Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೆಟ್ಟೇರಿತು ಗೀತಾ ಪಿಕ್ಚರ್ಸ್ 4ನೇ ಸಿನಿಮಾ..ಧೀರೆನ್-ಅಮೃತಾ ಪ್ರೇಮ್-ಸಂದೀಪ್ ಸುಂಕದ್ ಚಿತ್ರಕ್ಕೆ `ಪಬ್ಬಾರ್` ಟೈಟಲ್ ಫಿಕ್ಸ್
Posted date: 08 Thu, May 2025 03:51:09 PM
ಗೀತಾ ಶಿವರಾಜ್ ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಸದಾಭಿರುಚಿ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದೆ‌. ಅದರ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಪಬ್ಬಾರ್. ಗೀತಾ ಪಿಕ್ಚರ್ಸ್ ನಾಲ್ಕನೇ ಕೊಡುಗೆ ಪಬ್ಬಾರ್ ಸಿನಿಮಾದ‌ ಮುಹೂರ್ತ ಇಂದು ಬೆಂಗಳೂರಿನ ವೀರಾಂಜನೇಯ ದೇಗುಲದಲ್ಲಿ ನೆರವೇರಿದೆ. ವಾಣಿಜ್ಯ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಕೆವಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು , ನೆನಪಿರಲಿ ಪ್ರೇಮ್ ಕ್ಯಾಮೆರಾಗೆ ಚಾಲನೆ ಕೊಟ್ಟರು.

ಧೀರೆನ್ ನಾಯಕನಾಗಿ ನಟಿಸುತ್ತಿರುವ ಪಬ್ಬಾರ್ ಚಿತ್ರಕ್ಕೆ ಶಾಖಾಹಾರಿ ಸಾರಥಿ ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕಿಯಾಗಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಅಭಿನಯಿಸುತ್ತಿದ್ದಾರೆ.

ಮುಹೂರ್ತದ ಶಿವಣ್ಣ ಮಾತನಾಡಿ, ಒಂದೊಳ್ಳೆ ಪ್ರಯತ್ನ. ‌ಒಳ್ಳೆ ಸಿನಿಮಾ ಬರಲಿ. ಈಗ ಎಲ್ಲರೂ ಹೇಳ್ತಾರೆ. ರಿಸ್ಕ್ ರಿಸ್ಕ್ ಎಂದು ರಿಸ್ಕ್ ಅಲ್ಲ ರಸ್ಕ್ ತೆಗೆದುಕೊಂಡು ತಿನ್ನಬೇಕು ಅಷ್ಟೇ. ಬೇರೆ ಭಾಷೆ ಜೊತೆ ಸ್ಪರ್ಧೆ ಮಾಡಬೇಕು ಎಂದರೆ ಹೊಸ ಸಿನಿಮಾ ಬರಬೇಕು. ಏನ್ ಆಗುತ್ತದೆ. ಏನ್ ಆಗೋಲ್ಲ ಎಂಬುವುದು ಆ ಮೇಲಿನ ಪ್ರಶ್ನೆ. ನಾವು ಪ್ರಯತ್ನವನ್ನೇ ಪಡದೇ ಇದ್ದರೆ ಹೇಗೆ ಅಗುತ್ತದೆ. ನಾವು ಇಂಡಸ್ಟ್ರೀಗೆ ಬಂದು‌ ನಲ್ವತ್ತು ವರ್ಷ ಆಯ್ತು. ಇನ್ನೂ ಎಷ್ಟು ವರ್ಷ ಸಿನಿಮಾ ಮಾಡುತ್ತೇವೋ ಗೊತ್ತಿಲ್ಲ. ಹೊಸ ಪೀಳಿಗೆ ಬರಬೇಕು. ಹೊಸ ರೀತಿ ಸಿನಿಮಾ ಬರಬೇಕು. ಈ ರೀತಿ ವಿಭಿನ್ನ ಸಿನಿಮಾ ಮಾಡಬೇಕು ಎಂಬುದನ್ನು ನಾವೇ ಆಸೆಪಡುತ್ತೇವೆ. ಸಂದೀಪ್ ಬಂದು ಹೇಳಿದ ಕಥೆ ಇಷ್ಟವಾಗಿದೆ. ಪಬ್ಬಾರ್ ನಾನ್ ವೆಜ್ ಕಥೆ ಎನಿಸುತ್ತದೆ. ಇದು ಒಳ್ಳೆ ಸಿನಿಮ ಆಗುವ ಕಥೆಯಾಗುತ್ತದೆ ಎಂಬ ಭರವಸೆ ಇದೆ. ಅಮ್ಮನ ಹುಟ್ಟಿದಹಬ್ಬ ದಿನ ಚಿತ್ರ ಅನೌನ್ಸ್ ಮಾಡಿದ್ದೇವೆ. ಪ್ರೇಮ್ ಮಗಳು ಆಕ್ಟ್ ಮಾಡುತ್ತಿದ್ದಾರೆ. ಪ್ರೇಮ್ ನನಗೆ ಇಷ್ಟ. ಅವರ ಜೊತೆ ಒಳ್ಳೆ ಒಟನಾಟ ಇದೆ. ಲೋಕೇಷನ್ ಚೆನ್ನಾಗಿ ಇದೆ. ಕುತೂಹಲ ಕೊಡುತ್ತದೆ ಎಂದರು.
 
ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ಪಬ್ಬಾರ್ ಕಥೆ ಧೀರೆನ್ ಮೂಲಕ ಬಂದಿದ್ದು, ಧೀರೆನ್ ಡೈರೆಕ್ಟರ್ ನ್ನು ಕರೆದುಕೊಂಡು ಬಂದರು‌. ಕಥೆ ಬಹಳ ಇಷ್ಟವಾಗಿದೆ. ಸಂದೀಪ್ ನಮ್ಮ ಬ್ಯಾನರ್ ನಡಿ ಕೆಲಸ ಮಾಡಲು ಬಂದಿರುವುದು ಖುಷಿ. ಧೀರೆನ್ ಬಹಳ ಕಷ್ಟಪಟ್ಟು ಕೆಲಸ ಮಾಡುವ ಹುಡ್ಗ. ಕಳೆದ ಐದಾರು ತಿಂಗಳಿನಿಂದ ಈ ಚಇಳಿಸಿಕೊಂಡೆ ಬಹಳ ವರ್ಕೌಟ್ ಮಾಡಿದ್ದಾರೆ. ಈ ಸಿನಿಮಾಗಾಗಿ ಐದಾರು ಕೆಜಿ ಸಣ್ಣ ಆಗಿದ್ದಾರೆ ಎಂದರು.
 
ನಾಯಕ ಧೀರೆನ್ ಮಾತನಾಡಿ, ಇದು ನನಗೆ ಪುನರ್‌ ಜನ್ಮ ಬಂದಾಗೆ. ಆಂಟಿ-ಮಾಮನಿಗೆ ಎಷ್ಟೇ ಧನ್ಯವಾದ ಹೇಳಿದರು ಕಡಿಮೆನೇ. ನಾನು ಅವರಿಗೆ ಕಥೆ ಇದು ಎಂದು ಕೇಳಿದಾಗ ಅವರು ಡೈರೆಕ್ಟರ್‌ ಎಲ್ಲವೂ ಕೇಳಿ ಸಿನಿಮಾ ಮಾಡುತ್ತೇನೆ ಎಂದರು. ನವೆಂಬರ್‌ 28 ನಾನು ನನ್ನ ಜೀವನದಲ್ಲಿ ಮರೆಯುವುದಿಲ್ಲ. ನನ್ನಲ್ಲಿ ಆದ ಫೀಲಿಂಗ್‌ ಮರೆಯಲು ಆಗುವುದಿಲ್ಲ. ಇದೆಲ್ಲಾ ಕನಸು ಎನಿಸುತ್ತಿದೆ. ನನಗ ಆಂಟಿ-ಮಾಮ ಶಿವ-ಪಾರ್ವತಿ ಇದ್ದಂತೆ.  ಸಾಕಷ್ಟು ಸಿನಿಮಾಗಳು ಗೀತಾ ಪಿಕ್ಚರ್ಸ್‌ನಿಂದ ಬರಲಿದೆ. ಅವರ ಪ್ರೊಡಕ್ಷನ್‌ನಡಿ ನಾನು ಕೆಲಸ ಮಾಡುತ್ತಿರರುವುದು ಖುಷಿಕೊಟ್ಟಿದೆ ಎಂದು ತಿಳಿಸಿದದರು.

