Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪಪ್ಪಿಗೆ ಧ್ರುವ ಸರ್ಜಾ ಸಾಥ್ - ಮೇ 1ಕ್ಕೆ ಉತ್ತರ ಕರ್ನಾಟಕದ ಜವಾರಿ ಭಾಷೆಯ ಪಪ್ಪಿ ಸಿನಿಮಾ ಬಿಡುಗಡೆ
Posted date: 25 Fri, Apr 2025 06:23:21 PM
ಕನ್ನಡ ಚಿತ್ರರಂಗದಲ್ಲಿ ಹೊಸಬರು ಹೊಸ ಪ್ರಯೋಗಳನ್ನು ಮಾಡುತ್ತಲೇ ಇರುತ್ತಾರೆ. ಆ ಪ್ರಯೋಗಳು ಸಕ್ಸಸ್‌ ಆಗಲಿ ಬಿಡಲಿ ತಮ್ಮ ಪ್ರಯತ್ನಗಳನ್ನು ಯಾವತ್ತೂ ಕೈ ಬಿಡೋದಿಲ್ಲ. ಈಗ ಹೊಸಬರೇ ಸೇರಿಕೊಂಡು ಉತ್ತರ ಕರ್ನಾಟದ ಜವಾರಿ ಭಾಷೆಯಲ್ಲೊಂದು ಪಪ್ಪಿ ಎಂಬ ಸಿನಿಮಾ ಮಾಡಿದ್ದು, ಈ ಟ್ರೇಲರ್‌ ಈಗಾಗಲೇ ದಾಖಲೆ ಬರೆದಿದೆ. ಟ್ರೇಲರ್‌ ನೋಡಿದವವರೆಲ್ಲರೂ ಹೊಟ್ಟೆ ತುಂಬ ನಕ್ಕು ನಲಿಯುವುದರ ಜೊತೆಗೆ ಭಾವುಕರಾಗಿದ್ದಾರೆ. ಒಂದೊಳ್ಳೆ ಕಥೆ ಹೇಳೋದಿಕ್ಕೆ ಹೊರಟಿರುವ ಯುವ ಪ್ರತಿಭೆಗಳಿಗೆ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಸಾಥ್‌ ಕೊಟ್ಟಿದ್ದಾರೆ.
 
ಈ ಹಿಂದೆ ಫಸ್ಟ್‌ ಲವ್‌ ಸಿನಿಮಾ ಮಾಡಿದ್ದ ಆಯುಷ್‌ ಮಲ್ಲಿ ಸಾರಥ್ಯದಲ್ಲಿ ಮೂಡಿಬಂದಿರುವ ಚಿತ್ರವೇ ಪಪ್ಪಿ. ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ಪಪ್ಪಿ ಸಿನಿಮಾವನ್ನು  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅರ್ಪಿಸುತ್ತಿದ್ದು, ಮೇ 1ಕ್ಕೆ ಈ ಚಿತ್ರ ತೆರೆಗೆ ಬರ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರ ನಡೆಸುತ್ತಿದೆ. ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಪಪ್ಪಿ ಪ್ರತಿಕಾಗೋಷ್ಠಿ ಹಮ್ಮಿಕೊಳ್ಳಲಾಗತ್ತು. ಧ್ರುವ ಸರ್ಜಾ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. 
 
ಈ ವೇಳೆ ಮಾತನಾಡಿದ ಧ್ರುವ ಸರ್ಜಾ, ಪಪ್ಪಿ ಸಿನಿಮಾವನ್ನು ನಾನು ನೋಡಿದ್ದೇನೆ. ಜಗದೀಶ್‌ ಹಾಗೂ ಆದಿತ್ಯ ಅವರು ತುಂಬಾ ಓಳ್ಳೆ ಆಕ್ಟರ್.‌ ರೇಣುಕಾ ಮೇಡಂ, ದುರ್ಗಪ್ಪ ಎಲ್ಲರೂ ರಿಯಲಿಸ್ಟಿಕ್‌ ಆಗಿ ನಟಿಸಿದ್ದಾರೆ. ಇವರೆಲ್ಲರೂ ಇಷ್ಟು ಚೆನ್ನಾಗಿ ನಟಿಸಿದ್ದಾರೆ ಎಂದರೆ ಕಾರಣಕರ್ತೃ ನಿರ್ದೇಶಕರು. ತಿಥಿ ಸಿನಿಮಾ ನೋಡಿ ಆಮೇಲೆ ಇದ್ದ ವೈಬ್ಸ್‌ ಈ ಚಿತ್ರಕ್ಕಿದೆ. ಎಮೋಷನ್‌ ಗೆ ಎಲ್ಲರೂ ಕನೆಕ್ಟ್‌ ಆಗುತ್ತಾರೆ. ಎಲ್ಲರೂ ಈ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿ. ಎಲ್ಲಾ ಹೊಸ ಪ್ರತಿಭೆಗಳನ್ನು ಕನ್ನಡಾಭಿಮಾನಿಗಳು ಕೈಬಿಡಬೇಡಿ. ಇಡೀ ಪಪ್ಪಿ ತಂಡಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದರು.

