ಸಮರ್ಜಿತ್ ಲಂಕೇಶ್ ಅಭಿನಯದ ``ಗೌರಿ``ಚಿತ್ರ ಅಮೇಜಾನ್ ಪ್ರೈಮ್ ನಲ್ಲೂ ಅಧಿಕ ವೀಕ್ಷಣೆ
Posted date: 09 Wed, Apr 2025 05:50:23 PM

ಇಂದ್ರಜಿತ್ ಲಂಕೇಶ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ "ಗೌರಿ" ಚಿತ್ರ ಕಳೆದವರ್ಷ ತೆರೆ ಕಂಡು ಜನಪ್ರಿಯವಾಗಿತ್ತು ಹಾಗೂ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಯುವಜನತೆಯಂತೂ ಸಮರ್ಜಿತ್ ಅಭಿನಯಕ್ಕೆ ಫಿದಾ ಆಗಿದ್ದರು. ಆನಂತರ ಈ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಅಲ್ಲೂ ಸಹ ಈ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ.. ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯದಾಗಿನಿಂದ ಹಿಡಿದು ಈವರೆಗೂ ಎರಡುವರೆ ಲಕ್ಷ ಗಂಟೆಗಳ ಕಾಲ ಈ ಚಿತ್ರ ವೀಕ್ಷಣೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ಜನರು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಸಮರ್ಜಿತ್ ಲಂಕೇಶ್ ಅವರಿಗೆ ಕನ್ನಡ ಸೇರಿದಂತೆ ಅನೇಕ ಭಾಷೆಗಳಿಂದ ನಟಿಸಲು ಅವಕಾಶಗಳು ಬರುತ್ತಿದೆ. ನಾಯಕನಾಗಲೂ ಸಮರ್ಜಿತ್ ಪಟ್ಟ ಶ್ರಮಕ್ಕೆ ಪ್ರತಿಫಲ ದೊರಕುತ್ತಿದೆ.
Kannada Movie/Cinema News - ಸಮರ್ಜಿತ್ ಲಂಕೇಶ್ ಅಭಿನಯದ ``ಗೌರಿ``ಚಿತ್ರ ಅಮೇಜಾನ್ ಪ್ರೈಮ್ ನಲ್ಲೂ ಅಧಿಕ ವೀಕ್ಷಣೆ - Chitratara.com
Copyright 2009 chitratara.com Reproduction is forbidden unless authorized. All rights reserved.