ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿರುವ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್ ಅವರೀಗ "SO ಮುತ್ತಣ್ಣ" ಚಿತ್ರಕ್ಕಾಗಿ ಮತ್ತೊಂದು ಅದ್ಭುತ ಗೀತೆ ಬರೆದಿದ್ದಾರೆ. ಪುರಾತನ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಕಾಂತ್ ಹುಣಸೂರು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಪ್ರಣಂ ದೇವರಾಜ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
"ಕಮ್ಮಂಗಿ ನನ್ ಮಗನೇ" ಎಂಬ ಹಾಡನ್ನು ಯೋಗರಾಜ್ ಭಟ್ ಅವರು ಬರೆದಿದ್ದು, ತಮ್ಮ ವಿಶಿಷ್ಟ ಕಂಠದಿಂದ ಜನಪ್ರಿಯರಾಗಿರುವ ಸ್ಯಾಂಡಲ್ವುಡ್ ಅಧ್ಯಕ್ಷ ಖ್ಯಾತಿಯ ನಟ ಶರಣ್ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮಧುರವಾಗಿ ಹಾಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನೀಡಿದ್ದಾರೆ.
ಶನಿವಾರದಂದು ಮಾಲ್ ಆಪ್ ಮೈಸೂರಿನಲ್ಲಿ ಕಮ್ಮಂಗಿ ನನ್ಮಗನೆ ಹಾಡುಗಳನ್ನು ಬಿಡುಗಡೆಗೊಳಿಸಿದ ಗಣ್ಯರು,
ಇದೆ ಸಂಧರ್ಭದಲ್ಲಿ ಗೌಡಗೆರೆ ಚಾಮುಂಡೇಶ್ವರಿ ಬಸಪ್ಪನವರ ಪುಣ್ಯಕ್ಷೇತ್ರದ ಧರ್ಮದರ್ಶಿಗಳಾದ ಮಲ್ಲೇಶ್ ಗುರುಗಳು , ನಿರ್ದೇಶಕ ಪವನ್ ಒಡೆಯರ್ , ರಂಗಾಯಣ ರಘು, ನಿರ್ದೇಶಕ ಶ್ರೀಕಾಂತ್, ನಾಯಕ ಪ್ರಣಂ ದೇವರಾಜ್ , ನಟ ಶರಣ್ ಸೇರಿದಂತೆ ಚಿತ್ರತಂಡ ಉಪಸ್ಥಿತರಿದ್ದರು .