ಕನ್ನಡದಲ್ಲಿ ಸಾಕಷ್ಟು ಪ್ರಯೋಗಾತ್ಮಕ ಚಿತ್ರಗಳು ಬರುತ್ತಿರುತ್ತದೆ. ಆ ಸಾಲಿಗೆ " ಒಂದು ಅಂಕದ ಪ್ರಶ್ನೆ " ಸೇರಲಿದೆ. "ಬಡ್ಡಿಸ್", "ರಾನಿ" ಮುಂತಾದ ಚಿತ್ರಗಳಲ್ಲಿ ಸಹನಟನಾಗಿ ನಟಿಸಿದ್ದ ಗಿರೀಶ್ ಹೆಗ್ಡೆ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. ಈ ಹಿಂದೆ "ಲುಂಗಿ", "ಸ್ಟ್ರಾಬೆರಿ" ಹಾಗೂ ಬಿಡುಗಡೆ ಹಂತ ತಲುಪಿರುವ ನೂತನ ಚಿತ್ರವೊಂದನ್ನು ಸೇರಿದಂತೆ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಅರ್ಜುನ್ ಲೂಯಿಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಮಸ್ಥೆ ಎಂಟರ್ ಟೈನರ್ಸ್ ಲಾಂಛನದಲ್ಲಿ ಕಾರ್ಲಿಸ್ ಡಿಕುನ್ಹಾ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ನಾಯಕ ಗಿರೀಶ್ ಹೆಗ್ಡೆ ಅವರ ಹುಟ್ಟುಹಬ್ಬದ ದಿನ ಈ ನೂತನ ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದೆ. ಆ ಮೂಲಕ ನಾಯಕನಿಗೆ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ಇದೊಂದು ಮಂಗಳೂರು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಾಲ್ಪನಿಕ ಕಥೆ. ಕೋಳಿ ಅಂಕದ ಚಟಕ್ಕೆ ಬಿದ್ದ ಯುವಕನ ಕಥೆಯನ್ನು ಕಾಮಿಡಿ, ಲವ್ ಮತ್ತು ಮದರ್ ಸೆಂಟಿಮೆಂಟ್ ಅಂಶಗಳೊಂದಿಗೆ ಹೊಸ ರೀತಿಯ ಕಮರ್ಷಿಯಲ್ ಫಾರ್ಮುಲದೊಂದಿಗೆ ಹೇಳಲಿದ್ದೇವೆ. ನಾನೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದೇನೆ. ಮಂಗಳೂರು, ಉಡುಪಿ ಆಸುಪಾಸಿನಲ್ಲಿ ಜೋಯೆಲ್ ಶಮನ್ ಡಿಸೋಜ ಛಾಯಾಗ್ರಹಣ ಹಾಗೂ ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನವಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಲಿದೆ. ಉಡುಪಿ, ಮಂಗಳೂರು ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಅರ್ಜುನ್ ಲೂವಿಸ್ ತಿಳಿಸಿದ್ದಾರೆ.