Chief Editor
Manohar. R (Manu)
Photo Journalist
chitrataramanu@gmail.com
+91 9845549026
ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗಾಗಿ ಒಂದಾದ ಬ್ಲಿಂಕ್ ಮತ್ತು ಶಾಖಹಾರಿ ನಿರ್ಮಪಕರು
Posted date: 19 Sat, Apr 2025 09:54:34 AM
ಸ್ಯಾಂಡಲ್ ವುಡ್ ನಲ್ಲಿಸದ್ಯ ಯಾವ ಸಿನಿಮಾಗಳು   ಸಕ್ಸಸ್ ನ ಹಾದಿ ಕಂಡಿಲ್ಲ. ಸಪ್ಪೆಯಾಗಿರುವ ಚಂದನವನದಿಂದ ಈಗ ಭರ್ಜರಿ ಸುದ್ದಿ ಹೊರಬಂದಿದೆ. 2024ರಲ್ಲಿ ರಿಲೀಸ್ ಆಗಿದ್ದ ಸೂಪರ್ ಸಕ್ಸಸ್ ಸಿನಿಮಾಗಳಾದ ಬ್ಲಿಂಕ್ ಮತ್ತು ಶಾಖಹಾರಿ ಸಿನಿಮಾದ ನಿರ್ಮಾಪಕರು ಒಟ್ಟಿಗೆ ಸೇರಿ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ.
 
ದಿಗಂತ್ ನಟನೆಯ ಸಮರ್ಥ್ ಕಡ್ಕೊಳ್  ಚೊಚ್ಚಲ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನು  ಹೊತ್ತುಕೊಂಡಿರುವ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಅನೇಕ ಕಾರಣಗಳಿಂದ ರಿಲೀಸ್ ಆಗದೆ ಮುಂದಕ್ಕೆ ಹೋಗುತ್ತಿತ್ತು. ಆದರೆ ಈಗ ಇಬ್ಬರೂ ಯಶಸ್ವಿ ಪ್ರೊಡ್ಯೂಸರ್ ಗಳಾದ ಬ್ಲಿಂಕ್ ಸಿನಿಮಾದ ನಿರ್ಮಾಪಕ ರವಿಚಂದ್ರನ್ ಎಜೆ ಹಾಗೂ ಶಾಖಹಾರಿ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ ಸೇರಿ ಈ ಸಿನಿಮಾವನ್ನ ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ. ಈ ಮೂಲಕ ಈಗ ಎಡಗೈ ಸಿನಿಮಾಗೆ ಮತ್ತೆ ಜೀವ ಬಂದಿದೆ. 
 
ಬ್ಲಿಂಕ್ ಸಿನಿಮಾದ ನಿರ್ಮಾಪಕರಾದ ರವಿಚಂದ್ರ ಅವರು ಎಡಗೈ ಸಿನಿಮಾಗೆ ವಿತರಕರಾಗ ಎಂಟ್ರಿ ಕೊಟ್ಟರೆ ಶಾಖಹಾರಿ ನಿರ್ಮಾಪಕರು ಕೊಪ್ರಡ್ಯೂಸರ್ ಎಂಟ್ರಿ ಕೊಟ್ಟಿದ್ದಾರೆ. ಶಾಖಹಾರಿ ಸಿನಿಮಾ ಬಳಿಕ ನಿರ್ಮಾಪಕರು ಯಾವುದೇ ಸಿನಿಮಾವನ್ನು ಕೈಗೆತ್ತಿಕೊಂಡಿರಲಿಲ್ಲ. ಆದರೆ ಈಗ ಎಡಗೈ ಸಿನಿಮಾದ ಮೇಲೆ ಕೈ ಇಟ್ಟಿದ್ದಾರೆ ಎಂದರೆ, ಈ ಸಿನಿಮಾದ ಕಂಟೆಂಟ್ ಅದ್ಭುತವಾಗಿದೆ ಎನ್ನುವುದು ಗೊತ್ತಾಗುತ್ತದೆ. ಚಿತ್ರರಂಗದ ಈಗಿನ ಪರಿಸ್ಥಿತಿಯಲ್ಲಿ  ಸಿನಿಮಾ ರಿಲೀಸ್ ಮಾಡಲು ಭಯ ಬೀಳುತ್ತಿದ್ದಾರೆ. ಆದರೆ ಇಂಥ ಸಮಯದಲ್ಲಿ ಇವರಿಬ್ಬರು ಎಡಗೈ ಸಿನಿಮಾ ರಿಲೀಸ್ ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ.. 
 
ನಿರ್ಮಾಪಕರಾದ ರಾಜೇಶ್ ಮತ್ತು ರವಿಚಂದ್ರ ಇಬ್ಬರೂ ಎಡಗೈ ಸಿನಿಮಾ ನೋಡಿ ಇಷ್ಟಪಟ್ಟು ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ. 
 
