Chief Editor
Manohar. R (Manu)
Photo Journalist
chitrataramanu@gmail.com
+91 9845549026
ಟಿವಿಗೂ ಮೊದಲೇ ನೋಡಿ `ಸರಿಗಮಪ` ಗ್ರ್ಯಾಂಡ್ ಫಿನಾಲೆ: zee5ಲೈವ್ ಸ್ಟ್ರೀಮ್ ಇಲ್ಲಿ ನೋಡಿ! ಬಹುಮಾನ ನಿಮ್ಮದಾಗಿಸಿಕೊಳ್ಳಿ
Posted date: 29 Thu, May 2025 11:52:36 AM
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ನಾಟಕದ ಅತಿದೊಡ್ಡ ಸಿಂಗಿಂಗ್ ರಿಯಾಲಿಟಿ ಶೋ `ಸ ರಿ ಗ ಮ ಪ` ಗ್ರ್ಯಾಂಡ್ ಫಿನಾಲ್ ಸಮೀಪಿಸಿದೆ. ಕಂಟೆಸ್ಟೆಂಟ್‌ಗಳು ಸಕಲ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಅಂತಿಮ ಸುತ್ತಿನ ಸ್ಪರ್ಧೆಯು ಅಂತರ್ಜಾಲದಲ್ಲಿ ವಿಡಿಯೊಗಳನ್ನು ನೇರ ಪ್ರಸಾರ ಮಾಡುವ ಹಾಗೂ ಬಹುಭಾಷೆಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ದೇಶದ ಅತಿದೊಡ್ಡ, ಸ್ವದೇಶಿ ಡಿಜಿಟಲ್‌ ವೇದಿಕೆಯಾಗಿರುವ ZEE5ನ ಜನಪ್ರಿಯ ವಾಹಿನಿ ZEE Kannadaದಲ್ಲಿ ಪ್ರಸ್ತಾವಾಗಲಿದೆ. ಮುಂದಿನ ತಿಂಗಳು ಜೂನ್ 05ರಂದು `ಸ ರಿ ಗ ಮ ಪ` ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಅಂತಿಮ ಸುತ್ತಿನ ಸ್ಪರ್ಧೆ ನೋಡಲು ಪ್ರೇಕ್ಷಕ ವರ್ಗ ಕಾತರರದಿಂದ ಕಾಯುತ್ತಿದೆ. ಅವರಿಗೆ ಅನುಕೂಲವಾಗಲೆಂದು `ಝೀ ಕನ್ನಡ`ದಲ್ಲಿ ನೇರ ಪ್ರಸಾರವಾಗುತ್ತಿದೆ ಎಂದು ತಿಳಿಸಲಾಗಿದೆ.
 
ಅಪಾರ ಸಂಖ್ಯೆಯಲ್ಲಿ ಸಂಗೀತ ಪ್ರಿಯ ಪ್ರೇಕ್ಷಕರನ್ನು ಆಕರ್ಷಿಸಿ ಮನರಂಜಿಸಲಿರುವ ಈ ಅಭೂತಪೂರ್ವ ಅವಿಸ್ಮರಣೀಯ ಕಾರ್ಯಕ್ರಮವು zee5 ವೇದಿಕೆಯ ಇತಿಹಾಸದಲ್ಲಿನ ಅತ್ಯಂತ ಮಹತ್ವಾಕಾಂಕ್ಷೆಯ ನೇರ ಪ್ರಸಾರ ಕಾರ್ಯಕ್ರಮಗಳಲ್ಲಿ ಒಂದಾಗಿರಲಿದೆ. ಡಿಜಿಟಲ್ ಲೋಕದಲ್ಲಿ ಈ ಬಗೆಯ ನೇರ ಪ್ರಸಾರದ ಮೊದಲ ಕಾರ್ಯಕ್ರಮವೂ ಇದಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ರೋಚಕ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಇದು ಮುನ್ನುಡಿ ಬರೆಯಬಹುದೆಂದು ವಾಹಿನಿ ತಿಳಿಸಿದೆ. ZEE Kannada ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ `ಸ ರಿ ಗ ಮ ಪ` ಕಾರ್ಯಕ್ರಮವು ರಾಜ್ಯದ ಸಾಂಸ್ಕೃತಿಕ ಲೋಕದಲ್ಲಿ ತನ್ನ ವಿಶಿಷ್ಟ ಛಾಪು ಮೂಡಿಸಿದೆ. ಲಕ್ಷಾಂತರ ಸಂಗೀತ ಪ್ರಿಯರ ಹೃದಯಗಳನ್ನು ಗೆದ್ದಿರುವ ಹೆಗ್ಗಳಿಕೆಯ ಈ ಕಾರ್ಯಕ್ರಮವು ಈಗ ಡಿಜಿಟಲ್‌ ಲೋಕದಲ್ಲೊಂದು ದಾಪುಗಾಲು ಹಾಕುತ್ತಿದೆ. ಟೆಲಿವಿಷನ್‌ನಲ್ಲಿ ಪ್ರಸಾರವಾಗುವ ಮುಂಚೆಯೇ ZEE5 ನಲ್ಲಿ ಪ್ರಸಾರವಾಗಲಿದೆ. ಟಿವಿ ಗೂ ಮುನ್ನ ಈ ಡಿಜಿಟಲ್‌ ವೇದಿಕೆಯಲ್ಲಿ ಮೊದಲ ಬಾರಿಗೆ ಪ್ರಸಾರ ಮಾಡಲಾಗುತ್ತಿದೆ.

