ಚಿತ್ರ: ವಿದ್ಯಾಪತಿ
ನಿರ್ದೇಶನ : ಇಶಾಮ್, ಹಸೀನ್
ನಿರ್ಮಾಣ: ಡಾಲಿ ಪಿಕ್ಚರ್ಸ್
ತಾರಾಗಣ: ನಾಗಭೂಷಣ್, ಮಲೈಕಾ ವಸುಪಾಲ್, ಗರುಡ ರಾಮ್, ಧನಂಜಯ, ರಂಗಾಯಣ ರಘು, ಧರ್ಮಣ್ಣ ಕಡೂರು, ಗಿರಿ ಜೆಟ್ಟಿ, ಶ್ರೀವತ್ಸ, ಬಿಂಧು, ಪ್ರತೀಕ್ಷಾ ಮತ್ತಿತರರು
ರೇಟಿಂಗ್ : * 3.5/5
ಮನರಂಜನೆಯನ್ನೇ ಮುಖ್ಯವಾಗಿರಿಸಿಕೊಂಡು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯಾವುದೇ ಮಜುಗರವಿಲ್ಲದೆ ನೋಡಬಹುದಾದ ಚಿತ್ರ ವಿದ್ಯಾಪತಿ.ಹಾಸ್ಯದ ರಸದೌತಣದ ಚಿತ್ರವನ್ನು ಇಶಾಮ್, ಹಸೀನ್ ತಂಡ ಕಟ್ಟಿಕೊಟ್ಟಿದೆ.
ಸ್ಟಾರ್ ನಟಿ ವಿದ್ಯಾ (ಮಲೈಕಾ ಮಸುಪಾಲ್). ಹಮ್ಮು ಬಿಮ್ಮಿಲ್ಲದ ಸದಾ ಸೀದಾ ಹುಡುಗಿ, ದುಡಿದು ತಿನ್ನುವ ಬದಲು ಯಾವಾರಿಸಿ ತಿನ್ನುವ ಕಲೆ ಕರಗತ ಮಾಡಿಕೊಂಡ ಪತಿ ಸಿದ್ದು (ನಾಗಭೂಷಣ). ಗ್ಯಾಂಗ್ ಕಟ್ಟಿಕೊಂಡು ಹೆದರಿಸಿ ಬೆದರಿಸುವ ಜಗ್ಗು (ಗರುಡ ರಾಮ್), ಸ್ವಾಭಿಮಾನದಿಂದ ಜೀವನ ಕಟ್ಟಿಕೊಂಡ ಸಿದ್ದು ಪೋಷಕರು, ಈ ಮದ್ಯೆ ಆನಕೊಂಡ (ಧನಂಜಯ) ಪ್ರವೇಶ. ಹೀಗೆ ಒಂದಷ್ಟು ವಿಷಯಗಳ ಹದವರಿತ ಕಥೆ. ಅದಕ್ಕೊಪ್ಪುವ ಚಿತ್ರಕಥೆ, ಯಾವುದೂ ಅತಿಯಾಗಿಸಿದೆ ಎಲ್ಲವೂ ಇತ ಮಿತವಾದ ಸೀದಾ ಸಾದ ನಗುವಿನ ಅಲೆ ಎಬ್ಬಿಸುವ ಚಿತ್ರ ವಿದ್ಯಾಪತಿ.
ವಿದ್ಯಾ ಮಾಡಿರುವುದೇ ಆರೇ ಚಿತ್ರ. ಅದರಲ್ಲಿ ಮೂರು ಹಿಟ್. ಇನ್ಮೂರು ಸೂಪರ್ ಡೂಪರ್ ಹಿಟ್, ಆಕೆಯ ಕಾಲ್ ಶೀಟ್ ಪಡೆಯಲು ನಿರ್ಮಾಪಕರ ದಂಡು ತಾ ಮುಂದು ತಾಮುಂದು ಎಂದು ಮುಗಿಬಿದ್ದವರು, ಈ ನಡುವೆ ಸಿದ್ದು ನಟಿಯನ್ನು ಒಲೈಸಿಕೊಳ್ಳಲು ಮಾಡದ ತಂತ್ರಗಳಿಲ್ಲ, ಆಕೆಯ ಅಮಾಯಕತೆ ಬಂಡವಾಳ ಮಾಡಿಕೊಂಡು ಬಿಟ್ಟಿಗೆ ಹಾಕಿಕೊಂಡ ಚಾಣಾಕ್ಷ. ಪತ್ನಿಗೆ ಪತಿ ಕಮ್ ಮ್ಯಾನೇಜರ್ ಆದವ, ಆತನ ಒಪ್ಪಿಗೆ ಇಲ್ಲದೆ ಏನೂ ನಡೆಯದು. ಅದಕ್ಕಾಗಿ ದರ ನಿಗಧಿ, ಪತ್ನಿ ಮುಂದೆ ಅಮಾಯಕನ ರೀತಿ ನಡೆದುಕೊಳ್ಳುವ ಸಿದ್ದು ಬಾರಿ ಶೋಕಿವಾಲ. ಚಿನ್ನದ ಹಲ್ಲು ಹಾಕಿಸಿಕೊಂಡವ.