ನಾಯಕಿ ಅಮೃತಾ ಪ್ರೇಮ್ ಮಾತನಾಡಿ, ಗೀತಾ ಪಿಕ್ಚರ್ಸ್ ಬ್ಯಾನರ್ ನಡಿ ನಟಿಸಲು ಅವಕಾಶ ಸಿಕ್ಕಿರುವುದು‌ ನನ್ನ ಪುಣ್ಯ. ಶಾಖಾಹಾರಿ ಡೈರೆಕ್ಟರ್ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಇದೆ ಎಂದರು. 

ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, ಹಂತ ಹಂತವಾಗಿ ಕಥೆ,ನಿರೂಪಣೆ, ಕಥಾಂದರದ ಬಗ್ಗೆ ಸಣ್ಣ ತುಣುಕು ರಿಲೀಸ್‌ ಮಾಡುತ್ತೇವೆ. ಇದು ಗಟ್ಟಿ ಕಥೆ. ನನಗೆ ಬಹಳ ಜವಾಬ್ದಾರಿ ಇದೆ. ಇದು ಅಡ್ವೆಂಚರ್ಸ್ ಕ್ರೈಮ್ ಥ್ರಿಲ್ಲರ್. ಈ ಚಿತ್ರದಲ್ಲಿ ಎರಡು ರೀತಿ ಜರ್ನಿ ಇದೆ.‌ ಒಂದು ಕೇಸ್ ಜರ್ನಿ ಇದೆ.  ಪರ್ಸನಲ್ ಇದೆ. ಪಬ್ಬಾರ್ ಜಾಗ. ಚಿತ್ರದ ಮೇನ್ ಕ್ಯಾರೆಕ್ಟರ್. ಇದು ನೈಜ ಘಟನೆ ಕಥೆಯಲ್ಲ ಎಂದು ತಿಳಿಸಿದರು. 

ಶಾಖಾಹಾರಿ ಸಿನಿಮಾದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ತಂಡ ಕೂಡ ಇದೇ ಚಿತ್ರಕ್ಕೂ ದುಡಿಯಲಿದೆ. ಪಬ್ಬಾರ್ ಸಿನಿಮಾಗೆ ವಿಶ್ವಜಿತ್ ರಾವ್ ಕ್ಯಾಮೆರಾ ವರ್ಕ್, ಮಯೂರ್ ಅಂಬೇಕಲ್ಲು ಸಂಗೀತ, ನಿರ್ದೇಶಕ ಸಂದೀಪ್ ಸುಂದರ್ ಅವರೇ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಮುಹೂರ್ತ ಸಮಾರಂಭದಲ್ಲಿ ರಾಮ್ ಕುಮಾರ್‌, ಪೂರ್ಣಿಮಾ ರಾಮ್‌ ಕುಮಾರ್‌, ಧನ್ಯಾ ರಾಮ್.‌ ನಿವೇದಿತಾ ಶಿವರಾಜ್‌ ಕುಮಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೆಟ್ಟೇರಿತು ಗೀತಾ ಪಿಕ್ಚರ್ಸ್ 4ನೇ ಸಿನಿಮಾ..ಧೀರೆನ್-ಅಮೃತಾ ಪ್ರೇಮ್-ಸಂದೀಪ್ ಸುಂಕದ್ ಚಿತ್ರಕ್ಕೆ `ಪಬ್ಬಾರ್` ಟೈಟಲ್ ಫಿಕ್ಸ್ - Chitratara.com
Copyright 2009 chitratara.com Reproduction is forbidden unless authorized. All rights reserved.