ಈ ವಾಹಿನಿಯು ತನ್ನೆಲ್ಲ ಚಂದಾದಾರರಿಗೆ ಈ ಜನಪ್ರಿಯ ಕಾರ್ಯಕ್ರಮದ ಅಂತಿಮ ಸುತ್ತಿನ ಸ್ಪರ್ಧೆಯನ್ನು ಮುಂಚಿತವಾಗಿಯೇ ವೀಕ್ಷಿಸುವ ವಿಶೇಷ ಅವಕಾಶ ಕಲ್ಪಿಸಲಿದೆ. ಈ ಉಪಕ್ರಮವು ಡಿಜಿಟಲ್ ಮನರಂಜನೆಗೆ ಪ್ರಮುಖ ತಾಣವನ್ನಾಗಿ zee5 ವೇದಿಕೆಯ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ. ಸಂಗೀತ ಪ್ರಿಯರು ಈ ತಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸಲು ZEE5, ಈ ಋತುವಿನ "ಅತ್ಯಂತ ಜನಪ್ರಿಯ ಗಾಯಕ"ನ ಆಯ್ಕೆ ಅವಕಾಶವನ್ನೂ ಸಹ ಒದಗಿಸಲಿದೆ. ಮೇ 14 ರಿಂದ ಆರಂಭವಾದ ಮತದಾನದ ಆಯ್ಕೆ ಪ್ರಕ್ರಿಯೆ ಜೂನ್‌ 5 ರಂದು ನಡೆಯಲಿರುವ ಗ್ರ್ಯಾಂಡ್‌ ಫಿನಾಲೆಯ 2 ದಿನ ಮೊದಲು ಕೊನೆಗೊಳ್ಳಲಿದೆ.

ಇನ್ನೂ ಚಂದಾದಾರರು ತಮ್ಮ ಅಚ್ಚುಮೆಚ್ಚಿನ ಸ್ಪರ್ಧಿಗಳಿಗೆ ಮತ ಚಲಾಯಿಸಲು ZEE5 appಗೆ ಲಾಗಿನ್ ಆಗಬಹುದು. ಇದರಲ್ಲಿ ಭಾಗವಹಿಸುವವರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ. ಒಬ್ಬ ಅದೃಷ್ಟಶಾಲಿ ಮತದಾರನು "ಅತ್ಯಂತ ನೆಚ್ಚಿನ ಮತದಾರ" ಅಭಿವಾದನಕ್ಕೂ ಪಾತ್ರವಾಗಬಹುದು. ಅಪರೂಪದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನೂ ಪಡೆಯಬಹುದು.

ಜನಪ್ರಿಯ ಕಾರ್ಯಕ್ರಮ ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿರುವ ಈ ಅಂತಿಮ ಸುತ್ತಿನಲ್ಲಿ ಕನ್ನಡ ಸಂಗೀತ ಲೋಕದ ದಂತಕಥೆಗಳಾಗಿರುವ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಅವರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಸಂಗೀತದ ಬಗೆಗಿನ ಅವರ ಅಪಾರ ಪರಿಣತಿ ಮತ್ತು ವರ್ಚಸ್ಸಿನ ವ್ಯಕ್ತಿತ್ವವು ಅಸಂಖ್ಯಾತ ಮಹತ್ವಾಕಾಂಕ್ಷಿ ಗಾಯಕರನ್ನು ಕೈಹಿಡಿದು ಮುನ್ನಡೆಸಿದೆ. ಅವರ ಉಪಸ್ಥಿತಿಯು ಈ ಕಾರ್ಯಕ್ರಮದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದು, ಸಂಗೀತ ಪ್ರಿಯರನ್ನು ನಿರಂತರವಾಗಿ ಚುಂಬಕದಂತೆ ಸೆಳೆಯುತ್ತಲೇ ಇದೆ.