ಇಂತ ಶೋಕಿವಾಲನ ಜೀವನದಲ್ಲಿ ಎದುರಾದ ಘಟನೆಗಳು ಕೆಟ್ಟು ಪಟ್ಟಣ ಸೇರು ಎನ್ನುವ ಗಾದೆ, "ಉಳಿವಿಗಾಗಿ ಊರು ಸೇರು" ಎನ್ನುವ ಪರಿಸ್ಥಿತಿ ಸಿದ್ದುನದು. ಆಡಂಬರದಲ್ಲಿ ಅಪ್ಪ, ಅಮ್ಮ, ಸ್ನೇಹಿತನ್ನು ನಿರ್ಲಕ್ಷಿಸಿದವ. ಮರಳಿ ಊರಿಗೆ ಬಂದಾಗ ಆತನ ಸ್ಥಿತಿ ಏನಾಗಿರುತ್ತದೆ. ಯಾಕೆ ಆತ ಪತ್ನಿ ಬಿಟ್ಟು ಬಂದ, ಅಲ್ಲಿ ನಡೆದ ಘಟನೆಯಾದರೂ ಏನು, ಈ ನಡುವೆ ಜಗ್ಗು, ಆನಕೊಂಡ ಪ್ರವೇಶ ಯಾಕಾಯಿತು ಎನ್ನುವುದನ್ನು ಹಾಸ್ಯದ ಮೂಲಕ ಕುತೂಹಲ ಕಟ್ಟಿಕೊಡಲಾಗಿದೆ.
ಚಿತ್ರದ ಮೊದಲರ್ದ ಸಿದ್ದು ಕಿತಾಪತಿ, ತರಲೆ ತುಂಟಾಟ,ಯಾವಾರಿಸುವ ಕಲೆ, ವಿಲನ್ ಜೊತೆ ಮುಖಾಮುಖಿ ನಗುವಿಲ ಅಲೆ ಮೂಡಿಸಿದೆ. ಇನ್ನರ್ಧ, ಗಂಭೀರತೆ, ಸೋಲು, ಅವಮಾನಕ್ಕೆ ಉತ್ತರದ ಸುತ್ತ ಚಿತ್ರ ಸಾಗಿದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ನಿರ್ದೇಶಕ ಇಶಾಮ್ ಮತ್ತು ಹಸೀನ್ ಜೋಡಿ ಸರಳವಾದ ಕಥೆ ಮುಂದಿಟ್ಟುಕೊಂಡು ಪ್ರೇಕ್ಷಕರನ್ನು ನಗಿಸುವ ಕೆಲಸ ಮಾಡಿದ್ದಾರೆ. ತಮ್ಮ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ. ಸಣ್ಣ ವಿಷಯಗಳೂ ನಗುವಿಗೆ ಕಾರಣವಾಗಿದೆ.
ನಟ ನಾಗಭೂಷಣ, ತಮ್ಮ ಹಾವ- ಭಾವದಲ್ಲಿ ಮರಳು ಮಾಡಿದ್ದಾರೆ. ಯಾವುದೇ ಅಬ್ಬರ ಆಡಂಬರ, ಬಿಲ್ಡಪ್ ಇಲ್ಲದೆ ಕಥೆಗೆ ಎಷ್ಟು ಬೇಕೋ ಅಷ್ಟು ಮಾಡಿದ್ದಾರೆ, ಅದರಲ್ಲಿಯೂ ಖಳ ನಟ ಗರುಡ ರಾಮ್ ಮುಂದೆ ನಿಂತಾಗ ಇವನನ್ನು ಎದುರುಸತ್ತಾನಾ ಎನ್ನುವುದೇ ಎಂದು ಕುತೂಹಲ, ಇಡೀ ಚಿತ್ರ ಆವರಸಿಕೊಂಡಿದ್ದಾರೆ.
ನಟಿ ಮಲೈಕಾ ವಸುಪಾಲ್, ಹಾಡು, ಕೆಲ ಸನ್ನಿವೇಶಗಳಲ್ಲಿ ಕಾಣಿಸಿಕೊಂಡರೂ ಚಿತ್ರಕ್ಕೆ ಪೂರಕವಾಗಿದೆ. ಗರುಡರಾಮ್, ಧನಂಜಯ, ರಂಗಾಯಣ ರಘು, ಗಿರಿ ಜೆಟ್ಟಿ ಬಿಂಧು, ಧರ್ಮಣ್ಣ ಕಡೂರು, ಶ್ರೀವತ್ಸ ರಂಗಾಯಣ ರಘು, ಪ್ರತೀಕ್ಷಾ ಸೇರಿದಂತೆ ಹಲವು ಕಲಾವಿದರಿದ್ದಾರೆ