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಖಹಾರಿ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ,  ಶಾಖಹಾರಿ ಸಿನಿಮಾ ಬಳಿಕ ಚಿತ್ರೀಕರಣ ಆಗಿರುವ ಅಥವಾ ರಿಲೀಸ್ ಗೆ ರೆಡಿ ಇರುವ ಸಿನಿಮಾಗೆ ಕೋ ಪ್ರೊಡ್ಯೂಸರ್ ಆಗಲು ತಯಾರಿರಲಿಲ್ಲ. ಆದರೆ ಎಡಗೈ ಸಿನಿಮಾದ ಕಂಟೆಂಟ್ ಕ್ವಾಲಿಟಿ ಅದ್ಭುತವಾಗಿದೆ ಹಾಗೂ ಈ ಸಿನಿಮಾದಿಂದ ನನ್ನ ಪ್ರೊಡಕ್ಷನ್ ವ್ಯಾಲ್ಯೂ ಕೂಡ ಜಾಸ್ತಿ ಆಗುತ್ತೆ ಹಾಗಾಗಿ ಈ ಸಿನಿಮಾ ರಿಲೀಸ್ ಮಾಡಲು ಕೈಜೋಡಿಸಿದ್ದೇನೆ. ಶಾಖಹಾರಿ ಮತ್ತು ಬ್ಲಿಂಕ್ ಸಿನಿಮಾ ಮಾಡುವಾಗ ನಾವಿಬ್ಬರು ಹೊಸ ನಿರ್ಮಾಪಕರು ಆದರೀಗ ಇಬ್ಬರ ಅನುಭವ ಈ ಸಿನಿಮಾಗೆ ಸಹಾಯವಾಗಲಿದೆ  ಎಂದು ಹೇಳಿದರು.. ರಾಜೇಶ್ ಅವರು ನಟ ದಿಗಂತ್ ಅವರ ಅಭಿಮಾನಿ ಕೂಡ ಹೌದು.
 
ನಿರ್ದೇಶಕ ಸಮರ್ಥ್ ಈ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇಬ್ಬರೂ ಸ್ಟ್ರಾಂಗ್ ನಿರ್ಮಾಪಕರ ಸೇರ್ಪಡೆಯಿಂದ ತಂಡಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ,  ಎರಡು ಸೂಪರ್ ಸಕ್ಸಸ್ ಸಿನಿಮಾಗಳನ್ನು ನೀಡಿದ ನಿರ್ಮಾಪಕರು ನನ್ನ ಸಿನಿಮಾಗೆ  ಕೊಲಾಬರೇಶನ್ ಆಗಿರುವುದು ತುಂಬಾ ಖುಷಿಯಾಗಿದೆ. ಈಗಲೂ ಬ್ಲಿಂಕ್ ಮತ್ತು ಶಾಖಹಾರಿ  ಸಿನಿಮಾದ ಬಗ್ಗೆ ಜನ ಮಾತಾಡ್ತಾ ಇದ್ದಾರೆ. ಅವರು ಈಗ ಎಡಗೈ ಸಿನಿಮಾ ರಿಲೀಸ್ ಗೆ ಕೈಜೋಡಿಸಿರುವುದು ಖುಷಿಯಾಗಿದೆ  ಎನ್ನುತ್ತಾರೆ. 

ರವಿಚಂದ್ರ ಎಜೆ ಮಾತನಾಡಿ,  ಕಳೆದ ಆರು ತಿಂಗಳುಗಳಲ್ಲಿ ನನಗೆ ಅನೇಕ ಕನ್ನಡ ಚಲನಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿದೆ. ಅವಗಳಲ್ಲಿ EAK ನಿಜವಾಗಿಯೂ  ಅತ್ಯುತ್ತಮವಾದ ಚಿತ್ರವಾಗಿದೆ. ನಮ್ಮ ಬ್ಯಾನರ್ ಜನನಿ ಪಿಕ್ಚರ್ಸ್ ಅಡಿಯಲ್ಲಿ, BTS, ನೋಡಿದವರು ಏನಂತರೆ, ಅನಮಧೇಯ ಅಶೋಕ್ ಕುಮಾರ್ ಮತ್ತು ಭಾವ ತೀರ ಯಾನ ಸೇರಿದಂತೆ ಹಲವಾರು ಮೆಚ್ಚುಗೆ ಪಡೆದ 
 ಚಲನಚಿತ್ರಗಳನ್ನು ಹೆಮ್ಮೆಯಿಂದ ವಿತರಿಸಿದ್ದೇವೆ  EAK ಸಿನಿಮಾ ವಿತರಣೆ ಮಾಡುತ್ತಿದ್ದೇನೆ ಇದು  2025 ರ ಸಕ್ಸಸ್ ಫುಲ್ ಸಿನಿಮಾ ಆಗಲಿದೆ  ಎಂದರು.

ಎಡಗೈ ಈಗಾಗಲೇ ಪೋಸ್ಟರ್ ಮತ್ತು ಟೀಸರ್ಗಳ ಮೂಲಕ ಕುತೂಹಲವನ್ನು ಹೆಚ್ಚಿಸಿದೆ. ಯಾವಾಗಲು ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ದಿಗಂತ್ ಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ಕಾಣಿಸಿಕೊಂಡಿದ್ದಾರೆ. ಮರುಜೀವ ಪಡೆದುಕೊಂಡಿರುವ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗಾಗಿ ಒಂದಾದ ಬ್ಲಿಂಕ್ ಮತ್ತು ಶಾಖಹಾರಿ ನಿರ್ಮಪಕರು - Chitratara.com
Copyright 2009 chitratara.com Reproduction is forbidden unless authorized. All rights reserved.