Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಕೆರೆಬೇಟೆ``ಅಮೆಜಾನ್ ಒಟಿಟಿಯಲ್ಲಿ ಲಭ್ಯ
Posted date: 03 Sat, May 2025 02:45:01 PM
ಸದಭಿರುಚಿಯ ಕಂಟೆಂಟುಗಳನ್ನು ಇಟ್ಟುಕೊಂಡು ನಿರ್ಮಾಣ ಮಾಡಿದ ಯಾವುದೇ ಚಿತ್ರಗಳನ್ನು ಪ್ರೇಕ್ಷಕರು ಕೈ ಬಿಡುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.ನಟನೆ ಜೊತೆಗೆ ನಿರ್ಮಾಣವನ್ನೂ ಮಾಡಿದ್ದ ಗೌರಿ ಶಂಕರ್ ಅಭಿನಯದ ಚಿತ್ರ `ಕೆರೆ ಬೇಟೆ` ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ನಿಧಾನವಾಗಿ ಚಿತ್ರಮಂದಿರಕ್ಕೆ ಜನ ಬರುತ್ತಾರೆ ಎನ್ನುವಷ್ಟರಲ್ಲಿ ಚಿತ್ರಮಂದಿರದಲ್ಲಿ ಎತ್ತಂಗಡಿಯಾಗಿತ್ತು.
 
ಈ ನಡುವೆ ಗೋವಾದಲ್ಲಿ ನಡೆದ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ವೀಕ್ಷಕರು ಮತ್ತು ದೇಶ ವಿದೇಶಗಳಿಂದ ಆಗಮಿಸಿದ್ದ ಸಿನಿಮಾ ಪ್ರೇಮಿಗಳು ಮತ್ತು ಸಿನಿಮಾ ಆಸಕ್ತರಿಂದ ಮೆಚ್ಚುಗೆ ಮಹಾಪೂರವನ್ನೇ ಗಳಿಸಿತ್ತು. 
 
ಚಿತ್ರೀತ್ಸೋವದಲ್ಲಿ ಯಾವಾಗ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತೋ ಆಗ ಖ್ಯಾತ ಸಂಸ್ಥೆಯೊಂದು ಚಿತ್ರದ ಎಲ್ಲಾ ಭಾಷೆಯ ಹಕ್ಕು ಪಡೆದಿತ್ತು, ಬಾರಿ ಮೊತ್ತಕ್ಕೆ ಆದ ಒಪ್ಪಂದ ನಟ, ನಿರ್ಮಾಪಕ ಗೌರಿಶಂಕರ್ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಒಪ್ಪಂದ ಜಾರಿ ಆಗುವುದು ಸ್ವಲ್ಪ ತಡವಾಗಿದೆ.

ಈ ನಡುವೆ ಕೆರೆಬೇಟೆ ಚಿತ್ರ ಅಮೆಜಾನ್ ಒಟಿಟಿಯಲ್ಲಿ ಲಭ್ಯವಿದ್ದು ಚಿತ್ರ ನೋಡುವ ಮನಸ್ಸು ಮಾಡಿ ಕೊನೆಗೆ ಚಿತ್ರಮಂದಿರದಲ್ಲಿ ಇಲ್ಲದೆ ಬೇಜಾರು ಮಾಡಿಕೊಂಡವರಿಗೆ ಓಟಿಟಿ ಮೂಲಕ ಚಿತ್ರ ವೀಕ್ಷಿಸುವ ಅವಕಾಶ ಮಾಡಿಕೊಡಲಾಗಿದೆ. 

ಚಿತ್ರಮಂದಿರದಲ್ಲಿ ಕೆರೆ ಬೇಟೆ ಚಿತ್ರವನ್ನು ನೋಡಲು ಆಗದ ಮಂದಿ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಲಭ್ಯವಿದ್ದು ಎಲ್ಲರೂ ಚಿತ್ರ ನೋಡಿ ಎಂದು ನಟ ನಿರ್ಮಾಪಕ ಗೌರಿಶಂಕರ್ ಮನವಿ  ಮಾಡಿದ್ದಾರೆ.

ಚಿತ್ರದಲ್ಲಿ ಗೌರಿಶಂಕರ್, ಬಿಂಧು ಶಿವರಾಮ್, ಸಂಪತ್ ಮೈತ್ರೈಯಾ, ಗೋಪಾಲ ಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ,
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಕೆರೆಬೇಟೆ``ಅಮೆಜಾನ್ ಒಟಿಟಿಯಲ್ಲಿ ಲಭ್ಯ - Chitratara.com
Copyright 2009 chitratara.com Reproduction is forbidden unless authorized. All rights reserved.