Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಿರೀಟಿ ಚೊಚ್ಚಲ ಚಿತ್ರದ `ಜೂನಿಯರ್`ಸಾಂಗ್ ರಿಲೀಸ್ ಹಾಡಿನಲ್ಲಿ `ಲೇಟ್ಸ್ ಲೀವ್ ಥಿಸ್ ಮೂವೆಂಟ್` ಎಂದ ಕಿರೀಟಿ-ಶ್ರೀಲೀಲಾ
Posted date: 19 Mon, May 2025 10:50:36 PM
ಕಿರೀಟಿ ನಟನೆಯ ಮೊದಲ ಸಿನಿಮಾ ‘ಜೂನಿಯರ್’. ಇತ್ತೀಚಿಗೆ ಬಿಡುಗಡೆ ದಿನಾಂಕ ಘೋಷಣೆ‌ ಮಾಡಿದ್ದ ಚಿತ್ರತಂಡವೀಗ ಮೊದಲ ಹಾಡು ರಿಲೀಸ್ ಮಾಡಿದೆ. ಕನ್ನಡ ತೆಲುಗು ಭಾಷೆಯಲ್ಲಿ ಆದಿತ್ಯ ಮ್ಯೂಸಿಕ್ ಚಾನೆಲ್ ನಲ್ಲಿ ಸಾಂಗ್ ಅನಾವರಣಗೊಂಡಿದೆ.
 
ಜೂನಿಯರ್ ಚಿತ್ರದ ಮೊದಲ ಲೆಟ್ಸ್ ಲಿವ್ ದಿಸ್ ಮೊಮೆಂಟ್ ಎಂಬ ಲಿರಿಕಲ್ ವಿಡಿಯೋ ರಿಲೀಸ್ ಈವೆಂಟ್ ಅನ್ನು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯಿತು. ಸಮಾಂಭಕ್ಕೆ ನಟ ರವಿಚಂದ್ರನ್, ಬಾಹುಬಲಿ ಹಾಗೂ ಆರ್ಆರ್ಆರ್ ಸಿನಿಮಾ ಖ್ಯಾತಿಯ ಕ್ಯಾಮರಾಮ್ಯಾನ್ ಕೆ.ಕೆ.ಸೆಂಥಿಲ್ ಕುಮಾರ್, ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್, ನಿರ್ಮಾಪಕ ರಜನಿ ಕೊರಾಪಾಟಿ, ನಿರ್ದೇಶಕ ರಾಧಾಕೃಷ್ಣ ಸೇರಿ ಚಿತ್ರತಂಡ ಸಾಕ್ಷಿಯಾಗಿತ್ತು.
 
ಈ ವೇಳೆ ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತನಾಡಿ, ರಾಧಾಕೃಷ್ಣ ಅವರ ಹತ್ತಿರ ಒಳ್ಳೆ ಗುಣವಿದೆ. ಅವರು ಕಥೆ ಹೇಳುವಾಗ ಕಿವಿಯಲ್ಲಿ ಪಿಸುಗುಟ್ಟಿದ ರೀತಿ ಇದೆ.‌ ಆ ಕಥೆ ಮನಸ್ಸು ತಟ್ಟುತ್ತದೆ. ಇದು ನಿಮಗೆಲ್ಲಾ ಜೂನಿಯರ್. ನನಗೆ ಮಾತ್ರ ಇದು ಮೈ ಜೂನಿಯರ್. ಇದು ಲಾಂಗ್ ಜರ್ನಿ. ಡಬ್ ಮಾಡುವಾಗ ನೋಡಿದಾಗ ಇದು ಹ್ಯಾಪಿ ಜರ್ನಿ ಎನಿಸಿತು. ಒಂದು ಸಿನಿಮಾ ಎಷ್ಟು ಟೈಮ್ ತೆಗೆದುಕೊಳ್ಳುತ್ತದೆ ಎನ್ನುವುದು ಮುಖ್ಯವಲ್ಲ. ಬದಲಿಗೆ ಹೇಗೆ ಪ್ರೇಕ್ಷಕರನ್ನು ಕುರಿಸುತ್ತದೆ ಎನ್ನುವುದು ಮುಖ್ಯ. ಈ ಹುಡ್ಗ ಕಥೆ ಆರಿಸಿಕೊಳ್ಳುವ ಧೈರ್ಯ ಇದೆ. ತಾನು ಹೀರೋ ಆಗಬೇಕು. ಪಾತ್ರ ಮೇಕಿಂಗ್ , ಮೂಲಕ ಹೀರೋ ಆಗಬೇಕು ಎನ್ನುವುದು ಕಿರೀಟಿಯಲ್ಲಿ ಇದೆ.‌ ನಾನು ಮರೆಯುವುದಲ್ಲ. ಈ ರೀತಿ ಸ್ಟ್ರಿಪ್ ಆಯ್ಕೆ ಮಾಡಿಕೊಳ್ಳುವುದು ಹೊಸಬರು ತುಂಬಾ ಕಡಿಮೆ ಎಂದರು.
 
ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮಾತನಾಡಿ, ಈ ಸಿನಿಮಾದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಕಿರೀಟಿ ಒಳ್ಳೆ ಕಥೆ ಆಯ್ಕೆ ಮಾಡಿದ್ದಾರೆ.‌ ಎಮೋಷನಲ್    ಕಥೆ ಇದೆ. ಲವ್ ಸ್ಟೋರಿ, ಎಮೋಷನಲ್ ಸಿನಿಮಾಗಳ ಮೂಲಕ ನನ್ನ ಜರ್ನಿ ಶುರುವಾಗಿದೆ. ಈ ಹಾಡಿಗೆ ಶ್ರೀಮಣಿ ಸರ್ ತೆಲುಗು ಲಿರಿಕ್ಸ್ ಬರೆದಿದ್ದಾರೆ. ಪವನ್ ಭಟ್ ಕನ್ನಡದಲ್ಲಿ ಹಾಡು ಹಾಡಿದ್ದಾರೆ. ಇಡೀ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಸೆಂಥಿಲ್ ಸರ್ ಈ ಚಿತ್ರಕ್ಕೆ ಕೆಲಸ ಮಾಡಿದ್ದು, ಈ ಚಿತ್ರದ ಬಲ ಅವರು ಎಂದರು.

ನಟ ಕಿರೀಟಿ ಮಾತನಾಡಿ, ಸಿನಿಮಾ ಮೂರು ವರ್ಷ ತಡವಾಗಿದೆ. ಅದಕ್ಕೆ ಕಾರಣ ಫೈಟ್ ಮಾಡುವಾಗವನನಗೆ ಬೆನ್ನು ಇಂಜೂರಿ ಆಗಿತ್ತು. ಅದು ಹೊರತು ಬೇರೆ ಕಾರಣವಿಲ್ಲ. ಸೆಂಥಿಲ್ ಸರ್,  ಡಿಎಸ್ ಪಿ ಸರ್, ವಿಜಯ್ ಸರ್ ಗೆ ಧನ್ಯವಾದ. ರವಿ ಸರ್ ಜೊತೆ ಇಪ್ಪೈದು ದಿನ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದು ನನ್ನ ಪುಣ್ಯ. ಅವರ ಜೊತೆ ತುಂಬಾ ಕಲಿತುಕೊಂಡೆ. ಶ್ರೀಲೀಲಾ, ಜೆನಿಲಿಯಾ ಚಿತ್ರದಲ್ಲಿ ಒಳ್ಳೆ ಮಾತ್ರ ಮಾಡಿದ್ದಾರೆ.
 
ನಿರ್ದೇಶಕ ರಾಧಾಕೃಷ್ಣ ಮಾತನಾಡಿ, ದೊಡ್ಡ ಲೆಜೆಂಡರಿಗಳು ಕೆಲಸ ಮಾಡಿರುವುದು ಜೂನಿಯರ್ ಸೇಫ್ ಎಂದರ್ಥ. ದೇವಿ ಸರ್ ಜೊತೆ ಕೆಲಸ ಮಾಡಿರುವುದು ನೆನಪಿನಲ್ಲಿ ಉಳಿಯುವಂತಹದ್ದು, ಸೆಂಥಿಲ್ ಸರ್, ಸಾಯಿ ಸರ್ ಹಾಗೂ ದೇವಿ ಸರ್ ಕೆಲಸ ಮಾಡಿರುವುದು ವಿಶೇಷ. ಚಿತ್ರದ ಪ್ರತಿ ಫ್ರೇಮ್ ಕೂಡ ಸ್ಪೆಷಲ್ ಅಗಿದೆ‌ ಎಂದು ತಿಳಿಸಿದರು.

ಲೆಟ್ಸ್ ಲೀವ್ ದಿಸ್ ಮೂವೆಂಟ್ ಎಂದು ಕಿರೀಟಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ  ಒದಗಿಸಿರುವ ಹಾಡಿಗೆ ಕನ್ನಡದಲ್ಲಿ ಪವನ್ ಭಟ್ ಸಾಹಿತ್ಯ ಬರೆದಿದ್ದು,‌ ನಕುಲ್ ಅಭಯಂಕರ್ ಧ್ವನಿಯಾಗಿದ್ದಾರೆ.

ಮಾಯಾಬಜಾರ್ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಜೂನಿಯರ್ ಸಿನಿಮಾ ತಯಾರಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಬಹುದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದ ಹೈಲೈಟ್.
 
ಜೂನಿಯರ್ ಸಿನಿಮಾದ ತಾಂತ್ರಿಕ ಬಳಗ ಶ್ರೀಮಂತಿಕೆಯಿಂದ ಕೂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿ ಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾ ಖ್ಯಾತಿಯ ಕೆ ಸೆಂಥಿಲ್ ಕುಮಾರ್ ಕ್ಯಾಮರಾ ವರ್ಕ್, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ಸ್ ಸಾಹಸ ಈ ಸಿನಿಮಾಗಿದೆ. ಸಾಕಷ್ಟು ವಿಶೇಷತೆಯಿಂದ ಕೂಡಿರುವ ಜೂನಿಯರ್ ಜುಲೈ 18ರಂದು ತೆರೆಗಪ್ಪಳಿಸಲಿದೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಿರೀಟಿ ಚೊಚ್ಚಲ ಚಿತ್ರದ `ಜೂನಿಯರ್`ಸಾಂಗ್ ರಿಲೀಸ್ ಹಾಡಿನಲ್ಲಿ `ಲೇಟ್ಸ್ ಲೀವ್ ಥಿಸ್ ಮೂವೆಂಟ್` ಎಂದ ಕಿರೀಟಿ-ಶ್ರೀಲೀಲಾ - Chitratara.com
Copyright 2009 chitratara.com Reproduction is forbidden unless authorized. All rights reserved.