ZEE5ನ ಮತ್ತು zee ಕನ್ನಡದ ವಹಿವಾಟು ಮುಖ್ಯಸ್ಥ ದೀಪಕ್ ಶ್ರೀರಾಮುಲು ಅವರು ಪ್ರತಿಕ್ರಿಯಿಸಿ, ಝೀ5 ನಲ್ಲಿ ಪ್ರಸಾರವಾಗುವ ಪ್ರಾದೇಶಿಕ ಭಾಷೆಗಳಲ್ಲಿನ ಕಾರ್ಯಕ್ರಮಗಳು ನಮ್ಮ ವಹಿವಾಟು ಬೆಳವಣಿಗೆಯ ಹಾಗೂ ಹೆಚ್ಚೆಚ್ಚು ವೀಕ್ಷಕರನ್ನು ತಲುಪುವುದರ ಪ್ರಮುಖ ಆಧಾರಸ್ತಂಭವಾಗಿ ಮುಂದುವರೆದಿದೆ. ಸಮುದಾಯಗಳನ್ನು ಸಂಪರ್ಕಿಸುವಲ್ಲಿ ಸಂಗೀತವು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಝೀ ಕನ್ನಡದ `ಸ.ರಿ.ಗ.ಮ.ಪ` ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯ ಸಂಭ್ರಮಾಚರಣೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಕರುನಾಡಿನ ಈ ಸಂಗೀತ ಸಂಭ್ರಮವನ್ನು ವಿಶ್ವದಾದ್ಯಂತದ ಪ್ರೇಕ್ಷಕರಿಗೆ ನೇರ ಪ್ರಸಾರ ಮಾಡಲು ನಾವು ಹೆಮ್ಮೆಪಡುತ್ತೇವೆ. ಝೀ5 ನಲ್ಲಿ ಮೊದಲ ಬಾರಿಗೆ ಡಿಜಿಟಲ್‌ ನೇರ ಪ್ರಸಾರದೊಂದಿಗೆ ನಾವು ಪ್ರಾದೇಶಿಕ ಭಾಷೆಗಳಲ್ಲಿನ ಮನರಂಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ. ಇದು ಹಿಂದೆಂದಿಗಿಂತಲೂ ಹೆಚ್ಚು ತನ್ಮಯಗೊಳಿಸುವ, ಪರಸ್ಪರ ಸಂವಹನದ ಮತ್ತು ಈ ಮೊದಲಿಗಿಂತ ಹೆಚ್ಚು ಸುಲಭವಾಗಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಸದವಕಾಶ ಒದಗಿಸಲಿದೆ.

ಜೂನ್‌ 5ರಂದು ರಂದು ZEE5ನಲ್ಲಿ ಮಾತ್ರ ಪ್ರಸಾರವಾಗಲಿರುವ ಕಾರ್ಯಕ್ರಮದಲ್ಲಿ ಪ್ರತಿಭೆ, ಸಂಸ್ಕೃತಿ ಮತ್ತು ಸಮುದಾಯದ ಸುಮಧುರ ಸಂಭ್ರಮಾಚರಣೆಗೆ ನಮ್ಮೊಂದಿಗೆ ಜೊತೆಯಾಗಿರಲು ಮರೆಯಬೇಡಿ. ಇದು ಡಿಜಿಟಲ್ ಕ್ಷೇತ್ರದಲ್ಲಿನ ಈ ಬಗೆಯ ಮೊದಲ ಉಪಕ್ರಮವಾಗಿದ್ದು, ZEE5 ಗೆ ಚಂದಾದಾರರಾಗುವುದರಿಂದ ನಾಡಿನ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷ ಪ್ರವೇಶ ದೊರೆಯುವುದರ ಜೊತೆಗೆ ವೀಕ್ಷಕರಿಗೆ ಹಲವಾರು ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುಬಹುದೆಂದು ತಿಳಿಸಿದೆ. ಹೆಚ್ಚಿನ ಮಾಹಿತಿಗೆ zee5 ಅನ್ನು ಸಾಮಾಜಿಕ ಜಾತಲಾಣದಲ್ಲಿ ಫಾಲೋ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಟಿವಿಗೂ ಮೊದಲೇ ನೋಡಿ `ಸರಿಗಮಪ` ಗ್ರ್ಯಾಂಡ್ ಫಿನಾಲೆ: zee5ಲೈವ್ ಸ್ಟ್ರೀಮ್ ಇಲ್ಲಿ ನೋಡಿ! ಬಹುಮಾನ ನಿಮ್ಮದಾಗಿಸಿಕೊಳ್ಳಿ - Chitratara.com
Copyright 2009 chitratara.com Reproduction is forbidden unless authorized. All rights reserved.