ನಿರ್ದೇಶಕರಾದ ಆಯುಷ್‌ ಮಲ್ಲಿ,  ಪಪ್ಪಿ ಟ್ರೇಲರ್‌ ಅರ್ಗನಿಕ್‌ ಆಗಿ ರೀಚ್‌ ಆಗಿದೆ. ನಾವು ಯಾವುದೇ ರೀತಿ ಬೂಸ್ಟ್‌ ಮಾಡಿಲ್ಲ. ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಟ್ರೇಲರ್‌ ರಿಲೀಸ್‌ ಆದ ಬಳಿಕ ಧ್ರುವ ಅಣ್ಣ ಕಡೆಯಿಂದ ಕಾಲ್‌ ಬರುತ್ತದೆ. ಟ್ರೇಲರ್‌ ನೋಡಿ ನಿನಗೆ ಏನ್‌ ಸಾಥ್‌ ಬೇಕೋ ನಾನು ಕೊಡುತ್ತೇನೆ. ಈ ರೀತಿಯ ಟ್ಯಾಲೆಂಟ್‌ ಇಂಡಸ್ಟ್ರೀಗೆ ಬೇಕು. ಉತ್ತರ ಕರ್ನಾಟಕದವರು ಚಿತ್ರರಂಗಕ್ಕೆ ಬರಬೇಕು ಎಂದು ಎನರ್ಜಿ ತುಂಬಿದ್ದು ಧ್ರುವ ಅಣ್ಣ. ವಿಜಯ್‌ ರಾಜ್‌ ಕುಮಾರ್‌, ರಮ್ಯಾ ಮೇಡಂ, ರಾಣಾ ದಗ್ಗುಭಾಟಿ ಎಲ್ಲರೂ ಟ್ರೇಲರ್‌ ಮೆಚ್ಚಿಕೊಂಡಿದ್ದಾರೆ. ರಾಜ್‌ ಬಿ ಶೆಟ್ಟಿ ಅವರು ಕೂಡ ಟ್ರೇಲರ್‌ ನೋಡಿ ಇಷ್ಟಪಟ್ಟು, ಉತ್ತರ ಕರ್ನಾಟಕದವರು ಇಂಡಸ್ಟ್ರೀಗೆ ಬರಬೇಕು ಎಂದು ಹೇಳಿದ್ದಾರೆ ಎಂದರು.
 
ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ಥಳೀಯ ಕಲಾವಿರಾದ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ಅದ್ರುಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಧರ್ ಕಶ್ಯಪ್, ರವಿ ಬಿಲ್ಲೂರ್ ಚಿತ್ರಕ್ಕೆ ಸಂಗೀತ ಒದಗಿಸಿದ್ದು, ಬಿ ಸುರೇಶ್‌ ಬಾಬು ಕ್ಯಾಮೆರಾ ಹಿಡಿದಿದ್ದು, ವಿಶ್ವ ಎನ್‌ ಎಂ ಸಂಕಲನ ಪಪ್ಪಿ ಚಿತ್ರಕ್ಕಿದೆ.  ಹಾಸ್ಯದ ಜೊತೆಗೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ಪಪ್ಪಿಗೆ ಅಂದಪ್ಪ ಸಂಕನೂರು ಬಂಡವಾಳ ಹೂಡಿದ್ದಾರೆ. ಕೆಆರ್‌ ಜಿ ಪಪ್ಪಿ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ. 

ರಿಮೇಕ್‌ ರೈಟ್ಸ್‌ ಗೆ ಬೇಡಿಕೆ!
ಪಪ್ಪಿ ಟ್ರೇಲರ್‌ ಪಕ್ಕದ ಟಾಲಿವುಡ್‌ ಇಂಡಸ್ಟ್ರೀ ರಾಣಾ ದಗ್ಗುಭಾಟಿ ಅವರನ್ನು ತಲುಪಿದೆ. ಅಂದ್ರೆ ಟ್ರೇಲರ್‌ ನೋಡಿ ರಾಣಾ ಇಷ್ಟಪಟ್ಟಿದ್ದು, ಅವರ ಆಫೀಸ್‌ ಕಡೆಯಿಂದ ಕಾಲ್‌ ಬಂದಿದೆಯಂತೆ. ಪಪ್ಪಿ ಟ್ರೇಲರ್‌ ನೋಡಿ ರಾಣಾ ತೆಲುಗು ರೈಟ್ಸ್‌ ಖರೀದಿಸುವ ಬಗ್ಗೆ ಆಸಕ್ತಿ ತೋರಿದ್ದಾರೆ. ಸದ್ಯ ಈ ಬಗ್ಗೆ ಮಾತುಕಥೆ ಹಂತದಲ್ಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪಪ್ಪಿಗೆ ಧ್ರುವ ಸರ್ಜಾ ಸಾಥ್ - ಮೇ 1ಕ್ಕೆ ಉತ್ತರ ಕರ್ನಾಟಕದ ಜವಾರಿ ಭಾಷೆಯ ಪಪ್ಪಿ ಸಿನಿಮಾ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.