಂಟ್ ಡ್ಯಾನಿ ಅಂಕಲ್ ಕುಇಡ ಬರ್ತಾ ಇದ್ರು. ಎಷ್ಟೋ ಸಲ ಸ್ಕೂಲ್ ಗಳಿಗೆ ರಜೆ ಹಾಕಿದ್ದು ಇದೆ ಶೂಟಿಂಗ್ ಹೋಗೋದಕ್ಕೆ. ಹಾಗೇ ಸಿನಿಮಾದ ಮೇಲಿನ ಆಸಕ್ಯಿ ಬಂತು. ಈ ಸಿನಿಮಾವನ್ನು ಮಾಡುವಾಗಲೂ ಎಲ್ಲಾ ಪಾತ್ರಗಳಿಗೂ ಆಡಿಷನ್ ಮಾಡಿ ಆಯ್ಕೆ ಮಾಡಿಕೊಂಡಿದ್ದೇವೆ. ಸಿನಿಮಾದಲ್ಲಿ ಐದು ಸಾಂಗ್ಸ್ ಇದೆ. ಸಿನಿಮಾ ಸೆನ್ಸಾರ್ ಆಗಿದೆ. ಶೀಘ್ರದಲ್ಲಿಯೇ ರಿಲೀಸ್ ಮಾಡ್ತೇವೆ ಎಂದಿದ್ದಾರೆ.
ನೃತ್ಯಗಾರರಾಗಿರುವ, ಕಥೆ, ಸಾಹಿತ್ಯ ಬರೆದಿರುವ ಶಶಿ ಆರಕ್ಷಕ್ ಅವರು ಮಾತನಾಡುತ್ತಾ, ನಿರ್ದೇಶನ ಮಾಡಿರುವ ಆಯುಷ್ ನನ್ನ ದೊಡ್ಡ ಮಗ, ಚಿರಂತ್ ನನ್ನ ಚಿಕ್ಕ ಮಗ, ನಿರ್ಮಾಣ ಮಾಡಿರೋದು ನನ್ನ ಹೆಂಡತಿ. ಹೊಸಬರಿಗೆ ಈಗ ಯಾರೂ ಸಿನಿಮಾ ಮಾಡುವುದಕ್ಕೆ ಬರಲ್ಲ. ಹೀಗಾಗಿ ನಾವೇ ಸೇರಿ ಮಾಡಿದ್ದೀವಿ. ನಮ್ಮಮಕ್ಕಳಿಗೆ ಮೊದಲಿನಿಂದಾನೂ ಸಿನಿಮಾದ ಮೇಲೆ ಆಸಕ್ತಿ ಇತ್ತು. ಅದಕ್ಕೆ ಆಕ್ಟಿಂಗ್ ಕ್ಲಾಸ್ ಸೇರಿಸಿ, ಒಂದಷ್ಟು ಕಲಿಸಿದ್ದೀವಿ. ನಾನು ನೃತ್ಯಪಟುವಾಗಿದ್ದರಿಂದ ಸಿನಿಮಾ ಇಂಡಸ್ಟ್ರಿ ಬಗ್ಗೆ ಚೆನ್ನಾಗಿ ಗೊತ್ತು ಎಂದಿದ್ದಾರೆ.
ಸಿನಿಮಾದ ನಿರ್ಮಾಪಕಿ ಶರಾವತಿ ಮಾತನಾಡಿ, ತಕ್ಷಣ ಒಪ್ಪಿಕೊಳ್ಳಲಿಲ್ಲ. ಕಥೆ ಇಷ್ಟ ಆಯ್ತು ಹೀಗಾಗಿ ಒಪ್ಪಿಕೊಂಡೆ. ಇಬ್ಬರು ಮಕ್ಕಳೆ. ಮಕ್ಕಳ ಕನಸು ಒಂದು ಕಡೆಯಾದರೆ ಸಿನಿಮಾದ ಕಥೆಯೇ ಇಂಟ್ರೆಸ್ಟಿಂಗ್ ಆಗಿದೆ ಎಂದಿದ್ದಾರೆ.
ಮೈಸೂರು, ವರುಣಾ, ಸಾಲಿಗ್ರಾಮ, ಮುರುಡೇಶ್ವರ, ಹೊನ್ನಾವರ ಸೇರಿದಂತೆ ಸುತ್ತಮುತ್ತ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಸಂಗೀತ - ವೇದಾಂತ್ ಅತಿಶಯ್ ಜೈನ್, ಸಂಕಲನ - ವಂಶಿ, ಛಾಯಾಗ್ರಹಣ - ಆನಂದ್ ನಿರ್ವಹಿಸಿದ್ದಾರೆ.